Header Ads
Header Ads
Breaking News

ಸೌಂದರ್ಯ ಸ್ಪರ್ಧೆಯಲ್ಲಿ ಎರಡು ಮಕ್ಕಳ ತಾಯಿ : ಮಿಸೆಸ್ ಯುನಿವರ್ಸಲ್ ಆಗಿ ಪದ್ಮಾ

ಸೌಂದರ್ಯ ಸ್ಪರ್ದೆಗಳಲ್ಲಿ ಯುವತಿಯರ ನಡುವೆ ಪೈಪೋಟಿಯೇ ಜಾಸ್ತಿ.. ಅದರಲ್ಲೂ ಮದುವೆಯಾದ ನಂತ್ರ ಸೌಂದರ್ಯ ಸ್ಪರ್ದೆಗಳಲ್ಲಿ ಭಾಗವಹಿಸುವುದು ದೂರದ ಮಾತು. ಆದ್ರೆ ಉಡುಪಿಯ ಎರಡು ಮಕ್ಕಳ ತಾಯಿ ಮಾತ್ರ ಸೌಂದರ್ಯ ಸ್ಪರ್ದೆಯಲ್ಲಿ ಭಾಗವಹಿಸಿ ಮಿಸೆಸೆ ಯುನಿವರ್ಸಲ್ ಗೆ ಆಯ್ಕೆ ಆಗಿದ್ದಾರೆ..ಯಾರಿವರು ? ಇಲ್ಲಿದೆ ಡೀಟೇಲ್ಸ್

 ಈಕೆಗೆ ಆವಾಗ 21ವರ್ಷ ವಯಸ್ಸು. ಅವಾಗಿನ್ನು ಡಿಗ್ರಿ ಕಂಪ್ಲೀಟ್ ಮಾಡೋ ಹೊತ್ತು. ನೋಡೋಕೆ ಸುಂದರವಾಗಿದ್ದವಳಿಗೆ ದೂರದ ಮುಂಬಯಿಯಿಂದ ಒಳ್ಳೆ ಸಂಬಂಧ ಬಂತು. ತಡಮಾಡೋದೇಕೆ ಅಂತಾ ಅಪ್ಪ ಅಮ್ಮ ಮದುವೆ ಮಾಡಿಸೇ ಬಿಟ್ಟಿದ್ದರು.ಬಾಲ್ಯದಲ್ಲಿ ಮಾಡೆಲಿಂಗ್ ಆಗ್ಬೇಕು ಅನ್ನೊ ಕನಸು ಹೊತ್ತವಳಿಗೆ ಪೋಷಕರ ಆಸೆಗೆ ತಣ್ಣೀರು ಹಾಕೋ ಮನಸ್ಸು ಇರಲಿಲ್ಲ.ಮದುವೆ ಆಗಿ ಎರಡು ಮಕ್ಕಳು ಆದ ಮೇಲೆ ಈಕೆ ಇವಾಗ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್ ಯುನಿವರ್ಸಲ್ಗೆ ಆಯ್ಕೆಯಾಗಿದ್ದಾಳೆ. ಇವರ ಹೆಸರು ಪದ್ಮ ಗಡಿಯಾರ್. ಉಡುಪಿಯ ಉದ್ಯಮಿ ಅರುಣ್ ಶೆಣೈ ಮತ್ತು ಅರ್ಚನಾ ಶೆಣೈ ದಂಪತಿಗಳ ಮಗಳು. ಓದಿದ್ದು ಬೆಳೆದಿದ್ದು ಎಲ್ಲಾ ಉಡುಪಿಯಲ್ಲೇ. ಡಿಗ್ರಿ ಮುಗಿಯೋ ಹೊತ್ತಿಗೆ ಮುಂಬಯಿ ಮೂಲದ ಡೆಂಟಿಸ್ಟ್ ಸನಯ್ ಗಡಿಯಾರ್ ಅವರೊಂದಿಗೆ ಮದುವೆಯಾಯ್ತು. ಮದುವೆಯ ನಂತರ ಇವರು ಗಂಡನೊಂದಿಗೆ ದಂತವೈದ್ಯೆಯಾಗಿ ಆಸ್ಟ್ರೇಲಿಯಾಯದ ಬ್ರಿಸ್ಬೇನ್ನಲ್ಲಿ ತನ್ನ ವೃತ್ತಿಯನ್ನು ಆರಂಭಿಸ್ತಾರೆ. ಆ ವೇಳೆ ಇವರಿಗೆ ನೆನಪಿಗೆ ಬಂದಿದ್ದು ಸೌಂದರ್ಯ ಸ್ಪರ್ಧೆ. ಬಾಲ್ಯದಲ್ಲಿ ಮಾಡೆಲಿಂಗ್ ಆಗೋ ಕನಸು ಹೊತ್ತವಳಿಗೆ ಗಂಡನ ಮೂಲಕ ಪ್ರೋತ್ಸಾಹ ಕೂಡಾ ದೊರೆತಿತ್ತು. ದೇಹ ದಂಡಿಸಿ, ತರಬೇತಿ ಪಡೆದು ಆಸ್ಟ್ರೇಲಿಯಾದಲ್ಲಿ ಮಿಸೆಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಪದ್ಮ ಗಡಿಯಾರ್ ವಿಜಯಶಾಲಿಯಾದರು.

