Header Ads
Header Ads
Breaking News

ಸೋಮೇಶ್ವರ ಉಚ್ಚಿಲದಲ್ಲಿ ತೀವ್ರಗೊಂಡ ಕಡಲ್ಕೊರೆತ ಬೆಟ್ಟಂಪಾಡಿಯಲ್ಲಿ ತೆಂಗಿನ ಮರಗಳು ಸಮುದ್ರಪಾಲು

ಉಳ್ಳಾಲ; ಸತತ ಎರಡು ದಿನಗಳಿಂದ ಬೀಸುತ್ತಿರುವ ಗಾಳಿಯಿಂದಾಗಿ ಕಡಲ್ಕೊರೆತ ಆರಂಭವಾಗಿದ್ದು, ಸೋಮೇಶ್ವರ ಉಚ್ಚಿಲದಲ್ಲಿ ೫೦ ರಷ್ಟು ತೆಂಗು ಹಾಗೂ ಇತರೆ ಮರಗಳು ಸಮುದ್ರಪಾಲಾಗಿದೆ. ಉಚ್ಚಿಲ ಉಳ್ಳಾಲ ಸಂಪರ್ಕಿಸುವ ರಸ್ತೆಗೂ ಸಮುದ್ರದ ಅಲೆಗಳು ಹೊಡೆಯಲು ಆರಂಭಿಸಿ ಸಾರ್ವಜನಿಕ ರಸ್ತೆಯ ಜೊತೆಗೆ ಸಮುದ್ರ ತೀರದ ಹಲವು ಮನೆಗಳು ಅಪಾಯದಂಚಿಗೆ ಸಿಲುಕಿದೆ.ಉಚ್ಚಿಲ, ಸೀರೋಡ್, ಬೆಟ್ಟಂಪಾಡಿ, ಪೆರಿಬೈಲು ಪ್ರದೇಶದಲ್ಲಿ ಸಮುದ್ರದ ಅಲೆಗಳು ಅಪ್ಪಳಿಸಲು ಆರಂಭವಾಗಿದೆ. ಗುರುವಾರ ತಡರಾತ್ರಿಯಿಂದ ಸಮುದ್ರದ ಅಲೆಗಳು ಬಿರುಸುಗೊಂಡು ಸುಮಾರು ಅರ್ಧ ಕಿ.ಮೀ ನಷ್ಟು ಸಮುದ್ರ ಎದುರು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಟ್ಟಂಪಾಡಿ ಪ್ರದೇಶದಲ್ಲಿರುವ ತೆಂಗಿನ ಮರಗಳು ಸಮುದ್ರಪಾಲಾದರೆ, ಪೆರಿಬೈಲು ಸಮೀಪ ಹಲವು ವರ್ಷಗಳ ಹಿಂದಿನ ಪ್ರವಾಸಿಗರು ಕುಳಿತುಕೊಳ್ಳುವ ತಡೆಗೋಡೆಯೊಂದು ಸಂಪೂರ್ಣ ಕುಸಿದುಬಿದ್ದಿದೆ. ಇದೇ ಪ್ರದೇಶದಲ್ಲಿ ರಾತ್ರಿ ಮತ್ತು ಮಧ್ಯಾಹ್ನ ವೇಳೆ ಸಮುದ್ರದ ಅಲೆಗಳು ರಸ್ತೆಗೆ ಅಪ್ಪಳಿಸಲು ಆರಂಭಿಸಿದ್ದು, ಇದರಿಂದ ಉಚ್ಚಿಲದಿಂದ ಉಳ್ಳಾಲ ಕಡೆಗೆ ವಾಹನ ಸವಾರರು ಹೋಗಲು ಸಾಧ್ಯವಾಗಿರಲಿಲ್ಲ.ಕಡಲ್ಕೊರೆತ ಸಂದರ್ಭ ಪೆರಿಬೈಲು ಪ್ರತಿವರ್ಷವೂ ಅನಾಹುತಗಳು ನಡೆಯುತ್ತಲೇ ಇದೆ. ಬೆಟ್ಟಂಪಾಡಿ ಸಮೀಪ ರೆಸಾರ್ಟುಗಳ ರಕ್ಷಣೆಗೆ ಕಲ್ಲು ಹಾಕಲಾಗಿದೆ. ಆದರೆ ಪೆರಿಬೈಲು ಪ್ರದೇಶದಲ್ಲಿ ಈವರೆಗೂ ಕಲ್ಲುಹಾಕುವ ಪ್ರಕ್ರಿಯೆ ನಡೆದಿಲ್ಲ. ವೈಜ್ಞಾನಿಕವಾದ ಶಾಶ್ವತ ಪರಿಹಾರವನ್ನು ಮಾಡಿ ಪೆರಿಬೈಲು ಪ್ರದೇಶವನ್ನು ಉಳಿಸಲು ಜಿಲ್ಲಾಡಳಿತ ಮುಂದಾಗಬೇಕಿದೆ.

Related posts

Leave a Reply