Header Ads
Header Ads
Header Ads
Breaking News

ಸ್ಥಳೀಯರಿಗೆ ಉಪಟಳ ನೀಡುತ್ತಿದ ಲಂಗರು ಕೋತಿ ಜಾಲಿಕೋಡಿ ಜನರ ಸಮಸ್ಯೆಗೆ ಸ್ಪಂದಿಸಿದ ಅರಣ್ಯ ಇಲಾಖೆ ಕೋತಿ ಹಿಡಿಯಲು ಹೋದ ಅರಣ್ಯ ಅಧಿಕಾರಿಗಳಿಗೆ ನಿರಾಸೆ

ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಲಿಕೋಡಿಯಲ್ಲಿ ಸ್ಥಳೀಯರಿಗೆ ಉಪಟಳ ನೀಡುತ್ತಿದ್ದ ಲಂಗರು ಜಾತಿಯ ಕೋತಿಯನ್ನು ಹಿಡಿಯಲು ಸಹಾಯಕ ಅರಣ್ಯ ಅಧಿಕಾರಿ, ವಲಯ ಅಧಿಕಾರಿ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಅರಣ್ಯ ರೆಸ್ಕ್ಯೂ ತಂಡವೇ ಪ್ರಯತ್ನಿಸಿದ್ದು, ಕೋತಿ ಹಿಡಿಯುವ ಕಾರ್ಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ಕಪ್ಪು ಮೂತಿಯ ಲಂಗರೂ ಜಾತಿಗೆ ಸೇರಿದ ಮಂಗವೊಂದು ಕಳೆದ ಒಂದು ವರ್ಷದಿಂದ ಈ ಭಾಗದ ಯುವತಿಯರ ಮೇಲೆ ಮತ್ತು ಮಹಿಳೆಯರ ಮೇಲೆ ಏಕಾ‌ಏಕಿ ದಾಳಿ ಮಾಡುತ್ತಿತ್ತು. ಮನೆಯ ಹೊರಗೆ ಸುಮ್ಮನೆ ಕುಳಿತಿದ್ದ ಜನರ ಮೇಲೆ ಹಲ್ಲೆ ನಡೆಸುವ ಕೋತಿಗಳ ಹಾವಳಿಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ವಲಯ ಅರಣ್ಯ ಅಧಿಕಾರಿಗಳಿಗೆ ಮನವಿ ನೀಡಿ ಮನವಿಗೆ ಸ್ಫಂದಿಸದೇ ಇದ್ದ ಕಾರಣ ಅರಣ್ಯ ಇಲಾಖೆ ಕಛೇರಿಗೆ ಮುತ್ತಿಗೆ ಹಾಕಲಾಗಿತ್ತು.

ಈ ಬಗ್ಗೆ ನಮ್ಮ ವಾಹಿನಿಯಲ್ಲಿ ವರದಿಯನ್ನು ಬಿತ್ತರಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಲಂಗರು ಜಾತಿಯ ಕೋತಿಯನ್ನು ಹಿಡಿಯಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ ಅರಣ್ಯ ರೆಸ್ಕ್ಯೂ ತಂಡವೂ ಬಂದಿದ್ದು, ಈ ತಂಡವು ಕಾರ್ಯಚರಣೆಗೆ ಇಳಿದಿತ್ತು. ಮಂಗನನ್ನು ಹಿಡಿದೆ ಬಿಡಬೇಕೆಂದು ಬಂದ ತಂಡದವರು ಬಲೆ ಮತ್ತಿತ್ತರ ಸಾದನಗಳನ್ನು ಬಳಸಿ ಹೊಂಚು ಹಾಕಿ ಕುಳಿತಿದ್ದು, ಆದರೆ ಇವರ ಪ್ರಯತ್ನ ನಿಷ್ಪಲವಾಗಿ ಅಂತಿಮವಾಗಿ ಮಂಗಗಳನ್ನು ಹಿಡಿಯದೇ ವಾಪಸ್ಸಾಗಿದ್ದಾರೆ.

ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply