Header Ads
Header Ads
Breaking News

ಸ್ಪೇನ್ ಮತ್ತು ಭಾರತ ಏಳು ಒಪ್ಪಂದಗಳಿಗೆ ಸಹಿ

ಅಂತರಜಾಲ ಸುರಕ್ಷತೆ, ನಾಗರಿಕ ವಿಮಾನಯಾನದಲ್ಲಿ ತಂತ್ರಜ್ಞಾನ ಸಹಕಾರ ಸೇರಿದಂತೆ ಏಳು ಒಪ್ಪಂದಗಳಿಗೆ ಭಾರತ ಮತ್ತು ಸ್ಪೇನ್ ಬುಧವಾರ ಸಹಿ ಹಾಕಿವೆ.
ಸ್ಪೇನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು, ಪ್ರಧಾನಿ ಮೇರಿಯಾನೊ ರಜೊಯ್ ಅವರನ್ನು ಮ್ಯಾಡ್ರಿಡ್ನ ಮಾಂಕೊಲ ಪ್ಯಾಲೇಸ್ನಲ್ಲಿ ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಇದಾದ ಬಳಿಕ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಕೈದಿಗಳ ವರ್ಗಾವಣೆ, ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ ಪಡೆಯುವ ಹಕ್ಕು, ಅಂಗಾಂಗ ಕಸಿ, ನವೀಕೃತ ಇಂಧನ ಕ್ಷೇತ್ರದಲ್ಲಿ ಸಹಕಾರ ಹಾಗೂ ಭಾರತದ ವಿದೇಶಾಂಗ ಸೇವಾ ಸಂಸ್ಥೆ ಮತ್ತು ಸ್ಪೇನ್ನ ರಾಜತಾಂತ್ರಿಕ ಅಕಾಡೆಮಿ ನಡುವಿನ ಒಪ್ಪಂದಗಳೂ ಇದರಲ್ಲಿ ಸೇರಿವೆ.
ಸ್ಪೇನ್ನ ಮೂಲಸೌಕರ್ಯ, ಪ್ರವಾಸೋದ್ಯಮ, ಇಂಧನ ಹಾಗೂ ರಕ್ಷಣಾ ಸಾಮಗ್ರಿ ತಯಾರಿಕಾ ಕಂಪೆನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡುವಂತೆ ಮೋದಿ ಅವರು ಇದೇ ಸಂದರ್ಭದಲ್ಲಿ ಆಹ್ವಾನ ನೀಡಿದರು. ಸ್ಪೇನ್ನ ೨೦೦ಕ್ಕೂ ಹೆಚ್ಚು ಕಂಪೆನಿಗಳು ಪ್ರಸ್ತುತ ಭಾರತದಲ್ಲಿ ಪವನ ವಿದ್ಯುತ್, ರಸ್ತೆ ನಿರ್ಮಾಣ, ರೈಲ್ವೆ, ರಕ್ಷಣೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಮೋದಿ ಅವರು ೧೯೮೮ರ ಬಳಿಕ ಸ್ಪೇನ್ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಆಗಿದ್ದಾರೆ.

Related posts

Leave a Reply