Header Ads
Header Ads
Breaking News

ಸ್ಕೂಟರ್‌ಗೆ ಅಪರಿಚಿತ ವಾಹನ ಡಿಕ್ಕಿ :ನಿಡ್ಲೆಯ ಹತ್ಯಡ್ಕ ಗ್ರಾಮದಲ್ಲಿ ಘಟನೆ

ಪುತ್ತೂರು : ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಸ್ಕೂಟರ್ ಸವಾರರೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲ್ಲೂಕಿನ ಹತ್ಯಡ್ಕ ಗ್ರಾಮದ ನಿಡ್ಲೆ ಸಮೀಪ ಸಂಭವಿಸಿದೆ. ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಗ್ರಾಮದ ಮುದ್ದಿಗೆ ನಿವಾಸಿ ಶೇಷಪ್ಪ ಶೆಟ್ಟಿ ಮೃತಪಟ್ಟವರು.
ಶೇಷಪ್ಪ ಶೆಟ್ಟಿ ಅವರು ಕೊಕ್ಕಡದಿಂದ ಬೆಳ್ತಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಡಿಕ್ಕಿ ಹೊಡೆದ ವಾಹನ ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.
ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಶೇಷಪ್ಪ ಶೆಟ್ಟಿ ಅವರು ಧರಿಸಿದ್ದ ಹೆಲ್ಮೆಟ್ ಹೊಡೆದು ಹೋಗಿ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ

Related posts

Leave a Reply