Header Ads
Header Ads
Breaking News

ಸೌದಿ ಅರೇಬಿಯಾದಲ್ಲಿ ಗೌಜಿ ಗಮ್ಮತ್ ಕುಟುಂಬ ಸಮ್ಮಿಲನ ಕಾರ್ಯಕ್ರಮ

ಸೌದಿ ಅರೇಬಿಯಾ,ದಮ್ಮಾಮ್ ಆನಿವಾಸಿ ಭಾರತೀಯರ ಸಂಘಟನೆಯಾದ ಉದ್ಯಾವರ ಇಸ್ಲಾಮಿಕ್ ಎಜ್ಯುಕೇಶನ್ ಓರ್ಗನೈಶೇಷನ್ ದಮಾಮ್ ಸಂಘಟನೆಯ ವತಿಯಿಂದ ಅಲ್ ಧೀರ ಸಾರ್ಟ್ ಅನಕ್‌ನಲ್ಲಿ “ಗೌಜಿ ಗಮ್ಮತ್ತು” ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಉದ್ಯಾವರ ನಿವಾಸಿಗಳ ಕುಟುಂಬ ಸಮ್ಮಿಲನಕ್ಕೆ ಸಂಘಟನೆಯ ಸ್ಥಾಪಕಾಧ್ಯಕ್ಷ ಹಾಜಿ ಅಬೂಬಕ್ಕರ್ ಮಾಹಿನ್ ರವರು ಧ್ವಜಾರೋಹಣ ಗೈಯುವುದರೊಂದಿಗೆ ಚಾಲನೆ ನೀಡಿದರು.

ಬಳಿಕ ಮೊಹಮ್ಮದ್ ಹನೀಫ್ ಕಜ ಇವರ ಅಧ್ಯಕ್ಷತೆಯಲ್ಲಿ ನಡೆದ ಕುಟುಂಬ ಸಮ್ಮಿಲನದ ಸಭಾ ಕಾರ್ಯಕ್ರಮವನ್ನು ಸಮಾಜ ಸೇವಕ ಬಡವರ ಆಶಾಕಿರಣವಾಗಿರುವ ಪ್ರಖ್ಯಾತ ಉದ್ಯಮಿ ಎಂ ಪಿ ಇಸ್ಮಾಯಿಲ್ ತೂಮಿನಾಡು ರವರು ಚಾಲನೆ ನೀಡಿದರು.ಈ ಸಂದರ್ಭ ವೇದಿಕೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಜೇಶ್ವರ ಪ್ರವಾಸಿ ಒಕ್ಕೂಟದ ಅಧ್ಯಕ್ಷ ಮುನವ್ವರ್ ಆಹ್ಮದ್ ಮಾತನಾಡಿ  ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರಲ್ಲಿ ನಾನು ಅತೀವ ಸಂತೋಷನಾಗಿದ್ದೇನೆ. ಕಳೆದ ೨೮ ವರ್ಷಗಳ ಕಾಲಾವಧಿಯಲ್ಲಿ ದಮ್ಮಾಮ್ ಇಸ್ಲಾಮಿಕ್ ಎಜ್ಯುಕೆಶನ್ ಓರ್ಗನೈಶೇಷನ್ ಉದ್ಯಾವರ ಪರಿಸರದ ಹಲವಾರು ವಿದ್ಯಾಸಂಸ್ಥೆಗಳಿಗೆ, ವಿದ್ಯಾರ್ಥಿಗಳಿಗೆ ಸಹಾಯವನ್ನು ಒದಗಿಸಿ ಪ್ರೋತ್ಸಾಹವನ್ನು ನೀಡತ್ತಾ ಬಂದಿದೆ. ಇಂತಹ ಮಹತ್ತರವಾದ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರ ಸೇವೆ ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭ ವೇದಿಕೆಯಲ್ಲಿ ಸಮಾಜ ಸೇವೆಯಲ್ಲಿ ಸಕ್ರಿಯನಾಗಿರುವ ಉದ್ಯಾವರ ನಿವಾಸಿ ಹಾಗೂ ಸೌದಿ ಅರೇಬಿಯಾದ ಉದ್ಯಮಿಯಾಗಿರುವ ಅಬ್ದುಲ್ ಲತೀಫ್ ಬಾಬಾ ರವರಿಗೆ ಉದ್ಯಾವರ ಇಸ್ಲಾಮಿಕ್ ಎಜ್ಯುಕೇಶನ್ ಓರ್ಗನೈಶೇಷನ್ ಸಂಘಟನೆಯ ವತಿಯಿಂದ ನೀಡಲಾಗುತ್ತಿರುವ ಅತ್ಯುತ್ತಮ ಸಮಾಜ ಸೇವಾ ಪ್ರಶಶ್ತಿಯನ್ನು ಎಂ ಪಿ ಇಸ್ಮಾಯಿಲ್ ರವರು ಪ್ರಧಾನಗೈದು ಶಾಲು ಹೊದಿಸಿ ಅಭಿನಂದಿಸಿದರು.
ಬಳಿಕ ಅದೇ ವೇದಿಕೆಯಲ್ಲಿ ಸಂಘಟನೆಯ ಸ್ಥಾಪಕಾಧ್ಯಕ್ಷ ಕಾರ್ಯಕ್ರಮಕ್ಕೆ ಉದ್ಯಾವರದಿಂದ ಅತಿಥಿಯಾಗಿ ಆಗಮಿಸಿದ ಅಬೂಬಕ್ಕರ್ ಮಾಹಿನ್ ಹಾಜಿಯವರನ್ನು ಕೂಡಾ ಸಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಬಳಿಕ ಸಂಘಟನೆಯ ವತಿಯಿಂದ ಕುಂಜತ್ತೂರು ಹೈಗ್ಲೋದಿ ಪರಿಸರದಲ್ಲಿ ಖರೀದಿಸಲಾದ ಸ್ಥಳದಲ್ಲಿ ಅಪಾರ್ಟ್ ಮೆಂಟ್ ನಿರ್ಮಿಸಲು ಯೋಜನೆಯ ನಕ್ಷೆಯನ್ನು ಅನಾವರಣ ಗೊಳಿಸಲಾಯಿತು. ಬಳಿಕ ನಡೆದ ಕುಟುಂಬ ಕ್ರೀಡೆಯಲ್ಲಿ ಕ್ರಿಕೆಟ್, ಫುಟ್ಬಾಲ್, ಹಗ್ಗ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ,ಲಗೋರಿ ಸೇರಿದರನ್ನು ರಂಜಿಸಿತು. ಮಕ್ಕಳಿಗಾಗಿ ಬಣ್ಣ ಬಳಿಯುವ ಸ್ಪರ್ಧೆ, ಓಟ, ಬಾಸ್ಕೆಟ್ ಬಾಲ್ ಆಟಗಳನ್ನು ಆಯೋಜಿಸಲಾಗಿತ್ತು. ಅದೇ ರೀತಿ ಮಹಿಳೆಯರಿಗಾಗಿ ಮದರಂಗಿ ಹಚ್ಚುವ ಸ್ಪರ್ಧೆ ಹಾಗೂ ಹಗ್ಗ ಜಗ್ಗಾಟ ನಡೆಯಿತು.

