Header Ads
Breaking News

ಹಂಡೇಲು ಕಾಪಿಕಾಡು ಕಾಂಕ್ರೀಟು ರಸ್ತೆ ಕಾಮಗಾರಿಗೆ ಚಾಲನೆ; ಕರ್ನಾಟಕ ನೀರಾವರಿ ನಿಗಮದಿಂದ ಮಂಜೂರಾದ ಅನುದಾನ

ಮೂಡುಬಿದಿರೆ : ಕರ್ನಾಟಕ ನೀರಾವರಿ ನಿಗಮದಿಂದ ಮಂಜೂರಾದ ರೂ.40 ಲಕ್ಷ ಅನುದಾನದಲ್ಲಿ ನಡೆಯಲಿರುವ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಡೇಲು ಕಾಪಿಕಾಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೋನಿ ರಸ್ತೆ ಕಾಂಕ್ರೀಟು ಕಾಮಗಾರಿಗೆ ಚಾಲನೆ ನೀಡಲಾಯಿತು.

ಶಾಸಕ ಉಮಾನಾಥ ಕೋಟ್ಯಾನ್ ಕಾಮಗಾರಿಗೆ ಚಾಲನೆ ನೀಡಿ, ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧನ್ಯತೆಯನ್ನು ಕೊಟ್ಟಿದ್ದೇನೆ. ಸರ್ಕಾರ, ಸಂಬಂಧಪಟ್ಟ ಇಲಾಖೆಯಿಂದ ರಸ್ತೆ ಅಭಿವೃದ್ಧಿಗೆ ಅನುದಾನ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಸುಮಾರು ರೂ.108 ಕೋಟಿಗೂ ಅಧಿಕ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳಾಗಿವೆ. ಕೆಲವು ಪ್ರದೇಶಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದರು.

ಪುತ್ತಿಗೆ ಗ್ರಾಪಂ ಸದಸ್ಯ ಗಿರೀಶ್ ಕುಮಾರ್ ಹಂಡೇಲು, ಗ್ರಾಮಸ್ಥರಾದ ಸದಾನಂದ ಪೂಜಾರಿ ಗುರುಸ್ವಾಮಿ, ಮನೋಜ್ ಕುಮಾರ್, ರವೀಂದ್ರ ಕರ್ಕೇರ, ಉಮೇಶ್ ಕುಲಾಲ್, ಗಣೇಶ್ ಕುಲಾಲ್, ವಿಠಲ ನಾಯ್ಕ್, ಧರ್ಮಣ್ಣ ಪರವ, ಸುಧಾಕರ ಪೂಜಾರಿ ಅಂಗಡಿಮನೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *