Header Ads
Header Ads
Breaking News

ಸ್ಟೂಡೆಂಟ್ಸ್ ವೆಲ್ಪೇರ್ ಕೌನ್ಸಿಲ್‌ನ ಉದ್ಘಾಟನೆ ಋಣಾತ್ಮಕ ಚಿಂತನೆ ಬಿಟ್ಟು ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಿ ಸಂಜಯ್ ಎ. ಭಟ್ ಅಭಿಪ್ರಾಯ

 
ಮೂಡುಬಿದಿರೆ, : ಶ್ರೀ ಮಹಾವೀರ ಕಾಲೇಜಿನ ಪ್ರಸಕ್ತ ಸಾಲಿನ ‘ ಸ್ಟೂಡೆಂಟ್ಸ್ ವೆಲ್ಪೇರ್ ಕೌನ್ಸಿಲ್‌ನ್ನು ಮಂಗಳೂರಿನ ಮೈಂಡ್‌ಫುಲ್ ಕನ್ಸಲ್ಟೆಂಗ್‌ನ ಸ್ಥಾಪಕ ನಿರ್ದೇಶಕ ಸಂಜಯ್ ಎ. ಭಟ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಋಣಾತ್ಮಕ ಚಿಂತನೆ ಬಿಟ್ಟು ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಿ. ಶೈಕ್ಷಣಿಕ ಅರ್ಹತೆಗೆ ಸರಿಸಮವಾಗಿ ವೈಯಕ್ತಿಕ ಮುಂದಾಳತ್ವ , ಭಾವನಾತ್ಮಕ ಬುದ್ಧಿವಂತಿಕೆ ಹಾಗೂ ಆರ್ಥಿಕ ಸಾಕ್ಷರತೆ ಇದ್ದಾಗ ಮಾತ್ರ ಯಶಸ್ಸು ಲಭಿಸಲು ಸಾಧ್ಯ’ ಎಂದು ಹೇಳಿದರು.

ಶಾಸಕ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿ, ಪಿಎಚ್.ಡಿ. ಪದವಿ ಗಳಿಸಿರುವ ಪ್ರಾಧ್ಯಾಪಕ ಡಾ. ಪ್ರವೀಣ್, ಪ.ಪೂ. ಹಾಗೂ ಪದವಿ ತರಗತಿಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿದರು. ಡಾ. ಬಿ. ವಾಮನ್ ಬಾಳಿಗಾ ವಿವರ ನೀಡಿದರು.

ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಳೆ ವಿದ್ಯಾರ್ಥಿ, ಕಾರ್ಪೊರೇಶನ್ ಬ್ಯಾಂಕ್ ನಿವೃತ್ತ ಎಜಿಎಂ ದಿವಾಕರ ಎಂ. ಶೆಣೈ ಭಾಗವಹಿಸಿ, ಕಾಲೇಜಿನ ವಾರ್ಷಿಕಾಂಕ ‘ಸುಮೇರು’ ಬಿಡುಗಡೆಗೊಳಿಸಿದರು. ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ ಅವರು ರಾಷ್ಟ್ರ ಮಟ್ಟದ ವಿಚಾರ ಸಂಕಿರಣದ ಸಂಪಾದಿತ ಹೊತ್ತಗೆಯನ್ನು ಬಿಡುಗಡೆಗೊಳಿಸಿದರು.
ಜತೆ ಕಾರ್ಯದರ್ಶಿ ವಿದ್ಯಾರ್ಥಿ ಕೌನ್ಸಿಲ್‌ನ ಪದಾಧಿಕಾರಿಗಳು, ತರಗತಿ ಪ್ರತಿನಿಧಿಗಳ ವಿವರ ನೀಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಎಚ್.ಸಿ. ದೀಕ್ಷಿತ್ ವಿದ್ಯಾರ್ಥಿನಾಯಕ ಅಶ್ವಿತ್ ಜೀವನ್ ರೊಡ್ರಿಗಸ್ ಅವರಿಗೆ ಕೌನ್ಸಿಲ್ ಧ್ವಜ ಹಸ್ತಾಂತರಿಸಿ ಶುಭ ಹಾರೈಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹರೀಶ್ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಶ್ರೀ ಮಹಾವೀರ ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ. ರಮೇಶ ಭಟ್ ವೇದಿಕೆಯಲ್ಲಿದ್ದರು.

ವರದಿ: ಪ್ರೇಮಶ್ರೀ ಮೂಡಬಿದರೆ

Related posts

Leave a Reply