Header Ads
Header Ads
Breaking News

ಸ್ವರ್ಣಾ ನದಿಯಲ್ಲಿ ಕೃಷ್ಣಾಂಗಾರಕ ಸ್ನಾನ : ದೇಶದ ನಾನಾ ಭಾಗಗಳಿಂದ ಭಕ್ತರ ಆಗಮನ

ಕಡಗೋಲು ಕೃಷ್ಣನ ಉಡುಪಿಗೆ ಇಂದು ದೇಶದ ನಾನಾಭಾಗಗಳಿಂದ ಕೃಷ್ಣ ಭಕ್ತರು ಬಂದಿದ್ದರು. ಇಲ್ಲಿ ಹರಿಯುವ ಸ್ವರ್ಣಾ ನದಿಯಲ್ಲಿ ಮೀಯಲೆಂದೇ ನೂರಾರು ಕಿಲೋ ಮೀಟರ್ ಸಾಗಿ ಬಂದಿದ್ದರು. ಉಡುಪಿಯ ಜೀವನದಿಯಲ್ಲಿ ಏನಂಥಹಾ ವಿಶೇಷವಿತ್ತು ಅಂತೀರಾ ? ಇಲ್ಲಿದೆ ನೋಡಿ ಡೀಟೆಲ್ಸ್ಕೃಷ್ಣ ಪಕ್ಷ, ಚತುರ್ದಶಿ, ಮಂಗಳವಾರ ಈ ಮೂರು ವಿಶೇಷಗಳು ಕೂಡಿ ಬಂದ ದಿನ ಕೃಷ್ಣಾಂಗಾರಕ ಚತುರ್ದಶಿ ಎಂದೇ ಪ್ರಸಿದ್ದಿ ಪಡೆದಿದೆ. ಈ ದಿನ ಉಡುಪಿಯ ಸ್ವರ್ಣಾ ನದಿಯಲ್ಲಿ ಮಿಂದರೆ ಎಲ್ಲಾ ಪಾಪಗಳು ಕಳೆಯುತ್ತೆ ಅನ್ನೋದು ಪುರಾಣಗಳು ಹೇಳುವ ನಂಬಿಕೆ. ಅದರಲ್ಲೂ ದಕ್ಷಿಣ ಭಾರತದ ಆಂದ್ರಪ್ರದೇಶ, ತಮಿಳ್ನಾಡು ಮತ್ತು ನಮ್ಮ ಉತ್ತರ ಕರ್ನಾಟಕ ಭಾಗದ ಭಕ್ತರು ಈ ದಿನ ಪುಣ್ಯ ಸ್ನಾನ ಕೈಗೊಳ್ಳಲೆಂದೇ ಮಣಿಪಾಲ ಸಮೀಪದ ಸ್ವರ್ಣಾ ನದಿಗೆ ಬರುತ್ತಾರೆ. ಈ ಬಾರಿಯೂ ರಾಯಚೂರು, ಬಳ್ಳಾರಿ, ಹುಬ್ಳಿ, ಧಾರವಾಡದಿಂದ ಸಾವಿರಾರು ಸಂಖ್ಯೆಯಲ್ಲಿ ಬಂದ ಭಕ್ತರು ಇಲ್ಲಿನ ಸಿದ್ದಿವಿನಾಯಕ ಸನ್ನಿಧಿಗೆ ಬೇಟಿ ನೀಡಿ ಪುಣ್ಯಸ್ನಾನ ಕೈಗೊಂಡರು. ಸ್ವರ್ಣೆಯಲ್ಲಿ ಗಂಗೆ ಇಂದು ಸನ್ನಿಹಿತಳಾಗಿರುತ್ತಾಳೆ ಅನ್ನೋ ಕಾರಣಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ನಾಲ್ಕು ಶತಮಾನಗಳ ಹಿಂದೆ ಬದುಕಿದ್ದ ಉಡುಪಿಯ ಗುರು ವಾದಿರಾಜ ಸಾರ್ವಭೌಮರು ತಮ್ಮ ‘ತೀರ್ಥ ಪುರಾಣ’ ದಲ್ಲಿ ಈ ದಿನ ವಿಶೇಷದ ಬಗ್ಗೆ ಉಲ್ಲೇಖಿಸಿದ್ದಾರೆ. ಹಾಗಾಗಿ ವಾದಿರಾಜ ಗುರುಗಳ ಭಕ್ತರು ರಾಜ್ಯದ ನಾನಾಭಾಗಳಿಂದ ಬರುತ್ತಾರೆ. ಈ ದಿನದ ಪುಣ್ಯಸ್ನಾನಕ್ಕೆ ಉತ್ತರಾಧಿ ಮಠಾಧೀಶರು ಬೆಂಗಳೂರಿನಿಂದ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಡುಪಿಯ ಪೇಜಾವರ ಮಠದ ಕಿರಿಯ ಯತಿಗಳಾದ ವಿಶ್ವಪ್ರಸನ್ನ ತೀರ್ಥರು ಭಕ್ತರೊಂದಿಗೆ ಈ ಪುಣ್ಯಸ್ನಾನದಲ್ಲಿ ಭಾಗವಹಿಸಿದ್ದರು.ಸಿದ್ದಿ ವಿನಾಯಕ ದೇವರಿಗೆ ಪೂಜೆ ಸಲ್ಲಿಸಿದರು. ಸ್ವರ್ಣೆಯಲ್ಲಿ ಮುಳುಗೆದ್ದಾಗ ಚಟಪಟ ಎಂಬ ಸದ್ದು ಕೇಳಿಬರುತ್ತೆ, ಇದು ನಮ್ಮ ಪಾಪಗಳು ದೂರವಾದ ಸಂಕೇತ ಅನ್ನೋದು ಭಕ್ತರ ಅಭಿಮತ.

ಹಚ್ಚ ಹಸುರಿನ ಪ್ರಕೃತಿ, ಹಿತವಾದ ವಾತಾವರಣ, ತುಂಬಿ ಹರಿಯುವ ಸ್ವರ್ಣೆ ಈ ಎಲ್ಲಾ ಕಾರಣಕ್ಕೆ ಸೂರ್ಯೋದಯಕ್ಕೂ ಮುನ್ನ ನಡೆಯುವ ಈ ಪುಣ್ಯಸ್ನಾನ ಸ್ಮರಣೀಯವೆನಿಸುತ್ತೆ. ಇಲ್ಲಿ ಹರಿಯುವ ನೀರಿನಲ್ಲಿ ಅದೇನೋ ವಿಶೇಷ ಶಕ್ತಿಯಿದ್ದು ವೈಜ್ಞಾನಿಕ ಸಂಶೋಧನೆಯೂ ನಡೆಯುತ್ತಿದೆ. ಮಣಿಪಾಲದ ಆಧುನೀಕತೆಯ ಹೊರತಾಗಿಯೂ ಇಲ್ಲಿನ ಜನಕೃಷ್ಣಾಂಗಾರಕ ಪುಣ್ಯಸ್ನಾನದಂತಹಾ ಧಾರ್ಮಿಕ ಆಚರಣೆಯಲ್ಲಿ ನಂಬಿಕೆಯಿರಿಸಿರುವುದು ಗಮನಾರ್ಹ.

Related posts

Leave a Reply

Your email address will not be published. Required fields are marked *