Header Ads
Header Ads
Header Ads
Breaking News

ಸ್ವಾಮಿ ವಿವೇಕಾನಂದ ಕೇರಳ ಸಂದರ್ಶನಕ್ಕೆ 125 ವರ್ಷ ಸಾಕ್ಷ್ಯಚಿತ್ರ ಕ್ಕೆ ಸಜ್ಜಾಗುತ್ತಿರುವ ಮಂಜೇಶ್ವರ ಸ್ವಾಗತಿ ಸಮಿತಿ ರೂಪೀಕರಣ ಡಿಸಂಬರ್ 7 ಕ್ಕೆ ಹೊಸಂಗಡಿಯಲ್ಲಿ ಸಂಗಮ

ಮಂಜೇಶ್ವರ: ಸ್ವಾಮಿ ವಿವೇಕಾನಂದ ಕೇರಳ ಸಂದರ್ಶನ ನಡೆಸಿ 125 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇರಳ ಸರಕಾರ 14 ಜಿಲ್ಲೆಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದೆ.

ಇದರ ಭಾಗವಾಗಿ ಕಾಸರಗೋಡು ಜಿಲ್ಲೆಯ ನಡೆಸಬೇಕಾದ ಕಾರ್ಯಕ್ರಮಕ್ಕೆ ಗಡಿನಾಡ ಪ್ರದೇಶವಾದ ಕನ್ನಡಿಗರು ಅಧಿಕವಿರುವ ಮಂಜೇಶ್ವರವನ್ನು ಆಯ್ಕೆ ಮಾಡಲಾಗಿದೆ.
ಆ ಪ್ರಯುಕ್ತ 7 ಡಿಸಂಬರ್ 2017 ರಂದು ಮದ್ಯಾಹ್ನ 3 ಗಂಟೆಗೆ ಮಂಜೇಶ್ವರದಲ್ಲಿ ನಡೆಸುವಂತೆ ವಿವಿಧ ರಾಜಕೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯದಲ್ಲಿರುವ ನೇತಾರರು ಒಮ್ಮತದ ತೀರ್ಮಾನ ತೆಗೆದಿದ್ದಾರೆ.

ಈ ಬಗ್ಗೆ ಮಂಜೇಶ್ವರ ಹಿಲ್ ಸೈಡ್ ಸಭಾಂಗಣದಲ್ಲಿ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷ ಅಝೀಝ್ ಹಾಜಿಯವರ ನೇತೃತ್ವದಲ್ಲಿ ನಡೆದ ಸ್ವಾಗತ ಸಮಿತಿ ಸಭೆಗೆ ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಚಾಲನೆ ನೀಡಿದರು. ಬಳಿಕ ಕಾರ್ಯಕ್ರಮದ ಚೇಯರ್ ಮ್ಯಾನ್ ಕೆ ಆರ್ ಜಯಾನಂದ ಮಾದ್ಯಮದವರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬಳಿಕ ಶಾಸಕ ಪಿ ಬಿ ಅಬ್ದುಲ್ ರಜಾಕ್, ಜಿಲ್ಲಾಧಿಕಾರಿ ಜೀವನ್ ಬಾಬು, ಗ್ರಾ. ಪಂ. ಹಾಗೂ ಬ್ಲೋಕ್ ಪಂ. ಗಳ ಅಧ್ಯಕ್ಷರುಗಳಾದ ಅಝೀಝ್ ಹಾಜಿ , ಎಕೆ ಎಂ ಅಶ್ರಫ್, ಹರೀಶ್ಚಂದ್ರ, ವಿಶ್ವನಾಥ ಕುದುರು, ಬಾಲಕೃಷ್ಣ ಶೆಟ್ಟಿಗಾರ್, ಪತ್ರಕರ್ತ ಅಬ್ದುಲ್ ರಹ್ಮಾನ್ ಉದ್ಯಾವರ, ಗೋಪಾಲ ಶೆಟ್ಟಿ ಅರಿಬೈಲು ಸೇರಿದಂತೆ ವಿವಿಧ ರಾಜಕೀಯ ಸಾಮಾಜಿಕ ವಲಯಗಳಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳನ್ನು ಸಮಿತಿಗೆ ಸೇರ್ಪಡಿಸಿ ಸ್ವಾಗತ ಸಮಿತಿಯನ್ನು ರೂಪೀಕರಿಸಲಾಯಿತು.

ವರದಿ: ರೆಹಮಾನ್ ಉದ್ಯಾವರ, ಮಂಜೇಶ್ವರ

Related posts

Leave a Reply