Header Ads
Header Ads
Header Ads
Breaking News

ಸ್ವಚ್ಛತಾ ಕಾರ್ಯಗಳಿಗೆ ಅನುದಾನ ನೀಡದ ಕೇಂದ್ರ ಸರಕಾರ ಮೂಡುಬಿದಿರೆ ಪುರುಸಭಾ ಆಡಳಿತ ಪಕ್ಷದ ಸದಸ್ಯರಿಂದ ಆರೋಪ

ಸ್ವಚ್ಛ ಭಾರತ ಪರಿಕಲ್ಪನೆಗೆ ಮೂಡುಬಿದಿರೆಯಲ್ಲಿ ಅಪವಾದಗಳಿವೆ. ಸ್ವಚ್ಛ ಭಾರತ್ ಅಭಿಯಾನದ ಮೂಲಕ ಸ್ವಚ್ಛತೆಯನ್ನು ಕಾಪಾಡಬೇಕೆಂದು ಕೇಂದ್ರ ಸರಕಾರವು ಯೋಜನೆಗಳನ್ನು ಜಾರಿಗೆ ತಂದಿದೆ ಆದರೆ ಪುರಸಭೆ ವ್ಯಾಪ್ತಿಯ ಸ್ವಚ್ಛತಾ ಕಾರ್ಯಗಳಿಗೆ ಕೇಂದ್ರ ಸರ್ಕಾರ ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಮೂಡುಬಿದಿರೆ ಪುರಸಭೆಯ ಆಡಳಿತ ಪಕ್ಷದ ಸದಸ್ಯರು ಆರೋಪಿಸಿದರು.

ಪುರಸಭಾಧ್ಯಕ್ಷೆ ಹರಿಣಾಕ್ಷಿ ಎಸ್.ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದರು. ಹೊಟೇಲ್ ಮುಂತಾದ ಕಡೆಗಳಲ್ಲಿ ಸ್ವಚ್ಛತೆಗೆ ಕುಂದಾಗುತ್ತಿದೆ. ಮುಂದಿನ ದಿನದಲ್ಲಿ ಪರಿಸ್ಥಿತಿ ಕೈಮೀರಬಹುದು ಕೊಳಚೆಗಳಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಿಪಿಐಎಂ ಬೆಂಲಿತ ಪುರಸಭಾ ಸದಸ್ಯೆ ರಮಣಿ ಆರೋಪಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪರಿಸರ ಅಧಿಕಾರಿ ಶಿಲ್ಪಾ ಭರವಸೆ ನೀಡಿದರು.
ಪುರಸಭೆಯು ಕಸವನ್ನು ತೂಕ ಮಾಡಲು ಇದೀಗ ಹೊಸ ತಕ್ಕಡಿ ಖರೀದಿಸಿದ್ದು, ಇದರಿಂದ ದಲಿತ ಕಾರ್ಮಿಕರು ಕಸವನ್ನು ಕೈಯಲ್ಲಿ ತೂಕ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತ್ಯಾಜ್ಯವು ದುರ್ನಾತದಿಂದ ಕೂಡಿದ್ದು, ಅಸಹನೀಯ ರೀತಿಯಲ್ಲಿ ದಲಿತ ಕಾರ್ಮಿಕರು ದುಡಿಯುತ್ತಿದ್ದಾರೆ. ಈ ಪದ್ಧತಿಯನ್ನು ಪುರಸಭೆ ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಕೇಂದ್ರ ಸರಕಾರದವರೇ ಬಂದು ಸ್ವಚ್ಛತೆಯನ್ನು ಮಾಡಲಿ ಎಂದು ಎಂದು ಆಡಳಿತ ಪಕ್ಷದ ಸದಸ್ಯ ಕೊರಗಪ್ಪ ಆಕ್ರೋಶದಿಂದ ಆಗ್ರಹಿಸಿದರು.

Related posts

Leave a Reply