ಬಾಲ್ಯದಲ್ಲಿ ಕಟ್ಟ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದು ಬಂದ ಈಕೆಗೆ ಅಮ್ಮ ತುಂಬಾ ಕಟ್ಟು ನಿಟ್ಟಂತೆ. ಹೀಗಾಗಿ ಪೋಷಕರ ಮಾತಿಗೆ ಎದುರು ನಿಲ್ಲದೆ ತನ್ನ ಸಾಧನೆ ಮೆರೆದಿದ್ದು ಮದುವೆ ನಂತರ. ಇದೀಗ ಅಮೇರಿಕಾದ ಮೆಕ್ಸಿಕೋದಲ್ಲಿ ನಡೆಯೋ ಮಿಸೆಸ್ ಯುನಿವರ್ಸಲ್ ಸ್ಪರ್ಧೆಯಲ್ಲಿ 25ದೇಶದ ಸ್ಪರ್ಧಾಳುಗಳೊಂದಿಗೆ ಪದ್ಮ ಸ್ಪರ್ಧೆ ಮಾಡಲಿದ್ದಾರೆ. ಇದೀಗ ಮಗಳ ಸಧನೆಗೆ ತಾಯೊಕೂಡಾ ಕೊಂಡಾದಿದ್ದಾರೆ. ಮಿಸೆಸ್ ಯುನಿವರ್ಸಲ್ ಆಗಿ ಗೆದ್ದು ಬರಲಿ ಅಂತ ಹಾರೈಸಿದ್ದಾರೆ.

ಮದುವೆಯಾದ ಹೊತ್ತಿಗೆ ದಢೂತಿಯಾಗಿದ್ದ ಪದ್ಮ ಸಾಕಷ್ಟು ವರ್ಕೌಟ್ ಮಾಡಿ ರೆಡಿಯಾಗ್ತಿದ್ದಾರೆ. ನನ್ನ ಸಾಧನೆಗೆ ಗಂಡನ ಮನೆಯವರು ಸಾಥ್ ನೀಡಿದ್ದು, ಇವಾಗ ತವರು ಮನೆಯಿಂದಲೂ ಪ್ರೋತ್ಸಾಹ ಸಿಗ್ತಾ ಇರೋದು ಖುಷಿಯಾಗಿದೆ ಎನ್ನುತ್ತಾರೆ ಪದ್ಮ. ಕಳೆದ 11ವರ್ಷದಿಂದ ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪದ್ಮ ಗಡಿಯಾರ್, ಹೆಣ್ಣು ಮನಸ್ಸು ಮಾಡಿದ್ರೆ ಏನು ಬೇಕಾದ್ರು ಸಾಧನೆ ಮಾಡಬಹುದು ಎನ್ನುವುದಕ್ಕೆ ಉತ್ತಮ ಉದಾರಣೆ.

Related posts

Leave a Reply

Your email address will not be published. Required fields are marked *