Header Ads
Breaking News

ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಮಂಗಳೂರು ವತಿಯಿಂದ ವಿಶ್ವ ಬ್ರಾಹ್ಮಣ ಸಮಾವೇಶ

 ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಮಂಗಳೂರು ವತಿಯಿಂದ ವಿಶ್ವ ಬ್ರಾಹ್ಮಣ ಸಮಾವೇಶ ಜನವರಿ 11 ಮತ್ತು 12 ರಂದು ಬೆಂಗಳೂರಿನ ಕೋಡಿಗೆಹಳ್ಳಿಯ ಜ್ಞಾನಶಕ್ತಿ ಮಂಟಪದಲ್ಲಿ ನಡೆಯಲಿದೆ ಎಂದು ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ಅಧ್ಷಕ್ಷರಾದ ಎನ್.ಕೆ ಜಗನ್ನಿವಾಸ ರಾವ್ ತಿಳಿಸಿದ್ರು.ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಾಮಾಜಿಕ ಸಂಸ್ಕಾರವನ್ನುಮ ರೂಪಿಸುವ ಸನಾತನ ಹಿಂದೂ ಸಂಸ್ಕøತಿಯ ಉತ್ತಾನಕ್ಕಾಗಿ ಧರ್ಮಬೋಧೆ, ಪಾಠ ಪ್ರವಚನ, ಹಿರಿಯರಿಂದ ಧಾರ್ಮಿಕ ಸಂದೇಶ, ವಿಚಾರಗೋಷ್ಠಿ, ಕಲಾಲೋಕದ ಅನಾವರಣ, ಜನೋಪಯೋಗಿ ಅನೇಕ ಉತ್ವನ್ನಗಳ ಪದರ್ಶನ ಹಾಗೂ ಮಾರಾಟ ಮಳಿಗೆಗಳು, ಹಾಗೂ ಸಂಪನ್ನೂಲ ವ್ಯಕಿಗಳ ಸಮಾಗಮ, ವಿಚಾರಧಾರೆಗಳ ಚಿಂತನ-ಮಂಥನ, ಹಿರಿಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಹಾಗೂ ಅನೇಕ ಪ್ರತಿಭೆಗಳಗೆ ಪುರಸ್ಕಾರ, ಹಾಗೂ ಇನ್ನೂ ಅನೇಕ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ ಎಂದರು. ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಎಮ ದೇವಾನಂದ ಭಟ್, ಕೋಶಧಿಕಾರಿ ಉದಯ ಕುಮಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *