Header Ads
Header Ads
Breaking News

ಸ್ಮಾರ್ಟ್ ನಗರ ಯೋಜನೆ,  ಬೆಂಗಳೂರು ಸೇರಿ ಪಟ್ಟಿಗೆ ತೊಂಬತ್ತು ನಗರಗಳು

ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯ ಮೂರನೇ ಪಟ್ಟಿ ಪ್ರಕಟವಾಗುವುದರೊಂದಿಗೆ ಈ?ಯೋಜನೆಗೆ ಸೇರ್ಪಡೆಯಾದ ನಗರಗಳ ಸಂಖ್ಯೆ ೯೦ಕ್ಕೆ ಏರಿದೆ. ಹತ್ತು ನಗರಗಳ ಆಯ್ಕೆ ಮಾತ್ರ ಈಗ ಬಾಕಿ ಉಳಿದಿದೆ.
ಬಾಕಿ ಉಳಿದ ೧೦ ನಗರಗಳ ಆಯ್ಕೆ ಯನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೇರಳದ ತಿರುವನಂತಪುರ, ಛತ್ತೀಸಗಡದ ನಯಾ ರಾಯಪುರ, ಗುಜರಾತ್ನ ರಾಜ್ಕೋಟ್, ಆಂಧ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿ ಮತ್ತು ಬಿಹಾರದ ಪಟ್ನಾ ಈ ಪಟ್ಟಿಯಲ್ಲಿವೆ. ಒಟ್ಟು ೪೦ ಸುಸಜ್ಜಿತ ನಗರಗಳ ಆಯ್ಕೆಗೆ ದೇಶದ ೪೫ ನಗರಗಳು ಸ್ಪರ್ಧೆಯಲ್ಲಿದ್ದವು. ಆದರೆ, ಅಂತಿಮವಾಗಿ ಕೇವಲ ೩೦ ನಗರಗಳನ್ನು ಆಯ್ಕೆ ಮಾಡಲಾಗಿದೆ ಎಂದು ನಾಯ್ಡು ತಿಳಿಸಿದರು.
ಬಾಕಿ ಉಳಿದ ಹತ್ತು ಸ್ಥಾನಗಳಿಗೆ ಬಿಹಾರ ಶರೀಫ್, ನವಿ ಮುಂಬೈ, ಗ್ರೇಟರ್ ಮುಂಬೈ, ಮಹಾರಾಷ್ಟ್ರದ ಅಮರಾವತಿ, ದುರ್ಗಾಪುರ, ಹಲ್ದಿಯಾ, ಮೀರಠ್, ರಾಯ್ ಬರೇಲಿ, ಗಾಜಿಯಾಬಾದ್, ಸಹಾರನ್ಪುರ ಮತ್ತು ರಾಂಪುರ ಸೇರಿದಂತೆ ೨೦ ನಗರಗಳು ಸ್ಪರ್ಧೆಯಲ್ಲಿವೆ. ಆಯ್ಕೆಯಾದ ನಗರಗಳಲ್ಲಿನ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ತಕ್ಷಣ ರೂ. ೧೦೦ ಕೋಟಿ ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದರು.

Related posts

Leave a Reply