Header Ads
Header Ads
Header Ads
Breaking News

ಸ್ವಚ್ಚತಾ ಮಾಹಿತಿ ಶಿಕ್ಷಣ ಜಾಗೃತಿ ಅಭಿಯಾನ ಮೂಡಬಿದರೆ ಪ್ರೆಸ್‌ಕ್ಲಬ್‌ನಿಂದ ಕಾರ್ಯಕ್ರಮ

ಪುರಸಭೆ ಮೂಡುಬಿದಿರೆ, ರೋಟರಿ ಕ್ಲಬ್, ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗ, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಮತ್ತು ಮೂಡುಬಿದಿರೆ ಪ್ರೆಸ್‌ಕ್ಲಬ್ ಇವುಗಳ ಜಂಟಿ ಆಯೋಗದೊಂದಿಗೆ “ಸ್ವಚ್ಛತಾ ಮಾಹಿತಿ ಶಿಕ್ಷಣ ಜಾಗೃತಿ” ಅಭಿಯಾನವು ರೋಟರಿ ಸಂಸ್ಥೆಯ ಸಮ್ಮಿಲನ್ ಹಾಲ್‌ನಲಿ ಆರಂಭಗೊಂಡಿತು.

ಹಿರಿಯ ಕೃಷಿ ತಜ್ಞ,ಬನ್ನಡ್ಕ ಸೋನ್ಸ್ ಫಾರ್ಮ್‌ನ ಡಾ.ಎಲ್.ಸಿ ಸೋನ್ಸ್ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಇಂದು ಅಭಿವೃದ್ಧಿಯೊಂದಿಗೆ ಬದಲಾವಣೆಗಳು ಆಗುತ್ತಿವೆ ಇದರಿಂದಾಗಿ ಪ್ರಕೃತಿಯ ಮೇಲೆ ಹೊಡೆತಗಳು ಬೀಳುತ್ತಿದ್ದು ಇದನ್ನು ತಪ್ಪಿಸಲು ಪ್ರಜ್ಞಾವಂತರಾದ ನಾಗರಿಕರು ಜಾಗೃತರಾಗಬೇಕಾಗಿದೆ.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಸ್ವಚ್ಛತೆಯ ಮಹತ್ವವನ್ನು ವಿವರಿಸಿದರು. ಪುರಸಭಾ ಪರಿಸರ ಇಂಜಿನಿಯರ್ ಶಿಲ್ಪಾ ಕಸ ವಿಲೇವಾರಿ ಹಾಗೂ ಪರಿಸರ ಸ್ವಚ್ಛತೆಯ ಬಗ್ಗೆ ಕೈಗೊಂಡ ಕಾರ್‍ಯಯೋಜನೆಯನ್ನು ವಿವರಿಸಿದರು.

ಪುರಸಭಾ ಉಪಾಧ್ಯಕ್ಷ ವಿನೋದ್ ಸೆರಾವೋ, ಸದಸ್ಯರಾದ ರತ್ನಾಕರ ದೇವಾಡಿಗ, ಮುಖ್ಯಾಧಿಕಾರಿ ಶೀನ ನಾಯ್ಕ್, ರೋಟರಿ ಕ್ಲಬ್ ಟೆಂಪಲ್ ಟೌನ್‌ನ ಅಧ್ಯಕ್ಷ ಬಲರಾಮ್ ಕೆ. ಎಸ್., ಪ್ರೆಸ್‌ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆರ್ಚಾರ್ಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರದಿ: ಪ್ರೆಮಶ್ರೀ ಮೂಡಬಿದರೆ

Related posts

Leave a Reply