ಕುಟುಂಬ ಸಮ್ಮಿಲನದ ಮೈದಾನದಲ್ಲಿ ಬೆಂಡಿ, ಎಂಜಿ ಮಿಠಾಯಿ, ಬಲೂನ್, ಚುಕ್ಕಿ, ಪೋಡಿ, ಬಾಳೆಹಣ್ಣುಗಳ ಗೂಡಂಗಡಿಗಳು ಎಲ್ಲರ ಮನ ಸೆಳೆದವು.ಕ್ರೀಡೆಗಳಲ್ಲಿ ವಿಜೇತರಾದ ಬ್ಲೂ ರೇಂಜರ್ಸ್ ಜುಬೈಲ್ ತಂಡ ಬಹುಮಾನವನ್ನು ಸ್ವೀಕರಿಸಿದರು. ಕ್ರೀಡೆಯಲ್ಲಿ ರಿಯಾದ್, ಖೋಬರ್, ದಮ್ಮಾಮ್ ಹಾಗೂ ಜುಬೈಲ್ ನಲ್ಲಿರುವ ಸಂಘಟನೆಯ ಕಾರ್ಯಕರ್ತರ ತಂಡಗಳು ಕೂಡಾ ಕ್ರೀಡೆಯಲ್ಲಿ ಬಾಗವಹಿಸಿತು.

ಇದರಂತೆ ಈ ಸಲ ತಮ್ಮ ೨೮ ವಾರ್ಷಿಕೋತ್ಸವದ ಅಂಗವಾಗಿ ಗೌಜಿ ಗಮ್ಮತ್ ಸೀಸನ್ 2ಎಂಬ ಹೆಸರಿನಲ್ಲಿ ಕುಟುಂಬ ಸಮ್ಮಿಲನವನ್ನು ಹಮ್ಮಿಕೊಂಡಿತ್ತು. ಹಾರಿಸ್ ಕಜೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಝೀರ್ ಆಹ್ಮದ್ ಶಾಫಿ ಮೊದಲಾದವರು ಕಾರ್ಯಕ್ರಮಕ್ಕೆ ಮುಂದಾಳತ್ವ ನೀಡಿದರು

ಈ ಸಂದರ್ಭ ವೇದಿಕೆಯಲ್ಲಿ ಸೌದಿ ಅರೇಬಿಯಾದ ಕೆ ಎಂ ಸಿ ಸಿ ಮಂಜೇಶ್ವರ ವಲಯಾಧ್ಯಕ್ಷ ಬಶಿರ್ ಮದಕ, , ಉದ್ಯಮಿಗಳಾದ ಅಮೀರ್ ಅಬ್ಬಾಸ್, ಖಾದರ್ ಸೂಫಿ, ಸಮನ್ಸ್ ಚೇಯರ್ ಮ್ಯಾನ್ ಶೇಖ್ ಬೇಕೂರು, ಎಲ್ ಪಿ ಅಧ್ಯಕ್ಷ ಶಮೀರ್ ಹೊಸಂಗಡಿ,
ಯೋಜನೆಯ ಸಂಯೋಜಕರಾದ ನಿಝಾರ್ ಬಾತಿನ್, ಬಶೀರ್ ಝಮಿಲ್, ಖಾದರ್ ಶಹೀರ್ ಕರೋಡ, ರಾಝಿಕ್. ಆಸಿಫ್ ಕೆ ಕೆ, ನೌಶಾದ್, ಆಸಿಫ್, ನಿಝಾರ್ ಗುಡ್ಡ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply