Header Ads
Header Ads
Breaking News

ಸೋಮೇಶ್ವರ ವ್ಯಾಪ್ತಿಯಲ್ಲಿ ತಲೆದೋರಿರುವ ತ್ಯಾಜ್ಯ ಸಮಸ್ಯೆ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಂದಾದ ಜಿ.ಪಂ ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ ಹೇಳಿಕೆ

 

ಉಳ್ಳಾಲ: ಸೋಮೇಶ್ವರ ವ್ಯಾಪ್ತಿಯಲ್ಲಿ ತಲೆದೋರಿರುವ ತ್ಯಾಜ್ಯ ಸಮಸ್ಯೆ ನಿರ್ಮೂಲನೆಗೆ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಮತ್ತು ತ್ಯಾಜ್ಯ ವಿಲೇವಾರಿಗೆ ಜಿ.ಪಂ ಮುಂದಾಗಿದ್ದು, ಸಾರ್ವಜನಿಕರ ಒಮ್ಮತದಿಂದ ತೋರಿಸುವ ಸ್ಥಳದಲ್ಲಿ ಘಟಕ ನಿರ್ಮಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಹೇಳಿದ್ದಾರೆ.

ಅವರು ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರುಸಭಾಭವನದಲ್ಲಿ ಗುರುವಾರ ನಡೆದ ಸೋಮೇಶ್ವರ ಗ್ರಾಮ ಪಂಚಾಯತ್ ಇದರ ೨೦೧೭-೧೮ನೇ ಸಾಲಿನ ೧ನೇ ಹಂತದ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್ ಮಾತನಾಡಿ ಘನತ್ಯಾಜ್ಯ ಘಟಕಕ್ಕೆ ಜಾಗವನ್ನು ಗುರುತಿಸಲಾಗಿದೆ ಆದರೆ ಕೆಲವು ಅಡೆತಡೆಗಳಿಂದ ಅದು ಅಸಾಧ್ಯವಾಗಿದೆ. ಶೀಘ್ರವೇ ಎಲ್ಲರ ಒಮ್ಮತ ಪಡೆದ ನಂತರ ಘಟಕ ಸ್ಥಾಪಿಸಲಾಗುವುದು. ಕಾಟುಂಗರಗುಡ್ಡೆ ಬಳಿ ನೀರಿನ ಸಮಸ್ಯೆ ಬಹಳಷ್ಟಿದ್ದು, ಬೋರ್ ನಿರ್ಮಿಸಿದ್ದರೂ ನೀರು ಸಿಕ್ಕಿಲ್ಲ. ಉಪ್ಪು ನೀರಿನ ತೊಂದರೆಯಿಂದಾಗಿ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ. ಆ ಭಾಗದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದರು.
ಪಿಲಾರು ಸಮೀಪ ನೀರು ಹೋಗುವ ದಾರಿಯಲ್ಲಿ ಮನೆ ನಿರ್ಮಿಸಿದ್ದು, ಇದರ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಿದೆ. ಆಧಾರ್ ಕಾರ್ಡು ಮಾಡುವ ಕೇಂದ್ರವನ್ನು ಶೀಘ್ರವೇ ತೆರೆಯಬೇಕು. ಗ್ರಾಮದಲ್ಲಿ ಕೇಂದ್ರವಿಲ್ಲದೆ ಆಧಾರ್ ಮತ್ತು ರೇಷನ್ ಕಾರ್ಡುಗಳಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ . ಬೇರೆ ಗ್ರಾಮದಲ್ಲಿರುವ ಆಧಾರ್ ಕೇಂದ್ರಗಳಲ್ಲಿ ರೂ.೫೦೦ ಪಡೆಯುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಈ ಕುರಿತು ಹಣ ಪಡೆದು ಆಧಾರ್ ನೋಂದಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕಿದೆ. ರಸ್ತೆ ಬದಿಗಳಲ್ಲಿ ನೀರು ಇಕ್ಕಟ್ಟಾಗುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ನಡೆಯುತ್ತಿಲ್ಲ.
ಪೊಲೀಸರಿಗೆ ಅಪರಾಧ ಕೃತ್ಯದ ಕುರಿತು ಮಾಹಿತಿ ನೀಡಿದರೂ , ಠಾಣೆಗೆ ಬಂದು ತಿಳಿಸುವಂತೆ ಹೇಳುತ್ತಾರೆ. ಇದರಿಂದ ಅಪರಾಧಿಗಳು ಪೊಲೀಸರಿಂದ ತಪ್ಪಿಸುವಂತಹ ಸ್ಥಿತಿಯಿದೆ. ಪೊಲೀಸರು ವಿಳಂಬ ನೀತಿ ಅನುಸರಿಸದೆ ನಾಗರಿಕರು ಫೋನಾಯಿಸಿದಾಗ ಶೀಘ್ರವೇ ಸ್ಪಂಧಿಸಬೇಕಿದೆ. ಅಡ್ಕ ಪರಿಸರದಲ್ಲಿ ಅಪರಿಚಿತ ವ್ಯಕ್ತಿಗಳು, ಕಾರು, ಬೈಕುಗಳಲ್ಲಿ ಹೋಗುತ್ತಿರುವುದರಿಂದ ದೇವಸ್ಥಾನಕ್ಕೆ ಹೋಗುವವರಿಗೆ ತೊಂದರೆಯಾಗುತ್ತಿದೆ. ಬೀರಿ ಜಂಕ್ಷನ್ನಿನಲ್ಲಿ ವಾಹನ ದಟ್ಟಣೆಯೂ ಹೆಚ್ಚಿದ್ದು, ಅಲ್ಲಿ ಪೊಲೀಸರನ್ನು ನಿಯೋಜಿಸಬೇಕಿದೆ. ಹಟ್ಟಿಯಿಂದಲೇ ಜಾನುವಾರುಗಳನ್ನು ಕಳವುಗೈಯ್ಯುತ್ತಿದ್ದರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ. ಕಳ್ಳರನ್ನು ಪತ್ತೆಹಚ್ಚುವ ಕೆಲಸವನ್ನು ಮಾಡುತ್ತಿಲ್ಲ. ಸಾಲ ಪಡೆದು ಜಾನುವಾರು ಸಾಕುವವರಿಗೆ ಇಂತಹ ಘಟನೆಗಳು ಮರುಕಳಿಸುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಎಂಬ ಆಗ್ರಹ ಗ್ರಾಮಸ್ಥರಿಂದ ಕೇಳಿಬಂತು.
ನೋಡೆಲ್ ಅಧಿಕಾರಿಯಾಗಿ ಶೀಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಶ್ಯಾಮಲಾ, ಉಪಾಧ್ಯಕ್ಷೆ ಸುಶೀಲಾ ಎಸ್ ನಾಯಕ್, ತಾ.ಪಂ ರವಿಶಂಕರ್, ರಾಮಚಂದ್ರ ಕುಂಪಲ, ಅಭಿವೃದ್ಧಿ ಅಧಿಕಾರಿ ಮನೋಹರ್ .ಎನ್ ಗೌಡ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಆರೀಪ್ ಉಳ್ಳಾಲ

Related posts

Leave a Reply