Header Ads
Breaking News

ಸೊರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘ ವಿವಿಧ ಸವಲತ್ತುಗಳಲ್ಲಿ ವಂಚನೆ ಆರೋಪ

ಬಂಟ್ವಾಳ: ಕಳೆದ 18 ತಿಂಗಳಿನಿಂದ ಪ್ರತಿದಿನ 40 ಲೀ. ಹಾಲು ಕೊಡುತ್ತಿದ್ದರೂ ಬಂಟ್ವಾಳ ತಾಲೂಕಿನ ಸೋರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘ ಸದಸ್ಯತ್ವ ನೀಡಲು ನಿರಾಕರಿಸುತ್ತಿದ್ದು, ಪರಿಣಾಮವಾಗಿ ಸರಕಾರದ ಪ್ರೋತ್ಸಾಹಧನ ಸಹಿತ ವಿವಿಧ ಸವಲತ್ತಿನಿಂದ ವಂಚಿತಳಾಗಿದ್ದೇನೆ ಎಂದು ಸ್ಥಳೀಯ ಹೈನುಗಾರಿಕಾ ಕೃಷಿಕ ಲಿಲ್ಲಿ ಮೇರಿ ರೋಡ್ರಿಗಸ್ ಅವರು ಆಳಲು ತೋಡಿಕೊಂಡಿದ್ದಾರೆ. 

ಅವರು ಬಂಟ್ವಾಳ ಪ್ರಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸದಸ್ಯರಾಗಿ ನೋಂದಾಯಿಸಲು ಹಲವು ಬಾರಿ ಅರ್ಜಿ ಮೂಲಕ ಮನವಿ ಸಲ್ಲಿಸಿದರೂ ಸದಸ್ಯತ್ವ ನೀಡಲು ಸತಾಯಿಸುತ್ತಿದ್ದಾರೆ. ಈ ಬಗ್ಗೆ ಸಹಕಾರಿ ಸಂಘದ ಅಧಿಕಾರಿಗಳಿಗೂ ನಿರಂತರ ಅರ್ಜಿಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದರು. ಸುಮಾರು 4.50 ಲಕ್ಷ ರೂ.ಮೌಲ್ಯದ ಹಾಲನ್ನು ಸೋರ್ನಾಡು ಹಾ.ಉ.ಸ.ಸಂಘಕ್ಕೆ ನೀಡುತ್ತಾ ಬಂದಿದ್ದೇನೆ ಆದರೆ ತನ್ನನ್ನ ಉದ್ದೇಶಪೂರ್ವಕವಾಗಿ ಸದಸ್ಯಳನ್ನಾಗಿ ನೋಂದಾಯಿಸದೆ ಸಂಘದ ವಾರ್ಷಿಕ ಧನಸಹಾಯ ನೀಡದೆ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿಯವರು ಅನ್ಯಾಯವೆಸಗಿದ್ದಾರೆ ಎಂದು ದೂರಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಹೈನುಗಾರ ಅಲ್ಬನ್ ಪಿಂಟೋ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *