Header Ads
Header Ads
Header Ads
Breaking News

ಸ್ನೇಹಿತನಂತೆ ಮನೆಗೆ ಬಂದು ಚಿನ್ನ ಕದ್ದ ಭೂಪ

ಕಳೆದ ನವೆಂಬರ್ 9ರಂದು ನಡಿಪಟ್ಣದ ನಿತಿನ್ ಬಂಗೇರ ಎಂಬವರ ಮನೆಯ ಕಾರ್ಯಾಕ್ರಮಕ್ಕೆ ಬಂದು ಚಿನ್ನಾಭರಣ ಕದ್ದು ಪರಾರಿಯಾದಾತ ಕದ್ದ ಮಾಲು ಸಹಿತ ಪೊಲೀಸರ ಅಥಿತಿಯಾಗಿದ್ದಾನೆ.
ಬಂಧಿತ ಮಂಗಳೂರಿನ ಉರ್ವ ಮಾರಿಗುಡಿ ರಸ್ತೆಯ ಶ್ರೀ ಮಹಾಲಸ ಹರಿ ಓಂ ನಿವಾಸ ಅಪಾರ್ಟ್‌ಮೆಂಟ್, ಜೋಯ್ ಕೋಲ್ಡ್ ಡ್ರಿಂಕ್ಸ್ ಪ್ಯಾಕ್ಟರಿ ಬಳಿಯ ನಿವಾಸಿ ಕಾರ್ತಿಕ್ ನಾಯಕ್ (26), ಈತನಿಂದ ಚಿನ್ನದ ಬಳೆ ಸಹಿತ ಉಂಗುರಗಳನ್ನು ವಶ ಪಡಿಸಿಕೊಳ್ಳಲಾಗಿದ್ದು ಇದರ ಮೌಲ್ಯ ಸುಮಾರು ಒಂದು ಲಕ್ಷ ಎಂಭತ್ತು ಸಾವಿರ ಆಗಿದೆ. ಈತನನ್ನು ಮಂಗಳೂರಿನಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ಮಂಗಳೂರಿನ ಬಂಗಾರದಂಗಡಿಯ ವ್ಯಕ್ತಿಯೋರ್ವರಿಗೆ ಮಾರಾಟ ಮಾಡಿದ ಬಗ್ಗೆ ಬಾಯಿ ಬಿಟ್ಟಿದ್ದು, ಈತ ಕಳ್ಳತನವನ್ನೇ ಹವ್ಯಾಸವನ್ನಾಗಿಸಿ ಕೊಂಡ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬಂದಿದೆ, ಈತನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Related posts

Leave a Reply

Your email address will not be published. Required fields are marked *