Header Ads
Breaking News

ಸ್ಕೂಟರ್ ಹಾಗೂ ಲಾರಿ ನಡುವೆ ಅಪಘಾತ : ನಿವೃತ್ತ ಸೈನಿಕ ಸ್ಥಳದಲ್ಲೇ ಮೃತ್ಯು

ಕೇರಳ ತಲಪಾಡಿ ರಾ. ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಅಪಘಾತವೊಂದರಲ್ಲಿ ನಿವೃತ ಸೈನಿಕರೊಬ್ಬರು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಉದ್ಯಾವರ ಗುತ್ತು ನಿವಾಸಿ ಹಾಗೂ ನಿವೃತ ಸೈನಿಕರಾಗಿರುವ ದಿನೇಶ್ ಸಾವನ್ನಪ್ಪಿದ ದುರ್ದೈವಿ. ಸೈನಿಕ ನಿವೃತ್ತಿಯ ಬಳಿಕ ಮಂಗಳೂರಿನ ಸಂಸ್ಥೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು ಇಂದು ಬೆಳಿಗ್ಗೆ ಎಂದಿನಂತೆ ಸ್ಕೂಟರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿರುವ ಮಧ್ಯೆ ಕೇರಳ ಭಾಗದಿಂದ ಆಗಮಿಸಿದ ಲಾರಿಯೊಂದು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ದಿನೇಶ್ ದೇಹದ ಮೇಲೆ ಅದೇ ಲಾರಿ ಸಾಗಿದ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲೇ ಸಾವು ಸಂಭವಿಸಿದೆ. ಹಿಂಬದಿ ಸವಾರ ಯತೀಶ್ ಎಂಬವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಮಂಜೇಶ್ವರ ಪೆÇಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿ ಮೃತದೇಹವನ್ನು ಮಂಗಲ್ಪಾಡಿ ಶವಾಗಾರಕ್ಕೆ ಕೊಂಡೊಯ್ದಿದ್ದಾರೆ.

Related posts

Leave a Reply

Your email address will not be published. Required fields are marked *