Header Ads
Header Ads
Breaking News

ಸೌರಮಂಡಲದ ವಿಸ್ಮಯಗಳ ವೀಕ್ಷಣೆಗೆ ಚಾಲನೆ

ಸುವರ್ಣ ವರ್ಷಾಚರಣೆ ಮಾಡುತ್ತಿರುವ ಬಂಟ್ವಾಳದ ರೋಟರಿ ಕ್ಲಬ್‌ನ ಅಧ್ಯಕ್ಷ ಮಂಜುನಾಥ ಆಚಾರ್ಯ ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಈಗಾಗಲೇ ಕಾರ್ಯಗತಗೊಳಿಸಿದ್ದಾರೆ. ಆ ಪೈಕಿ ಅತ್ಯಂತ ವಿಶಿಷ್ಠವಾದುದು ಶಾಲಾ ಅಂಗಣದಲ್ಲಿ ತಾರಾಲಯ ವೀಕ್ಷಣೆ. ಮನೋರಂಜನೆಯೊಂದಿಗೆ ಶಿಕ್ಷಣ ನೀಡಬೇಕು, ಪುಸ್ತಕದಲ್ಲಿ ಓದಿ ತಿಳಿದುಕೊಳ್ಳುವುದಕ್ಕಿಂತ, ಸ್ವತಃ ಅವುಗಳನ್ನು ನೋಡಿ ಅನುಭವಿಸಿದರೆ ವಿದ್ಯಾರ್ಥಿಗಳ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎನ್ನುವ ಉದ್ದೇಶವನ್ನಿಟ್ಟುಕೊಂಡು ಬೆಂಗಳೂರಿನಲ್ಲಿ ಪ್ರದರ್ಶನ ನೀಡುತ್ತಿದ್ದ ದುಬಾರಿ ವೆಚ್ಚದ ತ್ರಿಡಿ ತಾರಾಲಯವನ್ನು ಬಂಟ್ವಾಳಕ್ಕೆ ಕರೆಸಿಕೊಂಡಿದ್ದಾರೆ.

ಪಾಣೆಮಂಗಳೂರಿನ ಶಾರಾದ ಪ್ರೌಢಶಾಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಆರ್ಯಭಟ ಮೊಬೈಲ್ ಪ್ಲಾನಿಟೋರಿಯಮ್ ವೀಕ್ಷಣೆಗೆ ಚಾಲನೆ ನೀಡಿದರು. ತಹಶೀಲ್ದಾರ್ ಪುರಂದರ ಹೆಗ್ಡೆ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಕ್ಷೇರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಎನ್., ಪ್ರಕಾಶ್ ಕಾರಂತ, ಡಾ.ರಮೇಶಾನಂದ ಸೋಮಯಾಜಿ, ಶಾಲಾ ಸಂಚಲಕರಾದ ಜನಾಧ್ನ ಭಟ್, ಸುಭೋದ್ ಪ್ರಭು, ಪುರಸಭಾ ಸದಸ್ಯ ಗೋವಿಂದ ಪ್ರಭು ಮತತಿತರ ಪ್ರಮುಖರು ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳು ಬ್ರಹ್ಮಾಂಡ ವಿಸ್ಮಯವನ್ನು ವೀಕ್ಷಿಸಿ ಪುಳಕಿತರಾದರು. ಸೂರ್ಯ ಹೇಗೆ ಬೆಳಕು ನೀಡುತ್ತಾನೆ, ಭೂಮಿ ಮತ್ತಿತರ ಗೃಹಗಳು ಹೇಗೆ ಸೂರ್ಯನ ಸುತ್ತ ಸುತ್ತುತ್ತದೆ, ಗ್ರಹಣಗಳು ಹೇಗೆ ಸಂಭವಿಸುತ್ತದೆ, ಧೂಮಕೇತು, ಉಲ್ಕೆಗಳು ಹೇಗೆ ಅಪ್ಪಳಿಸುತ್ತವೆ, ಶನಿಗ್ರಹಕ್ಕೆ ಮಾತ್ರ ಯಾಕೆ ಉಂಗುರದ ರಚನೆಯಿದೆ ಹೀಗೆ ಸೌರ ಮಂಡಲದ ಅಚ್ಚರಿಗಳ ಬಗ್ಗೆ ತಿಳಿದುಕೊಂಡರು.

Related posts

Leave a Reply