Header Ads
Breaking News

ಸೋಮೇಶ್ವರ ಉಚ್ಚಿಲ ಕಡಲ್ಕೊರೆತಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭ

ಪ್ರತಿ ವರ್ಷವೂ ಮಳೆಗಾಲದ ಸಂದರ್ಭದಲ್ಲಿ ಕಡಲ್ಕೊರೆತಕ್ಕೆ ಸಿಲುಕಿ ಹಲವಾರು ಮನೆಗಳು ಸಮುದ್ರ ಪಾಲಾಗುತ್ತಿದೆ. ಇದನ್ನು ತಡೆಯಲು ಶಾಶ್ವತ ತಡೆಗೋಡೆ ನಿರ್ಮಿಸಲು ಮುಂದಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಪ್ರತಿ ಮಳೆಗಾಲದ ಸಂದರ್ಭದಲ್ಲೂ ಭಾರೀ ಕಡಲ್ಕೊರೆತ ಸಂಭವಿಸುತ್ತಿದ್ದು, ಪ್ರತೀ ಸಂದರ್ಭದಲ್ಲೂ ಸರಾಸರಿ ಇಪ್ಪತ್ತಕ್ಕೂ ಮಿಕ್ಕಿದ ಮನೆಗಳು ಸಮುದ್ರ ಪಾಲಾಗುತ್ತಿದ್ದವು. ಸಮುದ್ರ ಕೊರೆತ ತಡೆಗಾಗಿ 2010 ರಿಂದ ಈವರೆಗೆ ಎಡಿಬಿ ಯೋಜನೆಯಡಿ ಸಮುದ್ರಕ್ಕೆ ಕಲ್ಲು ಹಾಕುವ ಕಾಮಗಾರಿಯು ನಡೆಯುತ್ತಲೇ ಇದೆ. ಆದರೆ ಪ್ರತಿವರ್ಷ ಹಾಕುವ ಕಲ್ಲುಗಳೇ ಸಮುದ್ರದ ಪಾಲಾಗುತ್ತಿದ್ದರೂ, ಕಳೆದ 9 ವರ್ಷಗಳಿಂದ ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. ಇದೀಗ ಶಾಶ್ವತ ತಡೆಗೋಡೆ ನಿರ್ಮಿಸಲು ಇಲಾಖೆ ಮುಂದಾಗಿದ್ದು, ಉಚ್ಚಿಲ ಕಡಲತೀರದಿಂದ ಬಟ್ಟಂಪ್ಪಾಡಿ ವರೆಗೆ ಬರ್ಮ್ಸ್ ಹಾಗೂ ತೀರದುದ್ದಕ್ಕೂ ಕಲ್ಲುಗಳ ತಡೆಗೋಡೆ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ.

ಉಳ್ಳಾಲ ಕಡಲ ತೀರದಿಂದ ಹಿಡಿದು ಸೋಮೇಶ್ವರ ಉಚ್ಚಿಲದ ವರೆಗೆ ಕಡಲು ಕೊರೆತದ ಸಮಸ್ಯೆಯಿದ್ದು, ಇಂಥ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಬ್ರೇಕ್ ವಾಟರ್, ಬರ್ಮ್ಸ್ ಹಾಗೂ ಬಂಡೆಗಳ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತಿತ್ತು. ಆದರೆ ಲಾಕ್ ಡೌನ್ ಬಳಿಕ ಕಾಮಗಾರಿಯನ್ನು ಕೈಗೆತ್ತಿಕೊಂಡ ಕಂಪನಿಯು ಕೆಲಸವನ್ನು ನಿಲ್ಲಿಸಿತ್ತು. ಇದೀಗ ನಿನ್ನೆಯಿಂದ ಕಾಮಗಾರಿಯನ್ನು ಆರಂಭಿಸಿದ್ದಾರೆ. ಇನ್ನು ಈ ಕಾಮಗಾರಿ ಯಾವಾ ಮುಗಿಯುತ್ತದೋ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಕಡಲ ತೀರದ ಜನತೆ.

Related posts

Leave a Reply

Your email address will not be published. Required fields are marked *