Header Ads
Breaking News

ಸ್ಥಳ ಮಹಜರು ವೇಳೆ ಸಮುದ್ರಕ್ಕೆ ಹಾರಿದ ಆರೋಪಿ : ಈಜುಗಾರರ ಹುಡುಕಾಟದಿಂದಾಗಿ ಆರೋಪಿ ಪತ್ತೆ

ಫೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿ ಸ್ಥಳ ಮಹಜರು ವೇಳೆ ಸಮುದ್ರಕ್ಕೆ ಹಾರಿ ಪರಾರಿಯಾಗಲು ಯತ್ನಿಸಿದ ಘಟನೆ ಕಾಸರಗೋಡು ಬಂದರು ಬಳಿ ನಡೆದಿದೆ. ಕುಡ್ಲು ಪರಿಸರದ ಮಹೇಶ್ ಪರಾರಿಯಾಗಲು ಯತ್ನಿಸಿದ ಆರೋಪಿ. ಬಾಲಕಿಯೋರ್ವಳು ಸ್ನಾನ ಮಾಡುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿದಿರುವ ಆರೋಪದಲ್ಲಿ ಈತನನ್ನು ಬಂಧಿಸಿ,ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ಮಹೇಶ್ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್ ಅನ್ನು ನೆಲ್ಲಿಕುನ್ನು ಬಂದರಿನಲ್ಲಿ ಬಂಡೆ ಮಧ್ಯೆ ಬಚ್ಚಿಟ್ಟಿರುವುದಾಗಿ ತಿಳಿಸಿದ್ದ. ಆದ್ದರಿಂದ ಸಾಕ್ಷ್ಯ ಸಂಗ್ರಹಕ್ಕಾಗಿ ಆತನನ್ನುಪೋಲೀಸರು ಬಂದರಿಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಈಜುಗಾರರು ಹುಡುಕಾಟ ನಡೆಸಿ ಆತನನ್ನು ಪತ್ತೆಹಚ್ಚಿದ್ದಾರೆ. ಆರೋಪಿ ಬಳಸಿದ್ದ ಮೊಬೈಲ್ನ್ಪೋ ಅನ್ನು ಪೋಲೀಸರು ವಶಕ್ಕೆ ತೆಗೆದಿದ್ದಾರೆ.

Related posts

Leave a Reply

Your email address will not be published. Required fields are marked *