Header Ads
Header Ads
Breaking News

ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು: ಪುತ್ತೂರಿನಲ್ಲಿ ಸಚಿವ ಜಮೀರ್ ಅಹಮ್ಮದ್ ಹೇಳಿಕೆ

ಕರಾವಳಿ ಸೇರಿದಂತೆ ರಾಜ್ಯದ 12 ಜಿಲ್ಲೆಗಳಿಗೆ ಭಟಿ ನೀಡಿದ್ದೇನೆ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಈ 12 ಜಿಲ್ಲೆಗಳಲ್ಲಿ ಕಾಂಗ್ರೆಸ್ ಮೇಲುಗೈ ಪಡೆಯಲಿದೆ ಎಂದು ವಕ್ ಮತ್ತು ಆಹಾರ, ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹ್ಮದ್ ಹೇಳಿದರು.


ಖಾಸಗಿ ಕಾರ್ಯಕ್ರಮ ನಿಮಿತ್ತ ರವಿವಾರ ಪುತ್ತೂರಿಗೆ ಆಗಮಿಸಿದ ಅವರು, ಸಾಲ್ಮರ ಯತೀಂ ಖಾನಾಗೆ ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿದರು. ಎಲ್ಲ ಕಡೆಯೂ ಕಾಂಗ್ರೆಸ್ ಪರವಾದ ಜೋಶ್ ಜನರಲ್ಲಿದೆ. ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಿ ಇದು ಕೆಲಸ ಮಾಡಲಿದೆ. ನಗರಸಭೆ ಪುರಸಭೆ ಚುನಾವಣೆಗಳಲ್ಲೂ ಕಾಂಗ್ರೆಸ್ ಉತ್ತಮ ಸ್ಥಾನ ಪಡೆದುಕೊಳ್ಳಲಿದೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಿಪಿಎಲ್ ಕಾರ್ಡ್‌ದಾರರಿಗೆ 7 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಇದನ್ನು ೫ ಕೆಜಿಗೆ ಇಳಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಪತ್ರ ಬರೆದು, ಇಳಿಕೆ ಮಾಡದಂತೆ ಮನವಿ ಮಾಡಿದ್ದೆ. ಇದರ ಮೇಲೆ ಹೆಚ್ಚುವರಿಯಾಗಿ ಜನಸಾಮಾನ್ಯರಿಗೆ ಇತರ ದವಸ ಧಾನ್ಯ ನೀಡಲು ಅಡ್ಡಿ ಎಲ್ಲ ಎಂದು ತಿಳಿಸಿದ್ದೆ. ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ ಅವರು, 7 ಕೆಜಿ ಅಕ್ಕಿಯನ್ನು ಹಿಂದಿನಂತೆ ಪೂರೈಕೆ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದರು.
ರಾಜ್ಯ ವಕ್ಫ್ ಸದಸ್ಯ ಸಂಶುದ್ದೀನ್ ಸುಳ್ಯ, ಜಿಲ್ಲಾ ವಕ್ಫ್  ಸದಸ್ಯರಾದ ಮುಸ್ತಾಫ ಸುಳ್ಯ, ನೂರುದ್ದೀನ್ ಸಾಲ್ಮರ, ಜಿಲ್ಲಾ ವಕ್ಫ್ಅ ಧ್ಯಕ್ಷ ಕಣಚ್ಚೂರು ಮೋನು, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಯು. ಅಬ್ದುಲ್ಲ ಹಾಜಿ, ಪ್ರ. ಕಾರ್ಯದರ್ಶಿ ಎಲ್.ಟಿ. ಅಬ್ದುಲ್ ರಜಾಕ್ ಹಾಜಿ, ಉಪಾಧ್ಯ್ಯಕ್ಷ ಯಾಕೂಬ್ ಹಾಜಿ ದರ್ಬೆ, ಅನ್ಸಾರುದ್ದೀನ್ ಯತೀಂ ಖಾನದ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ, ಪುತ್ತೂರು ನಾಗರಿಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋಳಿಕಟ್ಟೆ ಇಬ್ರಾಹಿಂ, ಪಿ.ಎಂ. ಇಬ್ರಾಹಿಂ ಪರ್ಪುಂಜ, ಹಂಝ ಕಬಕ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply