Header Ads
Header Ads
Header Ads
Breaking News

ಸ್ವಾತಂತ್ರ್ಯ ಬಳಿಕದ ಕಾಂಗ್ರೆಸ್ ವಿಚಾರವನ್ನು ಬಿಚ್ಚಿಟ್ಟರೆ ಒಂದೂ ಮತ ಬೀಳೋಲ್ಲ ಕಾಂಗ್ರೆಸ್ಸಿಗೆ.. ಕಾಂಗ್ರೆಸ್ ಅನಾಚಾರಗಳನ್ನು ಬಚ್ಚಿಡದೆ ಬಿಚ್ಚಿಡುವ ಕೆಲಸ ಬಿಜೆಪಿ ಕಾರ್ಯಕರ್ತರಿಂದ ಆಗಬೇಕಾಗಿದೆ..

ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ಥಿತ್ವದಲ್ಲಿದ್ದ ಕಾಂಗ್ರೆಸ್ ದೇಶಕ್ಕಾಗಿ ಬಹಳಷ್ಟು ತ್ಯಾಗವನ್ನು ಮಾಡಿದೆ. ಆದರೆ ಆ ಬಳಿಕ ನೆಹರೂ ಸಂತಾನದ ಕಾಂಗ್ರೆಸ್ ರಾಜಕೀಯಕ್ಕಾಗಿ ಏನೆಲ್ಲಾ ಅನಾಚಾರಗಳನ್ನು ಮಾಡಿದೆ ಅದನ್ನು ನಮ್ಮ ಪಕ್ಷದ ಕಾರ್ಯಕರ್ತರು ಬಚ್ಚಿಡದೆ ಬಿಚ್ಚಿಡುವ ಕೆಲಸ ಮಾಡಿದ್ದೀರಿ ಎಂದದಾರೆ ಕಾಂಗ್ರೆಸ್ಸಿಗೆ ಒಂದೇ ಒಂದು ಮತ ಬೀಳೋದಿಲ್ಲ ಎಂಬುದಾಗಿ, ವಿವಾದ ಹೇಳಿಕೆಗಳ ಮೂಲಕ ಕುಖ್ಯಾತಿ ಪಡೆದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅವರು ಕಾಪುವಿನ ವೀರಭದ್ರ ಸಭಾ ಭವನದಲ್ಲಿ ಕಾಪು ಬಿಜೆಪಿ ಸಾಮಾಜಿಕ ಜಾಲತಾಣವನ್ನು ಉದ್ಘಾಟಿಸಿ ಮಾತನಾಡಿದರು. ನೆಹರೂ ಕಾಂಗ್ರೆಸ್ ದೇಶವನ್ನು ಹಾಳು ಮಾಡುವ ಸೂಚನೆ ಗಾಂಧೀಜಿಯವರಿಗೆ ಮೊದಲೇ ತಿಳಿದಿತ್ತೋ ಏನೋ, ಅವರು ಸ್ವಾತಂತ್ರ್ಯ ದೊರಕಿದ ಆರಂಭದಲ್ಲೇ ಹೇಳಿದ್ದರು ಇಂದಿನ ಕಾಂಗ್ರೆಸ್ ವಿಸರ್ಜಿಸುವಂತೆ. ಆದರೆ ಅದನ್ನು ಮುಂದುವರಿಸಿಕೊಂಡು ಹೋಗಲಾಯಿತು. ಆದರ ಪರಿಣಾಮ ನಾವು ಕಾಂಗ್ರೆಸ್‌ನಿಂದ ಇಂಥಹ ಕೆಟ್ಟ ಆಡಳಿತವನ್ನು ನೋಡುವಂತ್ತಾಯಿತು. ಕಾಂಗ್ರೆಸ್ ಪಕ್ಷದ ಎಲ್ಲಾ ಅವಾಂತರಗಳನ್ನು ಬಚ್ಚಿಡದೆ ನಮ್ಮ ಬಿಜೆಪಿ ಕಾರ್ಯಕರ್ತರು ಜನರ ಮುಂದೆ ಬಿಚ್ಚಿಟ್ಟರೂ ಎಂದಾದರೆ ಒಂದೇ ಒಂದು ಮತ ಕಾಂಗ್ರೆಸ್ಸಿಗೆ ಬೀಳುವುದಿಲ್ಲ ಎಂಬುದಾಗಿ ಭವಿಷ್ಯ ನುಡಿದರು. ಇದೀಗ ಡೋಗಿ ರಾಜಕಾರಣ ಮಾಡ ಹೊರಟ ಕಾಂಗ್ರೆಸ್ ನಾವು ಜಾತ್ಯಾತೀತ.. ದೀನರ ಪರ, ದಲಿತರ ಪರ ಎಂಬೆಲ್ಲ ಬುರುಡೆ ಬಿಟ್ಟು ಮತ್ತೆ ಅಧಿಕಾರಕೇರಲು ಯತ್ನಿಸುತ್ತಿದೆ. ಅಂಬೇಡ್ಕರ್ ಬಗ್ಗೆ ಮಾತನಾಡುವ ಇವರು, ಅವರ ಜೀವನಾವಧಿಯಲ್ಲಿ ರಾಜಕೀಯವಾಗಿ ಅವರನ್ನು ಮುಗಿಸಲು ಬಹಳಷ್ಟು ಕುತಂತ್ರವನ್ನು ಮಾಡಿರುವುದು ಸುಳ್ಳಲ್ಲ. ಆದರೆ ತಮ್ಮ ರಾಜಕೀಯ ಉಳಿವಿಗಾಗಿ ಇದೀಗ ಅಂಬೇಡ್ಕರ್ ಹೆಸರು ಹೇಳಿ ಜನರನ್ನು ವಂಚಿಸುತ್ತಿದೆ. ಯಾವುದೇ ಒಂದು ಜಾತಿ ಅಥವಾ ಹಣದಿಂದ ರಾಜಕೀಯವಾಗಿ ಮೇಲೆದ್ದು ಬರಲು ಸಾಧ್ಯವಿಲ್ಲ ಹಾಗೂ ನಾನಲ್ಲದೆ ಇಲ್ಲಿ ಗೆಲ್ಲವು ಸಾಧ್ಯವೇ ಇಲ್ಲ ಎಂಬುದನ್ನು ತಲೆಗೇರಿಸಿಕೊಂಡು ಮತ್ತೋರ್ವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎನ್ನುವ ಮೂಲಕ ಕಾಪು ಬಿಜೆಪಿ ಸ್ಥಿತಿಯನ್ನು ಇನ್‌ಡೈರೆಕ್ಟಾಗಿ ನಾಯಕರು ಹಾಗೂ ಕಾರ್ಯಕರ್ತರಿಗೆ ತಿಳಿ ಹೇಳಿದ್ದಾರೆ.

ವರದಿ-ಸುರೇಶ್ ಎರ್ಮಾಳ್

Related posts

Leave a Reply