Header Ads
Header Ads
Breaking News

ಸೌದಿಯ ನಜರನ್‌ನಲ್ಲಿ ಬೆಂಕಿ ದುರಂತ, ಹನ್ನೊಂದು ಜನ ಭಾರತೀಯರ ಸಾವು

ದಕ್ಷಿಣ ಸೌದಿಯ ನಜರನ್ ನಗರದಲ್ಲಿ ಗುರುವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ೧೧ ಜನ ಭಾರತೀಯರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.
ದುರಂತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಜೆಡ್ಡಾದಲ್ಲಿರುವ ಭಾರತ ಕಾನ್ಸಲೇಟ್ ಕಚೇರಿಯಿಂದ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿವೆ. ದುರಂತದ ಬಗ್ಗೆ ಮಾಹಿತಿ ಇದೆ. ಈ ಸಂಬಂಧ ಭಾರತದ ಕಾನ್ಸಲೇಟ್ ಕಚೇರಿ ಜತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ನಮ್ಮ ಕಾನ್ಸಲ್ ಜನರಲ್ ಅವರೂ ನಜರನ್ ಗವರ್ನರ್ ಜತೆ ಮಾತನಾಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

Related posts

Leave a Reply