Header Ads
Header Ads
Header Ads
Breaking News

ಹತ್ತಾರು ವರುಷದಿಂದ ಹಡಿಲು ಬಿದ್ದ ಗದ್ದೆ ಈಗ ಹಸನು: ಸಿಟಿ ಕಾಲೇಜಿನ ಮಕ್ಕಳಿಂದ ಕೃಷಿ ಕ್ರಾಂತಿ

ಅದು ಹತ್ತಾರು ವರ್ಷಗಳಿಂದ ಕೃಷಿಕೆ ಆಯೋಗ್ಯವಾಗಿ ಹಡೀಲು ಬಿದ್ದಿದ್ದ ಗದ್ದೆ. ಇನ್ಮುಂದೆ ಅಲ್ಲಿ ಕೃಷಿ ಕೆಲಸವೇ ನಡೆಯೋಲ್ಲ ಅಂತ ಅಲ್ಲಿನ ರೈತರು ಸುಮ್ಮನಾಗಿದ್ರು. ಆದ್ರೆ ಆ ಸಿಟಿ ಕಾಲೇಜಿನ ಮಕ್ಕಳು ಮಾತ್ರ ಅದನ್ನೇ ಸವಾಲಾಗಿ ಸ್ವೀಕರಿಸಿ ಇಂದು ಬರಡು ಭೂಮಿಯಲ್ಲಿ ಹಚ್ಚ ಹಸಿರಿನ ಬೆಳೆ ತೆಗೆಯೋ ಕೆಲಸಕ್ಕೆ ಮುಂದಾಗಿದ್ದಾರೆ. ಇನ್ನು ಇವ್ರ ಈ ಕಾರ್ಯಕ್ಕೆ ರಾಜ್ಯದ ಆಹಾರ ಸಚಿವ ಖಾದರ್ ಕೂಡ ಬೆನ್ನೆಲುಬಾಗಿ ನಿಂತಿದ್ದು, ಮಕ್ಕಳ ಜೊತೆ ಗದ್ದೆಗಿಳಿದು ಒಂದೀಡಿ ದಿನ ಕೃಷಿ ಕೆಲಸ ಮಾಡಿದ್ದಾರೆ.

ಹೇಳಿ ಕೇಳಿ ನಮ್ಮದು ಕೃಷಿ ಪ್ರಧಾನ ದೇಶ. ಇಲ್ಲಿನ ರೈತನಿಗೆ ಕೃಷಿಯೇ ಜೀವನಾಧಾರ. ಹೀಗಾಗಿ ಕೃಷಿಯನ್ನೇ ನಂಬಿಕೊಂಡಿರೋ ರೈತ ಈ ಮಳೇಗಾಲದಲ್ಲಿ ತನ್ನ ಕೃಷಿ ಚಟುವಟಿಕೆಯತ್ತ ಮುಖ ಮಾಡ್ತಾನೆ. ಆದ್ರೆ ಇಂದಿಗೂ ದೇಶದ ಅನೇಕ ಭಾಗಗಳಲ್ಲಿ ಎಕರೆಗಟ್ಟಲೇ ಭೂಮಿಯಿದ್ರೂ ಅದೆಲ್ಲಾ ಕೃಷಿಗೆ ಯೋಗ್ಯವಾಗಿಲ್ಲ. ಭೂಮಿಯನ್ನ ಹದ ಮಾಡೋಕೂ ಆಗದೇ ಅತ್ತ ರೈತ ಕೃಷಿ ಮಾಡೋಕೂ ಆಗದೇ ಎಕರೆಗಟ್ಟಲೇ ಗದ್ದೆ ಹಡೀಲು ಬಿದ್ದಿದೆ. ಆದ್ರೆ ಇಂಥಹ ಹಡೀಲು ಬಿದ್ದ ಭೂಮಿಯಲ್ಲಿ ಬಂಗಾರದ ಬೆಳೆ ತೆಗೆಯೋಕೆ ಆ ಮಕ್ಕಳು ಹೊರಟಿದ್ದಾರೆ. ಕಾಲೇಜಿನ ನಾಲ್ಕು ಗೋಡೆಗಳ ಮಧ್ಯೆ ಕೂತು ಸುಮ್ಮನೆ ಪಾಠ ಕೇಳಬೇಕಿದ್ದ ನೂರಾರು ಸಿಟಿ ಮಕ್ಕಳು ಕೃಷಿ ಕ್ರಾಂತಿ ನಡೆಸಲು ಮುಂದಾಗಿದ್ದಾರೆ. ಇದ್ರ ಫಲವೇ ಇಂದು ಮಂಗಳೂರಿನ ಕೊಣಾಜೆ ಸಮೀಪದ ಅಣ್ಣೆರೆಪಾಲು ಎಂಬಲ್ಲಿನ ಹಡೀಲು ಭೂಮಿ ಹಚ್ಚ ಹಸಿರಿನಿಂದ ನಳನಳಿಸುತ್ತಿದೆ. ಹೌದು… ಮಂಗಳೂರು ರಥಬೀದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು, ರೈತ ಸಂಘ ಹಸಿರು ಸೇನೆ ಸಹಯೋಗದೊಂಧಿಗೆ ಕಳೆದೊಂದು ತಿಂಗಳಿನಿಂದ ಈ ಹಡೀಲು ಭೂಮಿಯಲ್ಲಿ ಕೃಷಿ ಕ್ರಾಂತಿಗೆ ಇಳಿದಿದ್ಧಾರೆ. ಅದ್ರಂತೆ ಇಲ್ಲಿನ ಹಡೀಲು ಭೂಮಿಯ ಮಾಲಕರ ಅನುಮತಿಯ ಮೇರೆಗೆ ಗದ್ದೆಯಲ್ಲಿ ಕೃಷಿಗೆ ಇಳಿದಿದ್ದಾರೆ. ಹೀಗಾಗಲೇ ಇದ್ರ ಕಾರ್ಯಕ್ಕೆ ಕೆಲ ದಾನಿಗಳು ಕೂಡ ಕೈ ಜೋಡಿಸಿರೋ ಪರಿಣಾಮ ತಿಂಗಳ ಕಾಲದ ಶ್ರಮ ಸಾರ್ಥಕತೆ ಕಾಣಲು ಸಿದ್ದತೆ ನಡೆದಿದೆ. ಈಗಾಗಲೇ ಹಡೀಲು ಭೂಮಿ ಒಂದೇ ತಿಂಗಳಲ್ಲಿ ಭತ್ತದ ಪೈರು ನಾಟಿ ಮಾಡೋ ಹಂತಕ್ಕೆ ಬಂದು ನಿಂತಿದ್ದು, ಎರಡು ಸುತ್ತಿನ ಭತ್ತದ ನಾಟಿ ಕೂಡ ನಡಯೋ ಮೂಲಕ ನೂರಾರು ಮಕ್ಕಳ ಹತ್ತಾರು ದಿನಗಳ ಶ್ರಮ ಸಾರ್ಥಕ ಭಾವ ಮೂಢಿಸಿದೆ.


ರಥಬೀದಿ ಕಾಲೇಜಿನ ಮಕ್ಕಳಿಗೆ ಕೃಷಿ ಕ್ರಾಂತಿ ಮಾಡಬೇಕು ಅನ್ನೋ ಕನಸಿತ್ತು. ಹೀಗಾಗಿ ಈ ಕನಸಿಗೆ ಕಾಲೇಜಿನ ಶಿಕ್ಷಕರಾದ ನವೀನ್ ಕೊಣಾಜೆ ಮತ್ತಿತರರು ಬೆಂಬಲವಾಗಿ ನಿಂತಿದ್ದಾರೆ. ಅದ್ರಂತೆ ರೈತ ಸಂಘ ಕೂಡ ಬೆಂಬಲಕ್ಕೆ ಬಂದಿದ್ದು, ಕೆಲ ದಾನಿಗಳು ಕೂಢ ನೆರವಿಗೆ ನಿಂತಿದ್ದಾರೆ. ಅದ್ರಂತೆ ಕೆಲ ಖಾಸಗಿ ವ್ಯಕ್ಯಿಗಳಿಂದ ಕೊಣಾಜೆಯ ಈ ಗದ್ದೆಯನ್ನ ಪಡೆಯಲಾಗಿದ್ದು, ತಿಂಗಳ ಹಿಂದೆ ಕೃಷಿ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ ಉರುಮೆ, ಪೈರು ನಾಟಿ ಸೇರಿದಂತೆ ಕೃಷಿ ಕಾರ್ಯಕ್ಕೆ ಹಣದ ಸಮಸ್ಯೆ ಎದುರಾಗದಾಗ ಸ್ಥಳೀಯರೇ ಆಗಿರೋ ದೈವರಾಜ್ ರೈ ಎಂಬವ್ರು ಹಣಕಾಸಿನ ನೆರವು ನೀಢಿದ್ದಾರೆ. ಇಷ್ಟಾದ ಮೇಲೆ ಪ್ರತೀ ಶನಿವಾರ ಮತ್ತು ಭಾನುವಾರ ಕಾಲೇಜಿನ ನೂರಾರು ಹೆಣ್ಮಕ್ಕಳು ಮತ್ತು ಒಂದಷ್ಟು ಹುಡುಗರು ಗದ್ದೆಗಿಳಿದು ಕೆಲಸ ಶುರುಮಾಡಿದ್ದಾರೆ. ಇನ್ನು ಈ ಮಕ್ಕಳಿಗೆ ಕೃಷಿಯ ಬಗ್ಗೆ ಅಷ್ಟಾಗಿ ಮಾಹಿತಿಯಿರದ ಕಾರಣದಿಂದ ಸ್ಥಳೀಯರೇ ಆಗಿರೋ ಕೆಲ ರೈತರು ಮತ್ತು ರೈತ ಸಂಘದ ಮುಖಂಡರು ಕೃಷಿ ಪಾಠ ಮಾಡಿದ್ದಾರೆ. ಅದ್ರಂತೆ ಇಡೀ ಹಡೀಲು ಗದ್ದೆಯನ್ನ ಹದ ಮಾಡಿದ ಬಳಿಕ ಉಳುಮೆ ಮಾಡಿ ಸದ್ಯ ಪೈರು ನೆಡೋ ಹಂತಕ್ಕೆ ಬಂದಿದೆ. ಅದ್ರಂತೆ ಇಂದು ಮಕ್ಕಳು ಪೈರು ನೆಡೋ ಕೆಲಸವನ್ನ ಕೂಢ ಮಾಡಿ ಮುಗಿಸಿದ್ದು, ಭರ್ಜರಿ ಬೆಳೆ ತಗೆಯೋ ಖುಷಿಯಲ್ಲಿದ್ದಾರೆ. ಇನ್ನು ಇಲ್ಲಿ ಬೆಳೇದ ಬೆಳೆಯನ್ನ ಅದೇ ಮಕ್ಕಳಿಗೆ ನೀಡಬೇಕು ಎನ್ನುವುದು ರೈತ ಸಂಘದ ಆಶಯ ಕೂಡ.

ಇನ್ನು ಈ ಕಾರ್ಯಕ್ರಮದಲ್ಲಿ ಮಂಗಳೂರು ರಥಬೀದಿಯ ಪದವಿ ವಿದ್ಯಾರ್ಥಿಗಳ ದಂಡೇ ಭಾಗವಹಿಸಿತ್ತು. ಹಡೀಲು ಬಿದ್ದ ಭೂಮಿಯನ್ನ ಈ ವಿದ್ಯಾರ್ಥಿಗಳ ತಂಢ ಕಳೆದೊಂದು ತಿಂಗಳಿನಿಂದ ಚೆನ್ನಾಗಿ ಹದ ಮಾಡಿ ಕೃಷಿಗೆ ಯೋಗ್ಯವಾಗೋವಂತೆ ಮಾಡಿದೆ. ಸದ್ಯ ಈ ಭೂಮಿಯನ್ನ ಕೃಷಿಕೆ ಯೋಗ್ಯವಾಗುವಂತೆ ತಯಾರಿಸಿ ಸಿಟಿ ಲೈಫಿನ ನೂರಾರು ಹೆಣ್ಮಕ್ಕಳು ಮತ್ತು ಗಂಡ್ಮಕ್ಕಳು ಅಲ್ಲಿ ಕೃಷಿ ಮಾಡಿದ್ದಾರೆ. ತಾವೇ ಪೈರು ನೆಡೋ ಕೆಲಸದಿಂದ ಹಿಡಿದು ಭತ್ತದ ಕೃಷಿಕೆ ಬೇಕಾದ ಎಲ್ಲವನ್ನ ಮಾಡಿದ್ದಾರೆ. ಸದ್ಯ ಎರಡನೇ ಸುತ್ತಿನ ಭತ್ತದ ಪೈರು ಕಾರ್ಯ ನಡೀತಾ ಇದ್ದು, ಮಕ್ಕಳಿಗೂ ಈ ಕೆಲಸ ಸಖತ್ ಖುಷಿ ಕೊಟ್ಟಿದೆ. ಇನ್ನು ನಗರ ಪ್ರದೇಶದ ಕಾಲೇಜುಗಳಲ್ಲಿ ಕಲಿಯೋ ಇವ್ರೆಲ್ಲಾ ವ್ಯವಸಾಯ ಅಂದ್ರೆ ಏನು ಅಂತ ಜಸ್ಟ್ ಓದಿ ತಿಳಿದು ಕೊಂಡಿರ್ತಾರೆ. ಹೀಗಾಗಿ ಈ ಗದ್ದೆಯಲ್ಲಿ ಹೇಗೆಲ್ಲಾ ಕೆಲ್ಸ ಮಾಡ್ತಾರೆ ಅನ್ನೋದು ಈ ಸಿಟಿ ಹುಡೀಗೀರಿಗೆ ಹೇಗ್ ತಾನೇ ಗೊತ್ತಾಗಬೇಕು. ಹೀಗಾಗಿ ಇವ್ರಿಗೆ ಭತ್ತದ ಪೈರನ್ನ ನಾಟಿ ಮಾಡೋ ಬಗ್ಗೆ ಸ್ಥಳೀಯ ಕೆಲ ಕೃಷಿಕರು ಕೂಡ ಸಾಥ್ ನೀಡಿದ್ರು. ಇವ್ರ ಸೂಚನೆಗಳನ್ನ ಆಲಿಸ್ತಾನೆ ಈ ಕಾಲೇಜು ಕನ್ಯೆಯರು ಮನೋರಂಜನೆಯ ಮಧ್ಯೆಯೇ ಪೈರುಗಳನ್ನ ನಾಟಿ ಮಾಡೋ ಕೆಲ್ಸ ಮಾಡಿದ್ರು.

