Header Ads
Header Ads
Header Ads
Breaking News

ಸೌತ್ ಕೆನರಾ ಪೋಟೋ ಗ್ರಾಫರ್‍ಸ್ ಅಸೋಸಿಯೇಶನ್ ಸಂಘಟನೆಯನ್ನು ಇನ್ನಷ್ಟು ಬೆಳೆಸೋಣ ಅಸೋಸಿಯೇಶನ್ ಅಧ್ಯಕ್ಷ ವಿಲ್ಸನ್

ಸಂಘಟನೆ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ಸಂಘಟನೆಗೆ ನಾವು ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಪೋಟೋ ಗ್ರಾಫರ್‍ಸ್ ಅಸೋಸಿಯೇಶನ್‌ನ್ನನ್ನು ಇನ್ನಷ್ಟು ಬೆಳೆಸುವ ಅಗತ್ಯ ಇದೆ ಎಂದು ಸೌತ್ ಕೆನರಾ ಪೋಟೋ ಗ್ರಾಫರ್‍ಸ್ ಅಸೋಸಿಯೇಶನ್ ಅಧ್ಯಕ್ಷ ವಿಲ್ಸನ್ ಹೇಳಿದರು.

ಅವರು ಸುಳ್ಯದಲ್ಲಿ ನಡೆದ ಸುಳ್ಯ ವಲಯ ಪೋಟೋಗ್ರಾಪರ್‍ಸ್ ಅಸೋಸಿಯೇಶನ್‌ನ ಸಭೆಯಲ್ಲಿ ಮಾತಾನಾಡಿದರು. ಇಂದು ಛಾಯಗ್ರಾಹಕ ವೃತ್ತಿಗೆ ಸಮಾಜದಲ್ಲಿ ಅತ್ಯುತ್ತಮ ಸ್ಥಾನಮಾನವಿದ್ದು ಎಲ್ಲಾ ವೃತ್ತಿ ಬಾಂಧವರು ಒಗ್ಗಟ್ಟಿನಿಂದ ಒಂದೇ ಮನೋಭಾವದಿಂದ ದುಡಿಯಬೇಕು.

ನಮ್ಮ ಸಂಘಟನೆಯೊಂದಿಗೆ ಯಾರು ಸೇರಿಕೊಳ್ಳುವುದಿಲ್ಲವೊ ಅಂತವರಿಗೆ ನಾವು ಸಹಕಾರ ನೀಡುವುದು ಬೇಡ ಎಂದು ಹೇಳಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ್ ಸದಸ್ಯರಿಗೆ ಇರುವ ವಿಮೆಯ ಬಗ್ಗೆ ಮಾಹಿತಿ ನೀಡಿದರು. ಸುಳ್ಯ ವಲಯ ಅಧ್ಯಕ್ಷ ಕರುಣಾಕರ ಎಣ್ಣೆಮಜಲು ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಉಪಾಧ್ಯಕ್ಷ ಸುದೇಶ್ ಶೆಟ್ಟಿ, ಜಿಲ್ಲಾ ಪತ್ರಿಕಾ ಪ್ರತಿನಿಧಿ ಸುರೇಶ್,ವಲಯ ಕೋಶಧಿಕಾರಿ ದಿನೇಶ್ ಏನೆಕಲ್ಲು ವಲಯ ಗೌರವಾಧ್ಯಕ್ಷ ಬಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರದಿ: ತೇಜಸ್ ತೋಡಿಕಾನ, ಬೆಳ್ಳಾರೆ

Related posts

Leave a Reply