Header Ads
Breaking News

ಸ್ಕೂಟರ್‍ನೊಂದಿಗೆ ನೀರಿಗೆ ಬಿದ್ದ ಯುವತಿ

ಕಾಸರಗೋಡು ಮಡಿಕೈ ಎಂಬಲ್ಲಿ ಅತಿ ಭೀಕರವಾದ ಹೊಳೆಯ ಹರಿಯುವ ನೀರಿಗೆ ಸ್ಕೂಟರಿನೊಂದಿಗೆ ಬಿದ್ದ ಯುವತಿಯೊಬ್ಬಳನ್ನು ಲಾರಿ ಚಾಲಕನೊಬ್ಬ ಜೀವನ್ಮರಣ ಹೋರಾಟದಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.ಹೊಳೆಯ ನೀರಿನಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತಿದ್ದ ಸ್ಥಳೀಯ ಸಹಕಾರಿ ಬ್ಯಾಂಕ್ ಪಿಗ್ಮಿ ಏಜಂಟ್ ಸುನಿತಾಳನ್ನು ಲಾರಿ ಚಾಲಕನಾಗಿರುವ ಎರಿಕುಲಂ ನಿವಾಸಿ ರಾಜು ಮೇಲಕ್ಕೆತ್ತಿ ಮಾನವೀಯತೆ ಮೆರೆದಿದ್ದಾರೆ. ಅಪಘಾತವನ್ನು ಕಣ್ಣಾರೆ ಕಂಡ ಚಾಲಕ ತನ್ನ ಜೀವವನ್ನು ಕೂಡಾ ಲೆಕ್ಕಿಸದೆಯೇ ಹೊಳೆಗೆ ಹಾರಿ ಯುವತಿಯನ್ನು ರಕ್ಷಿಸಿದ್ದಾರೆ. ಆಕೆಯ ಜೊತೆಯಾಗಿ ಬಿದ್ದ ಸ್ಕೂಟಿಯನ್ನು ಅಗ್ನಿಶಾಮಕ ದಳ ಹಾಗೂ ಊರವರ ಸಹಾಯದಿಂದ ಮೇಲಕ್ಕೆತ್ತಿದ್ದಾರೆ.

Related posts

Leave a Reply

Your email address will not be published. Required fields are marked *