Header Ads
Header Ads
Header Ads
Breaking News

ಸ್ವರಾಜ್ಯ ಮೈದಾನ ಉಳಿಸಿ ಅಭಿಯಾನ: ಸಹಿ ಸಂಗ್ರಹ ಆಂದೋಲನ ನೇತೃತ್ವಕ್ಕೆ ‘ಅಭಯ’: ಚೇತನ್ ಕುಮಾರ್ ಶೆಟ್ಟಿ ಮನವಿ

ಮೂಡುಬಿದಿರೆ: ನಗರದಲ್ಲಿರುವ ಏಕೈಕ ಸಾರ್ವಜನಿಕ ಮೈದಾನದಲ್ಲಿ ವಾಣಿಜ್ಯ ಕೇಂದ್ರವಾಗಿ ಪರಿವರ್ತಿಸಲು ಮುಂದಾಗಿರುವ ಪುರಸಭೆಯವರು ಕ್ರೀಡಾಪಟುಗಳ, ಕ್ರೀಡಾಭಿಮಾನಿಗಳ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕರು ಹಾಗೂ ಪ್ರೇಕ್ಷಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು, ಪುರಸಭೆಯವರ ನಡೆಯನ್ನು ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಅವರು ತಡೆಯಬೇಕು. ಮಾತ್ರವಲ್ಲ ಸ್ವರಾಜ್ಯ ಮೈದಾನ ಉಳಿಸುವ ಕೆಲಸವು ಶಾಸಕರ ನೇತೃತ್ವದಲ್ಲಿ ಆಗಬೇಕೆಂದು ಸ್ವರಾಜ್ಯ ಮೈದಾನ ಉಳಿಸಿ ಸಮಿತಿಯ ಸಂಚಾಲಕ ಚೇತನ್ ಕುಮಾರ್ ಒತ್ತಾಯಿಸಿದರು.
ಸ್ವರಾಜ್ಯ ಮೈದಾನಚಲ್ಲಿ ತಾತ್ಕಾಲಿಕ ಮಾರುಕಟ್ಟೆಯ ಕಾಮಗಾರಿಯನ್ನು ವಿರೋಧಿಸಿ ಸ್ವರಾಜ್ಯ ಮೈದಾನ ಉಳಿಸಿ ಸಮಿತಿಯ ಮಂಗಳವಾರ ಹಮ್ಮಿಕೊಂಡ ಸಹಿ ಸಂಗ್ರಹ ಅಭಿಯಾನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ. ಮಾತನಾಡಿ, ಯುವಜನಸೇವಾ ಇಲಾಖೆಯ ಅಧಿಕಾರಿಗಳು ಕ್ರೀಡಾಂಗಣವನ್ನು ಕ್ರೀಡೆ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡಬೇಕೇ ಹೊರತು ವಾಣಿಜ್ಯ ಉದ್ದೇಶಕ್ಕಾಗಿ ಅನುಮತಿ ನೀಡುವುದು ತಪ್ಪು. ತಾತ್ಕಾಲಿಕ ಕಾಮಗಾರಿ ಎಂದು ಹೇಳಿ ಮೂಡುಬಿದಿರೆ ಪುರಸಭೆಯು ಕಾನೂನು ಬಾಹಿರವಾಗಿ ಸ್ವರಾಜ್ಯ ಮೈದಾನದಲ್ಲಿ ಕಟ್ಟಡಗಳನ್ನು ನಿರ್ಮಿಸುತ್ತಿದೆ ಎಂದು ಆರೋಪಿಸಿದರು.

ಸಿಪಿ‌ಐ‌ಎಂ ನಾಯಕ ಯಾದವ ಶೆಟ್ಟಿ ಮಾತನಾಡಿ, ಪೇಟೆಯ ಹೃದಯ ಭಾಗದಲ್ಲಿ ಈಗ ಇರುವ ಮಾರುಕಟ್ಟೆಯ ಸುಮಾರು ಮೂವತ್ತು ಕೋಟಿಯಷ್ಟು ಬೆಲೆಬಾಳುವ ಜಾಗವನ್ನು ಖಾಸಗಿಯವರ ತೆಕ್ಕೆಗೆ ಕೊಟ್ಟು ಮೂಡುಬಿದಿರೆ ಪುರಸಭೆಯವರು ಭೃಷ್ಟಾಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಸರ್ಕಾರ, ಪುರಸಭೆ ಅನುದಾನದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲು ಸಾಧ್ಯವಿರುವಾಗ, ಯಾಕೆ ಖಾಸಗಿಯವರಿಗೆ ನೀಡುತ್ತಿದ್ದಾರೆ ಎನ್ನುವ ಪ್ರಶ್ನೆ ಜನರಲ್ಲಿ ಕಾಡುತ್ತಿದೆ. ಸ್ವರಾಜ್ಯ ಮೈದಾನ ಉಳಿಸಿ ಅಭಿಯಾನಕ್ಕೆ ಕಾರ್ಮಿಕ ಸಂಘಟನೆಗಳು ಪೂರ್ಣ ಪ್ರಮಾಣದ ಬೆಂಬಲ ನೀಡುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಪ್ರಸಾದ್ ಕುಮಾರ್, ಲಕ್ಷ್ಮಣ್ ಪೂಜಾರಿ, ಸ್ವರಾಜ್ಯ ಮೈದಾನ ಉಳಿಸಿ ಸಮಿತಿಯ ಸಹಸಂಚಾಲಕ ಸೋಮನಾಥ ಕೋಟ್ಯಾನ್, ರಾಜೇಶ್ ಪಿ.ಎಸ್, ಅಮರ್ ಕೋಟೆ, ಬಿಜೆಪಿ ಮುಖಂಡರಾದ ಗೋಪಾಲ ಶೆಟ್ಟಿಗಾರ, ಹರೀಶ್ ಎಂ.ಕೆ, ಶೀನ ಮಾಸ್ತಿಕಟ್ಟೆ, ಕಿಶೋರ್, ಮಾರುಕಟ್ಟೆ ವ್ಯಾಪಾರಿಗಳಾದ ಎ.ಎಲ್ ವಾಸ್, ರಮೇಶ್, ರತ್ನಾಕರ್, ಅಶ್ರಫ್ ಉಪಸ್ಥಿತರಿದ್ದರು.

Related posts

Leave a Reply