Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಸ್ನೇಹ ನಿಧಿ ವಾಟ್ಸಾಪ್ ಗ್ರೂಪ್‌ನ ವಿಶೇಷ ಕಾರ್ಯಕ್ರ ಎಫ್.ಸಿ ಕರೋಡಾ ಹೆಲ್ಪ್‌ಲೈನ್ ನೇತ್ರತ್ವ ಮಂಜೇಶ್ವರದಲ್ಲಿ ಬೃಹತ್ ರಕ್ತದಾನ ಶಿಬಿರ

ಸ್ನೇಹ ನಿಧಿ ವಾಟ್ಸಾಪ್ ಗ್ರೂಪ್ ಹಾಗೂ ಎಫ್.ಸಿ ಕರೋಡಾ ಹೆಲ್ಪ್ ಲೈನ್ ಇದರ ಜಂಠಿ ನೇತ್ರತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಮಂಜೇಶ್ವರ ಕರೋಡಾ ಸಿರಾಜುಲ್ ಹುದಾ ಮದ್ರಸಾದಲ್ಲಿ ನಡೆಯಿತು.

ಶಿಬಿರವನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಕ್ತದಾನವೆಂಬುದು ಒಂದು ಜೀವವನ್ನು ಉಳಿಸುವಂತಹ ಮಹತ್ವದ ಕಾರ್ಯವಾಗಿದೆ ಎಂದು ಹೇಳಿ ಸಂಘಟಕರನ್ನು ಪ್ರಶಂಶಿಸಿದರು.

ಶಿಬಿರದಲ್ಲಿ 132 ಮಂದಿ ರಕ್ತದಾನ ಮಾಡಿದರು. ಸಮಾರಂಭದಲ್ಲಿ ಸಮಾಜ ಸೇವಕ ಆಂಬ್ಯುಲೆನ್ಸ್ ಚಾಲಕ ಅಸ್ಲಂ ನನ್ನು ಸನ್ಮಾನಿಸಲಾಯಿತು.

ಸಿರಾಜುಲ್ ಹುದಾ ಮಹಲ್ಲ್ ಸಮಿತಿ ಅಧ್ಯಕ್ಷ ಕುತುಬುದ್ದೀನ್ ತಂಘಳ್ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಪಂಚಾಯತ್ ಸದಸ್ಯ ಮುಸ್ತಫಾ ಉದ್ಯಾವರ, ಪಂಚಾಯತ್ ಸದಸ್ಯರುಗಳಾದ ಅಬ್ದುಲ್ಲ ಗುಡ್ಡಗೇರಿ , ಮುಕ್ತಾರ್ ಉದ್ಯಾವರ, ಮಂಜೇಶ್ವರ ಪ್ರೆಸ್ ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ , ಕಾರ್ಯದರ್ಶಿ ರಹಿಮಾನ್ ಉದ್ಯಾವರ, ಉಪಸ್ತಿತರಿದ್ದರು.

Related posts

Leave a Reply