Header Ads
Header Ads
Breaking News

ಸ್ಯಾಂಡಲ್‌ವುಡ್ ಮೇಲೆ ಐಟಿ ದಾಳಿ ವಿಚಾರ ಐಟಿಯವರು ಅವರ ಕೆಲಸ ಮಾಡುತ್ತಾರೆ:ಉಡುಪಿಯಲ್ಲಿ ಸಚಿವೆ ಜಯಮಾಲಾ ಹೇಳಿಕೆ

ಸ್ಯಾಂಡಲ್‌ವುಡ್ ನಟರ ಮೇಲಿನ ಐಟಿ ದಾಳಿಯಿಂದ ಕಲಾವಿದರಿಗೆ ಯಾವುದೇ ರೀತಿಯಲ್ಲಿ ಹಿನ್ನಡೆ ಆಗೋದಿಲ್ಲ ಅಂತ ಸಚಿವೆ ಜಯಮಾಲಾ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಐಟಿಯವರು ಅವರ ಕೆಲಸ ಮಾಡುತ್ತಾರೆ. ಯಾರಿಗೂ ಇದರಿಂದ ತೊಂದರೆ ಆಗುವುದಿಲ್ಲ. ಕನ್ನಡ ಚಿತ್ರರಂಗ ಎತ್ತರಕ್ಕೆ ಬೆಳೆದಿರೋದು ಇದರಿಂದ ಗೊತ್ತಾಗುತ್ತೆ. ಕಲಾವಿದರುಗಳಿಗೆ ಈ ದಾಳಿಯಿಂದ ಏನೂ ಹಿನ್ನಡೆ ಆಗೂದಿಲ್ಲ. ರಾಜ್ ಕುಮಾರ್ ಮಕ್ಕಳು, ಯಶ್ – ಸುದೀಪ್ ಬಹಳ ಪ್ರಾಮ್ಟ್ ಇದ್ದಾರೆ.ಕಲಾವಿದರ ಬಳಿ ಎರಡು ಒಡವೆ, ಬೆಳ್ಳಿತಟ್ಟೆ ಚೊಂಬು ಇರಬಹುದು. ನಿಯಮ ಪ್ರಕಾರ ಎಲ್ಲರೂ ಟಾಕ್ಸ್ ಕಟ್ಟಲೇಬೇಕು.ಎಲ್ಲಾ ಕಲಾವಿದರು ಟ್ಯಾಕ್ಸ್ ಕಟ್ಟಿರುತ್ತಾರೆ ಇದರಿಂದ ಕಲಾವಿದರಿಗೆ ಯಾವುದೇ ತೊಂದರೆ ಆಗೋದಿಲ್ಲ ಎಂದ್ರು ಇನ್ನು ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದ ಬಗ್ಗೆ ಮಾತನಾಡಿದ ಅವರು ಶಬರಿಮಲೆ ಬಗ್ಗೆ ಮಾತಾಡಿ ನಾನು ಸುಸ್ತಾಗಿ ಬಿಟ್ಟೆ. ನಾನು ಈ ಬಗ್ಗೆ ಏನೂ ಮಾತಾಡಲ್ಲ.ದೇವರನ್ನು ನಾನು ವ್ಯಾಪಾರಕ್ಕೆ ಇಟ್ಟಿಲ್ಲ.ನಾನು ದೇವರನ್ನು ನಂಬಿಕೆಯ ತಳಹದಿಯಲ್ಲಿ ನೋಡುವವಳು. ಶಬರಿಮಲೆಗೆ ಭಕ್ತಿಯಿಂದ ಹೋಗಬೇಕು ಎಂಬೂದು ನನ್ನ ಭಾವನೆ ಎಂದ್ರು.

Related posts

Leave a Reply