Header Ads
Header Ads
Breaking News

ಸ್ಪೆಷಲ್ ಒಲಿಂಪಿಕ್ಸ್ ರಾಷ್ಟ್ರೀಯ ಪವರ್ ಲಿಪ್ಟಿಂಗ್ ಕರ್ನಾಟಕ ಕ್ರೀಡಾಪಟುಗಳಿಗೆ 5 ಚಿನ್ನ ಮಹಾರಾಷ್ಟ್ರದ ಕೋಲಾಪುರದಲ್ಲಿ ನಡೆದ ಕ್ರೀಡೆ

 

 

ಇತ್ತೀಚಿಗೆ ಮಹಾರಾಷ್ಟ್ರದ ಕೋಲಾಪುರದಲ್ಲಿ ನಡೆದ ಕ್ರೀಡೆ ಸ್ಪೆಷಲ್ ಒಲಿಂಪಿಕ್ಸ್ ರಾಷ್ಟ್ರೀಯ ಪವರ್ ಲಿಪ್ಟಿಂಗ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳು ೫ ಚಿನ್ನವನ್ನ ತಮ್ಮದಾಗಿಸಿಕೊಂಡಿದ್ದಾರೆ.ಇನ್ನು ಮಂಗಳೂರಿನ ಅಭಿಲಾಷ್, ಪ್ರಜ್ವಲ್ ಲೋಬೋ, ಬಳ್ಳಾರಿ ಯ ಸುಶಾಂತ್ ಬೋಸ್, ವೀಣಾ , ಬೆಂಗಳೂರಿನ ಕನ್ನಿಕಾ ಅವರನ್ನ ನಗರದಲ್ಲಿ ಸನ್ಮಾನಿಸಲಾಯಿತು. ಸ್ಪೆಷಲ್ ಒಲಿಂಪಿಕ್ಸ್ ಭಾರತ- ಕರ್ನಾಟಕದ ಇದರ ಅಧ್ಯಕ್ಷ ಹಾಗೂ ರಾಜ್ಯ ಸಚಿವ ಖಾದರ್ ಹಾಗೂ ಮೇಯರ್ ಕವಿತಾ ಸನಿಲ್ ಅವರು ವಿಜೇತರನ್ನ ಅಭಿನಂದಿಸಿದರು.ಈ ವೇಳೆ ಮಾತನಾಡಿದ ಸಚಿವರು,ಕ್ರೀಡೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡಲಿದೆ ಅಂತಾ ಹೇಳಿದ್ರು.


ಮೇಯರ್ ಕವಿತಾ ಸನಿಲ್ ಮಾತನಾಡಿ, ಪವರ್ ಲಿಪ್ಟಿಂಗ್‌ನಲ್ಲಿ ಏಕಾಗ್ರತೆ ಅತೀ ಮುಖ್ಯವಾಗಿದೆ. ಜಿಲ್ಲೆಯಲ್ಲಿ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ ಅಂತಾ ಹೇಳಿದ್ರು.
ಮಾಜಿ ಮೇಯರ್ ಮಹಾಬಲ ಮಾರ್ಲ, ಸ್ಪೆಷಲ್ ಒಲಿಂಪಿಕ್ಸ್ ಭಾರತ್ – ಕರ್ನಾಟಕ ಏರಿಯ ಡೈರೆಕ್ಟರ್ ವಸಂತಕುಮಾರ್ ಶೆಟ್ಟಿ ಉಪಸ್ಥಿತಿತರಿದ್ದರು.

Related posts

Leave a Reply