Header Ads
Header Ads
Breaking News

ಸೈಬರ್ ಕ್ರೈಂ ಯುವಜನತೆಗೆ ಮಾರಕ : ಡಾ.ಶಶಿರೇಖಾ

ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಇಲ್ಲಿನ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಘಟಕದಿಂದ ನಡೆದಂತಹ ಸೈಬರ್ ಕ್ರೈಂ ಕುರಿತ ಮಾಹಿತಿ ಕಾರ್ಯಗಾರವನ್ನುದ್ದೇಶಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಉಪನ್ಯಾಸಕಿ ಡಾ. ಶಶಿರೇಖಾ ಮಾತನಾಡಿದರು.
ಜಗತ್ತು ಆಧುನೀಕರಣಗೊಳ್ಳುತ್ತಿದ್ದಂತೆ ತಂತ್ರಜ್ಞಾನ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆಗಳೆರ್ಪಡುತ್ತಿವೆ. ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ಉಪಯೋಗಗಳಾಗುತ್ತಿರುವುದರ ಜೊತೆಗೆ ಅದೆಷ್ಟೋ ರೀತಿಯ ದುಷ್ಪರಿಣಾಮಗಳನ್ನು ಕೂಡಾ ಎದುರಿಸುವಂತಾಗಿದೆ ಎಂದು ಹೇಳಿದರು.


ಇಂದಿನ ದಿನಗಳಲ್ಲಿ ಅದರಲ್ಲೂ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಸೈಬರ್ ಕ್ರೈಂ ಎಂಬಂತಹ ಅಪರಾಧೀ ಕೃತ್ಯ ಬಲು ಬೇಗನೇ ಗಾಢ ಪರಿಣಾಮ ಬೀರುತ್ತಿದೆ. ಈ ಮೂಲಕ ಅದೆಷ್ಟೋ ಹರೆಯದ ವಿದ್ಯಾರ್ಥಿಗಳ ಚಾರಿತ್ರ್ಯ ಹರಣ ಮಾಡುವಂತಹ ಕೃತ್ಯಗಳೂ ನಡೆಯುತ್ತಿವೆ. ಸೈಬರ್ ಕ್ರೈಂ ಕೂಡಾ ಪ್ರಸ್ತುತ ಘಟ್ಟದಲ್ಲಿ ಅಪರಾಧ, ಕೊಲೆ, ದರೋಡೆ ಇಂತಹ ಹೀನಕೃತ್ಯಗಳ ಸಾಲಿಗೆ ಸೇರುತ್ತಿವೆ. ಇದು ವಿದ್ಯಾರ್ಥಿಗಳ ಮನಸ್ಥಿತಿಗೆ ಮಾರಕ. ಹೀಗಾಗಿ ಈ ಅನಾಹುತಕಾರಿ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೇಶವ್ ಟಿ. ಎನ್, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಘಟಕದ ಮುಖ್ಯಸ್ತ ಲಕ್ಮೀನಾರಾಯಣ ಕೆ.ಎಸ್ ಸ್ವಾಗತಿಸಿ, ನಿರೂಪಿಸಿ, ವಂದನಾರ್ಪಣೆಗೈದರು.

Related posts

Leave a Reply