Header Ads
Header Ads
Breaking News

ಸ್ವಜಾತಿ ಬಾಂಧವರ ವಾಹನ ಜಾಥ, ಸರ್ವಜ್ಞ ಟ್ರೋಫಿ ಕ್ರಿಕೆಟ್ ಪಂದ್ಯಾಟ

ಬಂಟ್ವಾಳ ತಾಲೂಕು ಮಟ್ಟದ ಸ್ವಜಾತಿ ಬಾಂಧವರ ವಾಹನ ಜಾಥ ಹಾಗೂ ಸರ್ವಜ್ಞ ಟ್ರೋಫಿ ಕ್ರಿಕೆಟ್ ಪಂದ್ಯಾಟ ಬಂಟ್ವಾಳದ ಎಸ್‌ವಿಎಸ್ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು. ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ವತಿಯಿಂದ ಹಾಗೂ ಸರ್ವಜ್ಞ ಜಯಂತಿ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಬಿ.ಸಿ.ರೋಡಿ ರಕ್ತೇಶ್ವರಿ ದೇವಸ್ಥಾನದಲ್ಲಿ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಅವರು ಸದಸ್ಯರ ಗುರುತಿನ ಚೀಟಿ ಬಿಡಗಡೆಗೊಳಿಸಿದರು. ಬಳಿಕ ಮಂಗಳೂರಿನ ಯಜ್ಞೇಶ್ ಕುಲಾಲ್ ಬರ್ಕೆ ತ್ರಿಪದಿ ಕವಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ವಾಹನ ಜಾಥಕ್ಕೆ ಚಾಲನೆ ನೀಡಿದರು. ಬಿ.ಸಿ.ರೋಡಿನ ರಾಜಾ ರಸ್ತೆಯ ಮೂಲಕ ವಾಹನ ಜಾಥ ಬಂಟ್ವಾಳದ ಎಸ್‌ವಿಎಸ್ ಮೈದಾನಕ್ಕೆ ಸಾಗಿ ಬಂತು. ಸರ್ವಜ್ಞ ಟ್ರೋಪಿ ಕ್ರಿಕಟ್ ಪಂದ್ಯಾಟ ಹಾಗೂ ಸಭಾ ಕಾರ್ಯಕ್ರಮವನನು ಬೆಂಗಳೂರಿನ ಉದ್ಯಮಿ ಗೋಪಾಲ ಗೋವಿಂದೋಟ ಉದ್ಘಾಟಿಸಿದರು. ಅವರು ಮಾತನಾಡಿ ಕುಲಾಲ ಕುಂಬಾರರ ಯುವ ವೇದಿಕೆಯಿಂದ ಸಮಾಜ ಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಡಾ. ಅಣ್ಣಯ್ಯ ಕುಲಾಲ್ ಮಾತನಾಡಿ ಹತ್ತು ವರ್ಷಗಳ ಹಿಂದೆ ಕೇವಲ ಬೆರಳೆಣಿಕೆಯ ಮಂದಿ ಸೇರಿ ಕುಲಾಲ ಕುಂಬಾರರ ಯುವ ವೇದಿಕೆಯನ್ನು ಸ್ಥಾಪಿಸಲಾಗಿತ್ತು. ಆದರೆ ಇಂದು ಪ್ರತೀ ತಾಲೂಕು ಘಟಕಗಳಲ್ಲೂ ಹೆಚ್ಚಿನ ಸದಸ್ಯರು ಸೇರ್ಪಡೆಗೊಂಡು ಕುಲಾಲ ಯುವ ಯುವವೇದಿಕೆ ಬಲಗೊಂಡಿದೆ. ಕುಲಾಲ ಸಮುದಾಯದ ಕ್ರೀಡಾಕೂಟವೊಂದರಲ್ಲಿ ೩೫ಕ್ಕಿಂತಲೂ ಅಧಿಕ ತಂಡಗಳು ಪಾಲ್ಗೊಳ್ಳುವುದೆಂದರೆ ಸಮುದಾಯದ ಸಂಘಟನೆ ಗಟ್ಟಿಯಾಗುತ್ತಿದೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದರು. ಕುಲಾಲ ಸಂಘಟನೆಗಳ ಒಕ್ಕೂಟ ಸ್ಥಾಪಿಸುವ ಬಗ್ಗೆ ಕುಲಾಲ ನಾಯಕರು ಚಿಂತನೆ ನಡೆಸುತ್ತಿದ್ದಾರೆ, ಮಡಕೆ ಮಾಡುವ ಕುಂಬಾರರಿಗೆ ನೈತಿಕ ಸ್ಥೈರ್ಯ ತುಂಬುವ ಕಾರ್ಯ ಆಗಬೇಕಿದೆ. ರೈಲು ನಿಲ್ದಾಣಗಳಲ್ಲಿ ಮಣ್ಣಿನ ಲೋಟೆಯಲ್ಲಿ ಚಹಾ ನೀಡುವ ವ್ಯವಸ್ಥೆ ಆರಂಭಗೊಂಡಿದ್ದು ಇದರ ಗುತ್ತಿಗೆಯನ್ನು ಬೇರೆ ಯಾರಿಗೋ ನೀಡುವ ಬದಲು ಕುಂಬಾರರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಬಂಟ್ವಾಳ ಕುಲಾಲ ಕುಂಬಾರರ ಯುವವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ರೈಲಿನಲ್ಲಿ ಸಾಹಸ ಮೆರೆದ ಯುವಕ ರಾಜೇಶ್ ನರಿಕೊಂಬು ಅವರನ್ನು ಸನ್ಮಾನಿಸಲಾಯಿತು. ಅನಾರೋಗ್ಯಕ್ಕೊಳಗಾದ ಬಾಲಕ ನಿತೇಶ್ ಅವರಿಗೆ ಕಲ್ಪವೃಕ್ಷ ಠೇವಣಿಯನ್ನು ಹಸ್ತಾಂತರಿಸಲಾಯಿತು. ಕುಲಾಲರ ಜನಗಣತಿ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು.

ಮುಖ್ಯ ಅತಿಥಿ ಗಳಾಗಿ ಕರಾವಳಿ ಕುಲಾಲ ಕುಂಬಾರರ ಯುವವೇದಿಕೆಯ ಜಿಲ್ಲಾಧ್ಯಕ್ಷ ಜಯೇಶ್ ಗೋವಿಂದ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಡಿ.ಎಂ.ಕುಲಾಲ್, ಸೈಬರ್ ಕ್ರೈಂ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಕೃಷ್ಣ ಕುಲಾಲ್, ರಘುನಾಥ ಸಾಲ್ಯಾನ್, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಬಿಂಬಧ್ವನಿ ಪತ್ರಿಕೆಯ ಪ್ರಧಾನ ಸಂಪಾದಕ ವಸಂತ್ ಕಾರ್ಕಳ, ಉದ್ಯಮಿ ರಾಮಕುಲಾಲ್ ಉಪ್ಪಿನಂಗಡಿ, ಮಳಲಿ ಕುಂಬಾರರ ಗುಡಿಕೈಗಾರಿಕೆ ಸಂಘದ ಅಧ್ಯಕ್ಷ ಸುಂದರ ಬಿ. ಬಂಗೇರ, ಇಂಜಿನಿಯರ್ ವಜ್ರೇಶ್ ಕುಲಾಲ್ ಹಾಜರಿದ್ದರು.

Related posts

Leave a Reply