Breaking News

ಹಂಗೆರಿ ವಿಶ್ವ ಈಜು ಚಾಂಪಿಯನ್‌ಶಿಪ್, ಮಿಶ್ರ ವಿಭಾಗದಲ್ಲಿ ಅಮೆರಿಕ ತಂಡದ ವಿಶ್ವ ದಾಖಲೆ

ವಿಶ್ವ ಈಜು ಚಾಂಪಿಯನ್ಶಿಪ್ನ ೪/೧೦೦ ಮೀ. ಮಿಶ್ರ ವಿಭಾಗದಲ್ಲಿ ಅಮೆರಿಕ ತಂಡ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಚಿನ್ನದ ಪದಕ ಗೆದ್ದಿದೆ.
ಹಂಗೇರಿ ಬುದಾಪೆಸ್ಟ್ನಲ್ಲಿ ಬುಧವಾರ ನಡೆದ ಸ್ಪರ್ಧೆಯಲ್ಲಿ ಅಮೆರಿಕದ ರಿಯಾನ್ ಮರ್ಫಿ, ಕೆವಿನ್ ಕಾರ್ಡಸ್, ಕೆಲ್ಸಿ ವೊರೆಲ್ ಮತ್ತು ಮಲ್ಲೊರಿ ತಂಡ ೩ ನಿಮಿಷ, ೪೦.೨೮ ಸೆಕೆಂಡ್ನಲ್ಲಿ ಗುರಿ ಮುಟ್ಟಿ ವಿಶ್ವ ದಾಖಲೆ ನಿರ್ಮಿಸಿತು. ಇದಕ್ಕೂ ಮುನ್ನ ಬ್ರಿಟನ್ ತಂಡ ೨ ವರ್ಷದ ಹಿಂದೆ ೩ ನಿಮಿಷ, ೪೧.೭೧ ಸೆಕೆಂಡ್ನಲ್ಲಿ ಗುರಿ ಮುಟ್ಟಿ ವಿಶ್ವ ದಾಖಲೆ ನಿರ್ಮಿಸಿತ್ತು. ಇದೀಗ ಈ ದಾಖಲೆಯನ್ನು ಅಮೆರಿಕ ತಂಡ ಮುರಿದಿದೆ.

Related posts

Leave a Reply