Header Ads
Header Ads
Header Ads
Breaking News

ಸ್ಫೋಟಕ ಸಿಡಿದು ಗಾಯಗೊಂಡಿದ್ದ ಬಾಲಕೃಷ್ಣ ಗೌಡ ಮೃತ್ಯು

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಸರಳಿಕಾನ ಎಂಬಲ್ಲಿ ಡಿ.5ರಂದು ರಾತ್ರಿ ಸ್ಪೋಟಕ ಸಿಡಿದು ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕೃಷ್ಣ ಗೌಡ ಅವರು ಡಿ.14ರಂದು ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

   ಬೆಟ್ಟಂಪಾಡಿ ಗ್ರಾಮದ ಸರಳಿಕಾನ ಕೇಪು ಗೌಡ ಎಂಬವರ ಮನೆಯಲ್ಲಿ ಡಿ.5ರಂದು ರಾತ್ರಿ ಸ್ಪೋಟಕ ಸಿಡಿದ ಪರಿಣಾಮ ಬ್ರಹ್ಮಕಲಶ, ತಂಬಿಲಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಪ್ಪರ ಮತ್ತು ಗರ್ನಲ್ ಸೇವೆ ಮಾಡುತ್ತಿದ್ದ ಬಾಲಕೃಷ್ಣ ಗೌಡ ಅವರು ಗಂಭೀರ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸ್ಪೋಟಕದ ತೀವ್ರತೆಗೆ ಮನೆಗೆ ಹಾಗೂ ಮನೆಯೊಳಗಿನ ಗೋಡ್ರೆಜ್ ಕಪಾಟುಗಳಿಗೆ ಹಾನಿಯಾಗಿದ್ದು, ಕಿಟಕಿಯ ಗಾಜುಗಳು ಚೂರುಚೂರಾಗಿತ್ತು. ಘಟನೆ ನಡೆಯುವ ಸಂದರ್ಭದಲ್ಲಿ ಮನೆಯ ಹೊರಗಡೆ ಕಿಟಕಿಯ ಬಳಿ ಕುಳಿತ್ತಿದ್ದ ಬಾಲಕೃಷ್ಣ ಗೌಡ ಅವರ ನಾದಿನಿ ವೇದಾವತಿ(35ವ), ಅವರ ಪುತ್ರಿ ಮೋನಿಕಾ(15ವ), ಪುತ್ರ ಕಾರ್ತಿಕ್(12ವ) ಎಂಬವರಿಗೂ ಗಾಯವಾಗಿತ್ತು. ಅವರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದರು. ಗಂಭೀರ ಗಾಯಗೊಂಡಿದ್ದ ಬಾಲಕೃಷ್ಣ ಗೌಡರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅವರ ಕೈ ಮತ್ತು ತೊಡೆ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Related posts

Leave a Reply

Your email address will not be published. Required fields are marked *