Header Ads
Header Ads
Header Ads
Breaking News

ಸ್ಕೂಲ್ ಅಫ್ ನರ್ಸಿಂಗ್ ವಿದ್ಯಾರ್ಥಿ ನಿಲಯದ ಉದ್ಘಾಟನೆ ನವೀಕೃತಗೊಂಡ ಶಿಥಿಲಾವಸ್ಥೆಯಲ್ಲಿದ್ದ ವಿದ್ಯಾರ್ಥಿ ನಿಲಯ

ಲಂಬಾರ್ಡ್ ಸ್ಮಾರಕ ಆಸ್ಪತ್ರೆಯ ಸ್ಕೂಲ್ ಅಫ್ ನರ್ಸಿಂಗ್‌ನ ವಿದ್ಯಾರ್ಥಿ ನಿಲಯದ ಉದ್ಘಾಟನಾ ಕಾರ್ಯಕ್ರಮ ಉಡುಪಿಯಲ್ಲಿ ನಡೆಯಿತು.

ಮಿಷನ್ ಕಂಪೌಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯ ಬಿಷಪ್‌ರಾದ ರೆವರೆಂಡ್ ಮೋಹನ್ ಮಾನೋರಾಜ್ ಹಾಗು ಪ್ರಶಾಂತ್ ಜತ್ತನ್ ಉದ್ಘಾಟನೆ ನೆರವೇರಿಸಿದರು. ಸುಮಾರು 50 ವರ್ಷಗಳಷ್ಟು ಹಳೆಯದಾದ ಶಿಥಿಲಾವಸ್ಥೆಯಲ್ಲಿ ಇದ್ದ ಸ್ಕೂಲ್ ಅಫ್ ನರ್ಸಿಂಗ್‌ನ ವಿದ್ಯಾರ್ಥಿ ನಿಲಯವನ್ನು ತ್ವರಿತ ಗತಿಯಲ್ಲಿ ನವೀಕೃತಗೊಳಿಸಲಾಗಿದೆ.

ಮಿಷನ್ ಆಸ್ಪತ್ರೆ ಇತ್ತಿಚ್ಚೆಗೆ ಹಲವಾರು ನವೀಕರಣ ಹಾಗೂ ಅಧುನಿಕರಣ ಪ್ರಕ್ರೀಯೆಗೆ ಒಳಗಾಗಿದೆ. 94 ವರ್ಷಗಳ ಇತಿಹಾಸ ವಿರುವ ಈ ಆಸ್ಪತ್ರೆ ಉಡುಪಿಯ ಜನ ಸಮುದಾಯಕ್ಕೆ ಉತ್ತಮ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿದೆ.

ತಜ್ಞ ಚಿಕಿತ್ಸಕರಾದ ಸುಶೀಲ್ ಜತ್ತನ್ ಅವರು ಈ ಆಸ್ಪತ್ರೆಯ ಜವಬ್ದಾರಿಯನ್ನು ವಹಿಕೊಂಡಿದ್ದಾರೆ. ಮೂಲತಃ ಮಂಗಳೂರಿನವರಾದ ಇವರು 32 ವರ್ಷಗಳ ಕಾಲ ಸಂಯುಕ್ತ ರಾಷ್ಟ್ರದಲ್ಲಿ ಇದ್ದು ಪ್ರಸ್ತುತ ತಾಯಿ ನಾಡಿನಲ್ಲಿ ಸೇವೆಯನ್ನು ನೀಡುತ್ತಿದ್ದಾರೆ. ಉದ್ಘಾಟಿಸಿ ಮಾತನಾಡಿದ ಬಿಷಪ್‌ರು ನಂಬಿಕೆಯಿಂದ ಕಾರ್ಯ ಮಾಡಿದರೆ ನಾವು ಬೆಳೆಯುದರ ಜೋತೆಗೆ ನಾವು ಕೆಲಸ ಮಾಡುವ ಸಂಸ್ಥೆಯೂ ಬೆಳೆಯುತ್ತದೆ. ವಲಯದ 3 ಆಸ್ಪತ್ರೆಗಳು ಅವನತಿಯ ಅಂಚಿನಲ್ಲಿ ಇದ್ದು ಪ್ರಸ್ತುತ ಎಲ್ಲಾ ಆಸ್ಪತ್ರೆಗಳು ಪ್ರಗತಿಯನ್ನು ಕಾಣುತ್ತಿದೆ. ಸುಶೀಲ್ ಜತ್ತನ್ ಅವರು ಈ ಆಸ್ಪತ್ರೆಯ ಜಾವಬ್ದಾರಿಯನ್ನು ವಹಿಕೊಂಡ ಬಳಿಕ ಆಸ್ಪತ್ರೆಯೂ ಆಧುನಿಕರಣವನ್ನು ಹೊಂದುದರ ಜೊತೆಗೆ ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದೆ. ಈ ಸಂಸ್ಥೆಯನ್ನು ಬೆಳೆಸುವುದರಲ್ಲಿ ಎಲ್ಲಾ ಸಿಬಂದಿಗಳು ಕೈಜೋಡಿಸಬೇಕು ಎಂದರು.

ವರದಿ:ಪಲ್ಲವಿ ಸಂತೋಷ್

Related posts

Leave a Reply