Header Ads
Breaking News

ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿದ್ದ ಶೇಖ್ ಮುಹಮ್ಮದ್ ವ್ಯಕ್ತಿ ಮರಳಿ ತವರೂರಿಗೆ

ಸೌದಿ ಅರೇಬಿಯಾದ ಖಮೀಸ್ ಮುಶೈತ್ ಎಂಬಲ್ಲಿ ಕಳೆದ ಸುಮಾರು ಎರಡು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೂಲತಃ ಹೈದರಾಬಾದ್ (ತೆಲಂಗಾಣ) ನಿವಾಸಿ ಶೇಖ್ ಮುಹಮ್ಮದ್ ಎಂಬವರನ್ನು , ಕೆ.ಸಿ.ಎಫ್ ಸಾಂತ್ವನ ತಂಡದ ನಾಯಕರು ಸಂಪರ್ಕಿಸಿ, ಅವರಿಗೆ ಬೇಕಾಗಿರುವ ಎಲ್ಲಾ ರೀತಿಯ ಆರೋಗ್ಯ, ಸಲಹೆ, ಆರೈಕೆಯನ್ನು ಮಾಡಿ ಕೊನೆಗೂ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.

ಈ ಒಂದು ಸಾಂತ್ವನ ಸೇವೆಗೆ ಕೆ.ಸಿ.ಎಫ್ ಖಮೀಸ್ ಮುಶೈತ್ ಸೆಕ್ಟರ್ ನಾಯಕರಾದ ಜನಾಬ್ ಅಬ್ದುಲ್ ರಝಾಕ್ ಬನ್ನೂರ್ ಹಾಗೂ ಸಲ್ಮಾನ್ ಚಿಕ್ಕಮಗಳೂರು, ಖಾಲಿದ್ ಕಬಕ, ಇಕ್ಬಾಲ್ ಮದನಿ ಪಾವೂರು, ಕೆ.ಸಿ.ಎಫ್ ಮದೀನಾ ಸಾಂತ್ವನ ವಿಭಾಗದ ನಾಯಕರಾದ ಅಬ್ದುಲ್ ರಝಾಕ್ ಉಳ್ಳಾಲ್ ಸಹಿತವಿರುವ ತಂಡ. ನಡೆಯಲು ಸಾಧ್ಯವಾಗದ ಶೇಖ್ ಮುಹಮ್ಮದ್ ರವರನ್ನು ಜಿದ್ದಾ ವಿಮಾನ ನಿಲ್ದಾಣ ಮೂಲಕ ಪ್ರತ್ಯೇಕ ಆಸನದ ಸೌಕರ್ಯವನ್ನು ಏರ್ಪಡಿಸಿ ತಾಯ್ನಾಡಿಗೆ ಕಳುಹಿಸಲು ಯಶಸ್ವಿಯಾಗಿದ್ದಾರೆ.ಈ ಮೂಲಕ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕೆ.ಸಿ.ಎಫ್ ನೇತೃತ್ವದಲ್ಲಿ, ಕನ್ನಡಿಗರಲ್ಲದೆ ಇತರ ರಾಜ್ಯದ ಅನಿವಾಸಿಗರಿಗೂ ತನ್ನ ಸಾಂತ್ವನ ಸೇವೆಯ ಪುಷ್ಟಿಯನ್ನು ನೀಡುತ್ತಾ ಕೆ.ಸಿ.ಎಫ್ ನ ಕಾರ್ಯಾಚರಣೆಯನ್ನು ಯಾವುದೇ ಭೇದವಿಲ್ಲದೆ ಎಲ್ಲಾ ಕಾರ್ಯಕ್ಷೇತ್ರಗಳಿಗೆ ಮೀಸಲಿಟ್ಟಿದ್ದು ಹೆಮ್ಮೆಯ ವಿಚಾರ ಎಂದು ಕೆ.ಸಿ.ಎಫ್ ಖಮೀಸ್ ಮುಶೈತ್ ಸೆಕ್ಟರ್ ಅದ್ಯಕ್ಷರಾದ ಅಬ್ದುಲ್ ರಝಾಕ್ ಬನ್ನೂರು ಈ ಕುರಿತು ಅಭಿಪ್ರಾಯ ಪಟ್ಟಿದ್ದಾರೆ.

 

Related posts

Leave a Reply

Your email address will not be published. Required fields are marked *