Header Ads
Header Ads
Breaking News

ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಗಾಂಧೀಜಿ ಚಿಂತನೆಗಳೇ ಪರಿಹಾರ : ಡಾ.ಎನ್.ರಾಧಾಕೃಷ್ಣನ್

ಮಂಜೇಶ್ವರ: : ಭಾರತದ ಪ್ರಸಕ್ತ ಕಲುಷಿತ ಸಮಾಜದ ಶುಚೀಕರಣಕ್ಕೆ ಮಹಾತ್ಮಾ ಗಾಂಧೀಜಿಯವರ ಚಿಂತನೆಗಳೇ  ಸೂಕ್ತ ಪರಿಹಾರ ಹಾಗೂ ಗಾಂಧೀವಾದಕ್ಕೆ ಪರ್ಯಾಯ ಸಿದ್ಧಾಂತಗಳು ಭಾರತೀಯ ಸಾಮಾಜಿಕ ವಲಯದಲ್ಲಿ ಇಲ್ಲ ಎಂದು  ತಿರುವನಂತಪುರ  ಕೇರಳ ಗಾಂಧೀ ಸ್ಮಾರಕ ನಿಲಯ ಅಧ್ಯಕ್ಷ ಡಾ.ಎನ್.ರಾಧಾಕೃಷ್ಣನ್ ಅವರು ಹೇಳಿದರು.ವಿನೋಬಾ ವೆಂಕಟೇಶ್ ರಾವ್ ಶಾಂತಿ ಸೇನಾ ಫೌಂಡೇಶನ್  ಹಾಗೂ ಕೇರಳ ಗಾಂಧೀ ಸ್ಮಾರಕ ನಿಲಯ ಇದರ ಆಶ್ರಯದಲ್ಲಿ  150ನೇ ಗಾಂಧೀ ಜಯಂತಿಯ  ಪ್ರಯುಕ್ತ ಹಮ್ಮಿಕೊಳ್ಳಲಾದ ಚರ್ಚಾಗೋಷ್ಠಿಯನ್ನು ಉದ್ಘಾಟಿಸಿ ಅವರು  ಮಾತನಾಡಿದರು. ಮತೀಯವಾದ, ದ್ವೇಷ, ಅಸಹನೆ, ಜನಾಂಗವಾದ,ಭಾಷಾ ಅಂದಾಭಿಮಾನ ಇತ್ಯಾದಿಗಳನ್ನೇ ಬಂಡವಾಳವಾಗಿಸಿಕೊಂಡ ಹಲವಾರು ಸಿದ್ಧಾಂತಗಳು ಜನರನ್ನು ಪರಸ್ಪರ ಅಪನಂಬಿಕೆ ಹಾಗೂ ಭೀತಿಯ ಕೂಪಕ್ಕೆ ತಳ್ಳಿದೆ, ಭಾರತದ ಬಹುರೂಪಿ ಸಂಸ್ಕೃತಿಯಲ್ಲಿ ಈ ಸಿದ್ಧಾಂತಗಳಿಗೆ ಯಾವುದೇ ಸ್ಥಾಯೀ ಸ್ಥಾನಗಳಿಲ್ಲ ಎಂದು ಅವರು ಹೇಳಿದರು.ಸಮಾರಂಭದಲ್ಲಿ  ವಿನೋಬಾ ವೆಂಕಟೇಶ್ ರಾವ್ ಶಾಂತಿ ಶೇನಾ ಫೌಂಡೇಶನ್ ಸಂಚಾಲಕ, ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ  ಹರ್ಷಾದ್ ವರ್ಕಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈವಿದ್ಯತೆಯನ್ನು ಇಲ್ಲವಾಗಿಸಿ , ಏಕತೆಯನ್ನು ಸೃಷ್ಠಿಸಲಾಗದು, ವೈವಿದ್ಯತೆಯನ್ನು ಅಂಗೀಕರಿಸಿ ಸಮಭಾವನೆಯಿಂದ ಮುನ್ನಡೆಯುವುದೇ ಭಾರತಕ್ಕೆ ಹಿತಕರ, ಗಾಂಧೀಜಿಯವರ ಜೀವನ ಮತ್ತು ಬೋಧನೆಗಳೇ ಜನರನ್ನು ಒಗ್ಗೂಡಿಸಲಿರುವ ಮಂತ್ರವಾಗಿದೆ ಎಂದು ಅವರು ಹೇಳಿದರು.ಹಿರಿಯ ಗಾಂಧೀವಾದಿಗಳಾದ ಕಣ್ಣನ್ ಮಾಸ್ತರ್, ಕುಮಾರನ್  ಮಾಸ್ತರ್, ಫ್ರೊ. ಸುರೇಂದ್ರನಾಥ್, ಜಯಪ್ರಕಾಶ್ ಕಾರಡ್ಕ, ಮಂಜೇಶ್ವರ ಬ್ಲಾಕ್ ಪಂಚಾಯತು ಉಪಾಧ್ಯಕ್ಷೆ  ಮಮತಾ ದಿವಾಕರ್, ಗ್ರಾಮ ಪಂಚಾಯತು ಉಪಾಧ್ಯಕ್ಷೆ ಶಶಿಕಲಾ, ಸೇರಿದಂತೆ ಹಲವು ಗಣ್ಯಾತಿ ಗಣ್ಯರು ಉಪಸ್ಥರಿದ್ದರು

 

 

Related posts

Leave a Reply