Header Ads
Breaking News

ಹಕ್ಕುಪತ್ರ ನೀಡುತ್ತೇನೆಂದು ನಂಬಿಸಿ ಮನೆ ಕೆಡವಿದ ಕಂದಾಯ ಇಲಾಖೆ: ಎಸ್‌ಡಿಐ ಆರೋಪ

ಮನೆಯಿಂದ ಹೊರಗೆ ಬನ್ನಿ 94 ಸಿ ಹಕ್ಕು ಪತ್ರ  ಮನೆಯನ್ನು ಕಂದಾಯ ಇಲಾಖೆ ಮತ್ತು ಪೊಲೀಸರು ಕೆಡವಿ ಹಾಕಿದ್ದು ಇದು ಖಂಡನೀಯವಾಗಿದೆ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಆರೋಪ ಮಾಡಿದೆ.ಸುಳ್ಯದ ಪ್ರೆಸ್ ಕ್ಲಬ್‌ನನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್.ಡಿ ಪಿ,ಐ ಅಧ್ಯಕ್ಷ ರಪೀಕ್ ಎಂ.ಎ ಅವರು ಯಾವುದೇ ನೋಟಿಸ್ ನೀಡದೆ ಸರಕಾರಿ ಜಾಗದಲ್ಲಿ ಮನೆ ಕಟ್ಟಿದ್ದಾರೆ ಎಂಬ ಆರೋಪದಡಿಯಲ್ಲಿ ಜೆ.ಬಿ.ಸಿ ತರಿಸಿ ಮನೆಯಲ್ಲಿದ್ದ ಸಾಮಾನುಗಳನ್ನು ಎಳೆದು ಹಾಕಿ ಹಾಳುಗೆಡವಿದ್ದಾರೆ. ಹಣವಂತವರು ಸರಕಾರಿ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಕೊಂಡು ವಾಣಿಜ್ಯ ವ್ಯವಹಾರ ಮಾಡುತ್ತಿದ್ದಾರೆ.ಇದು ಕಂದಾಯ ಇಲಾಖೆಯವರಿಗೆ ಕಾಣುತ್ತಿಲ್ಲವೆ ? ಸರಕಾರ ಒಂದು ಕಡೆ ಮನೆ ಇಲ್ಲದೆ ಅಕ್ರಮವಾಗಿ ಮನೆಕಟ್ಟಿಕೊಂಡಿರುವವರಿಗೆ ಮನೆ ಸಕ್ರಮಗೊಳಿಸಲು ೯೪ ಸಿಯಂತ ಯೋಜನೆಗಳನ್ನು ಜಾರಿಗೆ ತಂದು ಮನೆಯನ್ನು ಸಕ್ರಮಗೊಳಿಸುತ್ತಿದೆ ಸರಕಾರದ ಧೋರಣೆ ಯಾವುದೆಂದು ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದರು.ಪತ್ರಿಗೋಷ್ಠಿ ಸುಳ್ಯ ನಗರ ಪಂಚಾಯತ್ ಸದಸ್ಯ ಉಮ್ಮರ್,ಎಸ್.ಡಿ.ಪಿ.ಐ ಕಾರ್ಯದರ್ಶಿ ಮುಸ್ತಾಪ,ಸಂತ್ರಸ್ಥ ಮಹಿಳೆ ಭಿಪಾತೀಮ ಇತರರು ಉಪಸ್ಥಿತರಿದ್ದರು.

Related posts

Leave a Reply