Header Ads
Header Ads
Breaking News

ಸ್ಥಳೀಯಾಡಳಿತದಿಂದ ಅನುಮತಿ ಇಲ್ಲದ ನೆವನ, ಅಶ್ರಫ್ ಕಲಾಯಿ ಸ್ಮರಣಾರ್ಥ ಬಸ್ ನಿಲ್ದಾಣ ತೆರವು

ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಅಶ್ರಫ್ ಕಲಾಯಿಯವರ ನೆನಪಿಗಾಗಿ ನಿರ್ಮಿಸಲಾದ ಬಸ್ಸು ತಂಗುದಾಣವನ್ನು ಬಂಟ್ವಾಳ ತಹಶೀಲ್ದಾರ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಕಲಾಯಿಯ ಟಿಪ್ಪು ಸುಲ್ತಾನ್ ಫೌಂಡೇಶನ್ ವತಿಯಿಂದ ಅಮ್ಮುಂಜೆ ಗ್ರಾಮದಲ್ಲಿ ನಿರ್ಮಾಣವಾದ ಬಸ್ಸು ನಿಲ್ದಾಣದ ಪರಿಶೀಲನೆ ನಡೆಸಬೇಕೆಂದು ಜಿಲ್ಲಾಧಿಕಾರಿಯವರು ಆದೇಶ ನೀಡಿದ್ದರು. ಹಿನ್ನೆಲೆಯಲ್ಲಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಗ್ರಾಮಾಂತರ ಠಾಣಾಧಿಕಾರಿ ಉಮೇಶ್, ಎಎಸ್ಪಿ ಡಾ| ಅರುಣ್ ಕುಮಾರ್, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್, ಸಿಬ್ಬಂದಿ ಸುಂದರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪಂಚಾಯತ್‌ನಿಂದ ಯಾವುದೇ ಅನುಮತಿ ಇಲ್ಲದೆ ಇರುವುದು ಗಮನಕ್ಕೆ ಬಂದ ಕಾರಣ ಬಸ್ಸು ನಿಲ್ದಾಣದ ನಾಮಫಲಕವನ್ನು ತೆಗೆದು ಅನುಮತಿ ದೊರೆತ ಬಳಿಕ ನಾಮಫಲಕವನ್ನು ಹಾಕಲು ತಿಳಿಸಿದರು.

Related posts

Leave a Reply