
ಆಧುನಿಕ ಕೃಷಿಕರೆಂದೇ ಹೆಸರು ಪಡೆದಿರುವ ಅಬೂಬಕ್ಕರ್ ಅವರು ಹಡೀಲು ಬಿದ್ದಿರುವ ಬಂಜರುಭೂಮಿಯನ್ನು ಹದಗೊಳಿಸಿ ಭತ್ತದ ಬೇಸಾಯ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಗ್ರಾಮದ ಮುರತಂಗಡಿ ಎಂಬಲ್ಲಿ ಪದವಿಧರ ಹಾಗೂ ಹೋಟೆಲ್ನಲ್ಲಿ ಮ್ಯಾನೇಜರ್ ಆಗಿರುವ ಅಬೂಬಕ್ಕರ್ ಅವರು ನಾಲ್ಕು ವರ್ಷದಿಂದ ಹಡೀಲು ಬಿದ್ದ ಬಂಜರುಭೂಮಿಯನ್ನು ಹದಗೊಳಿಸಿ ಭತ್ತ ಬೇಸಾಯ ಮಾಡಿಕೊಂಡು ಬರುತ್ತಿದ್ದಾರೆ. ಇವರ ಈ ಕಾಯಕಕ್ಕೆ ಉಪಾನ್ಯಾಸಕಿಯಾಗಿರುವ ಪತ್ನಿ ಆಸ್ಮಾಇತ್ತೀಚೆಗೆ ಹಡೀಲು ಬಿದ್ದಿರುವ ಒಂದುವರೆ ಯಕರೇ ಗದ್ದೆಯನ್ನು ಹದಗೊಳಿಸಿ ಸುಮಾರು 105 ಜಾತಿಯ ಭತ್ತವನ್ನು ಬಿತ್ತಿ ಯಶ್ವಸಿಯಾಗಿ 105 ಬಗೆಯ ಭತ್ತದ ಬೆಳೆಯನ್ನು ತೆಗೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಇವರು ಯಾವುದೇ ರೀತಿಯ ಕೃತಕ ಗೊಬ್ಬರ ಹಾಗೂ ವಿದೇಶಿ ತಳಿಯ ದನದ ಹಟ್ಟಿಗೊಬ್ಬರವನ್ನು ಗದ್ದೆಗಳಿಗೆ ಉಪಯೋಗಿಸದೆ ಗದ್ದೆಯಲ್ಲಿರುವ ಅ ಮಣ್ಣಿನಲ್ಲಿರುವ ಸತ್ವ ಕೇವಲ ಮಳೆ ನೀರಿನಿಂದಲೇ ಬತ್ತದ ನಾಟಿ ಮಾಡುವುದು ಅವರ ವೈಶಿಷ್ಟ್ಯವಾಗಿದೆ. ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಅಬೂಬಕ್ಕರ್ ಅವರಿಗೆ ಮೆಚ್ಚಿ ಮೂಡಬಿದ್ರೆ ನಮ್ಮ ನಾಡು ಒಕ್ಕೂಟ ಪದಾಧಿಕಾರಿಗಳು ಬೇಸಾಯ ಮಾಡುವ ಸ್ಥಳಕ್ಕೆ ಬಂದು ಇವರ ಕಾರ್ಯವನ್ನು ಮೆಚ್ಚಿ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು. ಈ ಸಂದರ್ಭ ಅಬ್ದುಲ್ ಹಮೀದ್ ಮೂಡಬಿದ್ರೆ, ಹುಸ್ಸಿನ್ ಹೈಕಾಡಿ, ಅಶ್ರಫ್ ಮೂಡಬಿದ್ರೆ. ಮತೀನ್ ಮೂಡಬಿದ್ರೆ, ಮುಂತಾದವರು ಉಪಸ್ಥಿತರಿದ್ದರು.