Header Ads
Header Ads
Breaking News

ಸ್ಥಳೀಯರಿಗೆ ಸಮಸ್ಯೆಯೋಡ್ಡುತ್ತಿದೆ ಚರಂಡಿಯ ಅರೆಬರೆ ಕಾಮಗಾರಿ . ಎಲ್ಲೂರು ಗ್ರಾಮದ ಕುಂಜೂರಿನಲ್ಲಿದೆ ಗ್ರಾ.ಪಂ. ನಿರ್ಲಕ್ಷಿತ ಈ ಕಾಮಗಾರಿ.

ಎಲ್ಲೂರು ಗ್ರಾಮದ ಕುಂಜೂರು ದೇವಸ್ಥಾನದ ಸಮೀಪ ಕಳೆದ ಆರು ತಿಂಗಳ ಹಿಂದೆ ಆರಂಭಿಸಿದ ಕಾಂಕ್ರೆಟ್ ಚರಂಡಿ ಕಾಮಗಾರಿ ಇಂದಿಗೂ ಅಂತ್ಯ ಕಾಣದೆ, ಸ್ಥಳೀಯ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ.ಈ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದಾಗಿ ಸ್ಥಳೀಯ ನಿವಾಸಿ ಶ್ಯಾಮ ದೇವಾಡಿಗ ಆರೋಪಿಸಿದ್ದಾರೆ. ಈ ಚರಂಡಿಯ ಅರೆಬರೆ ಕಾಮಗಾರಿಯಿಂದಾಗಿ ದೇವಸ್ಥಾನಕ್ಕೆ ಸಂಪರ್ಕ ಹೊಂದಿದ ರಸ್ತೆ ಮುಚ್ಚಿ ಹೋಗಿದೆ, ಸ್ಥಳೀಯ ಐದು ಸೆಂರ್ಟ್ಸ್ ನಿವಾಸಿಗಳು ಸಹಿತ ಈ ಭಾಗದ ಜನರೆಲ್ಲಾ ಇದೇ ದಾರಿಯನ್ನು ನೆಚ್ಚಿಕೊಂಡಿದ್ದು, ಇದೀಗ ಕಾಮಗಾರಿಗಾಗಿ ಉಕ್ಕಿನ ಸರಳುಗಳನ್ನು ದಾರಿಯಲ್ಲೇ ನೆಟ್ಟಿದ್ದರಿಂದ ಅಪಾಯದ ಸ್ಥಿತಿ ಇದೆ. ಈ ಸರಳಿನೆಡೆಯಲ್ಲಿ ದನವೊಂದು ಸಿಕ್ಕಿ ಹಾಕಿಕೊಂಡು ಬಹಳ ಶ್ರಮ ವಹಿಸಿ ಅದನ್ನು ಹೊರ ತೆಗೆಯಲಾಗಿತ್ತು. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಸಹಿತ ಗ್ರಾಮ ಪಂಚಾಯಿತಿಗೂ ಲಿಖಿತ ಅರ್ಜಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತ್ ಜನಪ್ರತಿನಿಧಿಗಳು ಸಹಿತ ಅಭಿವೃದ್ಧಿ ಅಧಿಕಾರಿ ತೀವೃ ನಿಗ ವಹಿಸಿ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರ ಸಮಸ್ಯೆಗೆ ಸ್ಪಂಧಿಸುವಂತೆ ಶ್ಯಾಮ ದೇವಾಡಿಗ ಆಗ್ರಹಿಸಿದ್ದಾರೆ.

Related posts

Leave a Reply