Header Ads
Header Ads
Header Ads
Breaking News

ಹಂದಿ ಹಿಡಿಯುವ ಉರುಳಿಗೆ ಬಿದ್ದ ಚಿರತೆ ಮಂದಾರ್ತಿ ಸಮೀಪದ ನಿರ್ಜಡ್ಡಿ ಬಳಿ ಘಟನೆ

 

ಚಿರತೆಯೊಂದು ಹಂದಿ ಹಿಡಿಯುವ ಉರುಳಿಗೆ ಬಿದ್ದ ಘಟನೆ ಮಂದಾರ್ತಿ ಸಮೀಪದ ನಿರ್ಜಡ್ಡಿ ಬಳಿ ನಡೆದಿದೆ. ಬಳಿಕ ಸುಮಾರು ಐದು ಗಂಟೆಗಳ ಕಾರ್‍ಯಾಚರಣೆ ಮೂಲಕ ರಕ್ಷಿಸಲಾಗಿದೆ.ಸ್ಥಳೀಯ ನಿವಾಸಿ ಗುಲಾಬಿ ಎನ್ನುವವರು ಬೆಳಿಗ್ಗೆ ೭.೩೦ಕ್ಕೆ ಕೆಲಸಕ್ಕೆಂದು ತೆರಳುತ್ತಿರುವಾಗ, ಚಿರತೆಯ ಗರ್ಜನೆ ಕೇಳಿ ಭಯಭೀತರಾಗಿ ಮನೆಗೆ ಬಂದು ತಿಳಿಸಿದ್ದಾರೆ.

ಅದೇ ವೇಳೆ ಸ್ಥಳೀಯ ನಿವಾಸಿ ಮೆಸ್ಕಾಂನ ಲೈನ್‌ಮ್ಯಾನ್ ಸುಬ್ರಹ್ಮಣ್ಯ ಕೆಲವರೊಂದಿಗೆ ಹೋಗಿ ಪರಿಶೀಲಿಸಿದಾಗ ಚಿರತೆಯೊಂದು ಹಂದಿ ಉರುಳಿಗೆ ಬಿದ್ದಿದ್ದನ್ನ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ತದ ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು, ಅರಿವಳಿಕೆ ನೀಡಿ ಹಂದಿ ಉರುಳಿನಿಂದ ರಕ್ಷಿಸಲಾಯಿತು.ಕೆಲವು ತಿಂಗಳುಗಳಿಂದ ಈ ಪರಿಸರದಲ್ಲಿ ಕಾಣಿಸಿಕೊಂಡಿದ್ದ ಈ ಚಿರತೆ ಹಂದಿ ಉರುಳಿಗೆ ಸಿಲುಕ್ಕಿದ್ದು ಸಾರ್ವಜನಿಕರಲ್ಲಿ ನೆಮ್ಮದಿ ತಂದಿದೆ. ಈಗಾಗಲೇ ಹಲವು ಮನೆಗಳ ನಾಯಿ ಮತ್ತು ಕರುಗಳನ್ನು ಹೊತ್ತೋಯ್ದಿದೆ ಎನ್ನಲಾಗಿದೆ.ಕಾರ್‍ಯಾಚರಣೆಯಲ್ಲಿ ಅರಣ್ಯಾಧಿಕಾರಿ ಜೀವನ್ ಶೆಟ್ಟಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

Related posts

Leave a Reply