Header Ads
Header Ads
Breaking News

ಸೋರುತ್ತಿರುವ ಬೆಳಪು ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ವಿದ್ಯಾರ್ಥಿಗಳು ಕೊಡೆ ಹಿಡಿದು ಪಾಠ ಕೇಳುವ ಪರಿಸ್ಥಿತಿ


ಕೆ.ಜಿ.ಯಿಂದ ಪಿ.ಜಿ.ವರೆಗೂ ಶಿಕ್ಷಣ ಸಂಸ್ಥೆಗಳ ತವರೂರಾಗುವ ಕನಸು ಕಾಣುತ್ತಿರುವ ಬೆಳಪು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮಳೆಗೆ ಸೊರುತ್ತಿದ್ದು, ವಿದ್ಯಾರ್ಥಿಗಳು ಶಾಲೆಯ ಒಳಗೆ ಕೊಡೆ ಹಿಡಿದುಕೊಂಡು ಪಾಠ ಕೇಳುವ ಸ್ಥಿತಿ ಬಂದೋದಗಿದೆ.
ಅಂದಿನ ಜಿಲ್ಲಾಧಿಕಾರಿ ರೇಜುರವರೇ ಅಧ್ಯಕ್ಷರಾಗಿದ್ದ ನಿರ್ಮಿತಿ ಕೇಂದ್ರದ ಮೂಲಕ ಸರ್ಕಾರದ ಬೊಕ್ಕಸದ ಲಕ್ಷಾಂತರ ರೂಪಾಯಿ ಸುರಿದು ಈ ಶಾಲಾ ಕಟ್ಟಡ ಕಟ್ಟಲಾಗಿತ್ತು. ಆ ವೇಳೆ ಕಾಪು ಕ್ಷೇತ್ರದ ಶಾಸಕರಾಗಿದ್ದ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸಿದ್ದರು. ಉದ್ಘಾಟನೆಗೆ ಬರುವ ವೇಳೆಯಲ್ಲೇ ಸೊರುತ್ತಿದ್ದ ಕಟ್ಟಡದ ಬಗ್ಗೆ ಮಕ್ಕಳ ಪೋಷಕರು ಶಾಸಕರ ಗಮನಕ್ಕೆ ತಂದಿದ್ದರಾದರೂ ಅದನ್ನು ಗಣನೆಗೆ ತರದ ಪರಿಣಾಮ ಅದೇ ಸೊರುತ್ತಿದ್ದ ಕಟ್ಟಡದಲ್ಲೇ ಪಾಠ ಮುಂದುವರಿದಿತ್ತು. ತದನಂತರ ಶಾಲಾ ಪ್ರಮುಖರು ಇಲಾಖಾ ಗಮನಕ್ಕೆ ತಂದಾಗ ಈ ಹೊಸ ಕಟ್ಟಡಕ್ಕೆ ತೇಪೆ ಕಾರ್ಯ ನಡೆಸಿದರಾದರೂ ಪರಿಣಾಮ ಸುಧಾರಣೆಯಾಗದೆ ಕಟ್ಟಡ ಕುಸಿದು ಬೀಳುವ ಹಂತ ತಲುಪಿದೆ ಎನ್ನುತ್ತಾರೆ ಶಾಲಾ ಮುಖ್ಯ ಶಿಕ್ಷಕ ಹೀತೇಶ್ ಭಂಡಾರಿ,
ಸರ್ಕಾರದ ಹಣ ನಿರ್ಮಿತಿ ಕೇಂದ್ರ ಎಂಬ ಗುತ್ತಿಗೆ ಕಂಪನಿಯ ಕಳಪೆ ಕಾಮಗಾರಿಯ ಫಲವಾಗಿ ಬಹಳಷ್ಟು ವರ್ಷಗಳಿಂದ ಅದೇಷ್ಟೋ ಕಟ್ಟಡಗಳ ಕಾಮಗಾರಿ ಹೆಸರಲ್ಲಿ ಪೋಲಾಗುತ್ತಿದ್ದರೂ ಅವರನ್ನು ಕೇಳುವವರೇ ಇಲ್ಲವಾಗಿದೆ. ಮಾದರಿ ಗ್ರಾಮವೆಂಬ ಹಣೆಪಟ್ಟಿ ಹೊತ್ತಿರುವ ಬೆಳಪು ಗ್ರಾಮದಲ್ಲೇ ಈ ರೀತಿಯಾಗಿದ್ದರೂ, ಎಲ್ಲೋ ಮೂಲೆಗಳ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಗ್ರಾ. ಪಂ. ಆಧ್ಯಕ್ಷ ದೇವಿಪ್ರಸಾದ್ ಶೆಟ್ಟಿಯವರಿಗೆ ತಮ್ಮ ಗ್ರಾಮದ ಈ ಬೃಹತ್ ಸಮಸ್ಯೆಯು ಸಮಸ್ಯೆಯಾಗಿ ಕಂಡಿಲ್ಲವೇ ಎಂಬುದು ಮಕ್ಕಳ ಪೋಷಕರ ಮಾತು. ಅಲ್ಲದೆ ಈ ಭಾಗದ ಇಂದಿನ ಶಾಸಕ ವಿನಯಕುಮಾರ್ ಸೊರಕೆ ಅದೆಷ್ಟೋ ಬಾರಿ ಇಲ್ಲಿಗೆ ಭೇಟಿ ನೀಡಿ ಈ ಕಳಪೆ ಕಾಮಗಾರಿಯನ್ನು ಕಣ್ಣಾರೇ ಕಂಡಿದ್ದರೂ ಅದರ ವಿರುದ್ಧ ಏಕೆ ಮಾತೆತ್ತುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.

Related posts

Leave a Reply