Header Ads
Header Ads
Header Ads
Breaking News

ಸ್ವರಾಜ್ಯ ಮೈದಾನ ಉಳಿಸಿ ಹೊರಾಟ ಸಮಿತಿಯಿಂದ ಪ್ರತಿಭಟನೆ ಅ.೨ರಂದು ಸ್ವರಾಜ್ಯ ಮೈದಾನದಲ್ಲಿ ವಿವಿಧ ಸಂಘಟನೆಗಳ ನೇತೃತ್ವ

 

 ಮೂಡುಬಿದಿರೆಯಲ್ಲಿ ಹೃದಯ ಭಾಗದಲ್ಲಿರುವ, ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಹಾಗೂ ಸಾಮಾಜಿಕ ಕಾರ್ಯಕ್ರಮವನ್ನು ನಡೆಸಲು ಇರುವಂತಹ ಏಕೈಕ ಮೈದಾನವಾಗಿರುವ ಸ್ವರಾಜ್ಯ ಮೈದಾನವನ್ನು ಉಳಿಸಬೇಕೆನ್ನುವ ನಿಟ್ಟಿನಲ್ಲಿ ಸ್ವರಾಜ್ಯ ಮೈದಾನ ಉಳಿಸಿ ಹೋರಾಟ ಸಮಿತಿ ವತಿಯಿಂದ ಅ.೨ರಂದು ಸ್ವರಾಜ್ಯ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಹೊರಾಟ ಸಮಿತಿ ಸಹ ಸಂಚಾಲಕ ಸೋಮನಾಥ ಕೋಟ್ಯಾನ್ ತಿಳಿಸಿದ್ದಾರೆ.

ಈ ಕುರಿತು ಮೂಡಬಿದ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವರಾಜ್ಯ ಮೈದಾನವನ್ನು ಉಳಿಸಬೇಕಾಗಿರುವುದು ಮೂಡುಬಿದಿರೆ ನಾಗರಿಕರ ಕರ್ತವ್ಯ. ಆದರೆ ಈ ಮೈದಾನವನ್ನು ಮೂಡುಬಿದಿರೆ ಪುರಸಭೆ ಕಾನೂನು ಮೀರಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿರುವುದರಿಂದ ದ.ಕ ಜಿಲ್ಲಾಧಿಕಾರಿಯವರು ಮಧ್ಯ ಪ್ರವೇಶಿಸಿ ಕಾಮಗಾರಿಯನ್ನು ತಕ್ಷಣ ನಿಲ್ಲಿಸಿ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಸ್ವರಾಜ್ಯ ಮೈದಾನವನ್ನು ಉಳಿಸಿಕೊಡಬೇಕೆಂದು ಆಗ್ರಹಿಸಿದರು. ಈ ವೇಳೆ ಪುರಸಭಾ ಸದಸ್ಯರಾದ ಲಕ್ಷ್ಮಣ್ ಪೂಜಾರಿ, ನಾಗರಾಜ ಪೂಜಾರಿ, ಹೋರಾಟ ಸಮಿತಿಯ ಮುಖಂಡರಾದ ಗೋಪಾಲ್ ಶೆಟ್ಟಿಗಾರ್ ಮತ್ತು ಕಿಶೋರ್ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply