Header Ads
Header Ads
Breaking News

ಸ್ತಿರಾಸ್ತಿ ವಿವರ ಸಲ್ಲಿಸದ ಐ‌ಎ‌ಎಸ್ ಅಧಿಕಾರಿಗಳು, ಉ. ಪ್ರ.ದಲ್ಲಿ ಹೆಚ್ಚು, ಕರ್ನಾಟಕದಲ್ಲಿ ಎಂಬತ್ತೆರಡು

ಕರ್ನಾಟಕ ವೃಂದದ ೮೨ ಐ‌ಎ‌ಎಸ್ ಅಧಿಕಾರಿಗಳು ೨೦೧೬ನೇ ಸಾಲಿನಲ್ಲಿ ತಮ್ಮ ಸ್ಥಿರಾಸ್ತಿ ವಿವರ ಐಪಿ‌ಆರ್ ಸಲ್ಲಿಸಿಲ್ಲ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಮಾಹಿತಿ ನೀಡಿದೆ.
ವಿವಿಧ ರಾಜ್ಯಗಳ ಒಟ್ಟು ೧,೮೫೬ ಅಧಿಕಾರಿಗಳು ಐಪಿ‌ಆರ್ ಸಲ್ಲಿಸಿಲ್ಲ. ನಿಯಮಗಳ ಪ್ರಕಾರ, ಐ‌ಎ‌ಎಸ್ ಅಧಿಕಾರಿಗಳು ಪ್ರತಿ ವರ್ಷದ ಐಪಿ‌ಆರ್ ಅನ್ನು ಮುಂದಿನ ವರ್ಷದ ಜನವರಿ ಅಂತ್ಯದ ವೇಳೆಗೆ ಸಲ್ಲಿಸಬೇಕು. ಐಪಿ‌ಆರ್ ಸಲ್ಲಿಸದಿದ್ದಲ್ಲಿ ಆ ಅಧಿಕಾರಿಗಳ ಬಡ್ತಿಯನ್ನು ತಡೆಹಿಡಿಯಲು ಅವಕಾಶವಿದೆ’ ಎಂದು ಇಲಾಖೆ ತಿಳಿಸಿದೆ. ರಾಜ್ಯವಾರು ವಿವರ ಮುಂದಿನಂತಿದೆ. ೨೫೫ ಉತ್ತರ ಪ್ರದೇಶ, ೧೫೩ ರಾಜಸ್ತಾನ, ೧೧೮ ಮಧ್ಯಪ್ರದೇಶ,
೧೦೯ ಪಶ್ಚಿಮ ಬಂಗಾಳ.

Related posts

Leave a Reply