ಈ ಮಧ್ಯೆ ಭತ್ತದ ಪೈರು ನಾಟಿ ಮಾಡುತ್ತಲೇ ಹಿಂಬದಿಯಿಂದ ಹಳ್ಳಿ ಸೊಗಡಿನ ಜನಪದ ಗೀತೆಗಳು ಕೂಡ ತೇಲಿ ಬರ್ತಿದ್ವು. ಈ ಹಾಡಿಗೆ ಧ್ವನಿಗೂಡಿಸ್ತಾ ಪೈರನ್ನ ನಾಟಿ ಮಾಡೋದ್ರಲ್ಲಿಯೇ ಈ ಕಾಲೇಜು ಕನ್ಯೆಯರು ಬ್ಯುಸಿಯಾಗಿದ್ರು. ಕರಾವಳಿಯಲ್ಲಿ ವಿಳಂಬವಾಗಿ ಬಂದ್ರೂ ವರುಣ ತನ್ನ ಆರ್ಭಟ ತೋರಿಸ್ತಿದಾನೆ. ಈ ಹಿನ್ನೆಯಲ್ಲಿ ಜಿಲ್ಲೆಯಾದ್ಯಂತ ಮುಂಗಾರು ಪ್ರವೇಶವಾಗಿದೆ. ಹೀಗಾಗಿ ತಿಂಗಳ ಕಾಲ ವಿದ್ಯಾರ್ಥಿಗಳು ಹಡೀಲು ಭೂಮಿಯಲ್ಲಿ ನಡೆಸಿದ ಶ್ರಮ ಭತ್ತದ ಪೈರು ನಾಟಿಯ ಮೂಲಕ ಅಂತ್ಯ ಕಂಢಿದೆ. ಹೀಗಾಗಿ ಇದೇ ಖುಷಿಯಲ್ಲಿ ಹೆಣ್ಮಕ್ಕಳು ಗಂಡ್ನಕ್ಕಳು ಇಡೀ ಕೆಸರಿನ ಗದ್ದೆಯಲ್ಲಿ ಸಖತ್ ಸ್ಟೆಪ್ ಹಾಕಿ ಖುಷಿ ಪಟ್ರು. ವಿದ್ಯಾರ್ಥಿಗಳು ಕೆಸರನ್ನ ಮೈ ಮೇಲೆ ಎರಚಿಕೊಂಡು ಎಂಜಾಯ್ ಮಾಡಿದ್ರು. ಇನ್ನು ಇವ್ರ ಈ ಆಟಕ್ಕೆ ಆಹಾರ ಸಚಿವ ಖಾದರ್ ಕೂಢ ಜೊತೆಯಾದ್ರು. ಮಕ್ಕಳ ಜೊತೆಗೆ ಕೆಸರಿನಲ್ಲೇ ಓಡಿ, ಎದ್ದು ಬಿದ್ದು ಮತ್ತೆ ಮತ್ತೆ ಓಡಿ ಖಾದರ್ ಸಾಹೇಬರು ಮಕ್ಕಳ ಜೊತೆಗೆ ಮಕ್ಕಳಾದ್ರು.

ಒಟ್ಟಾರೆ ತಿಂಗಳ ಕಾಲ ಮಕ್ಕಳು ನಡೆಸಿದ ಶ್ರಮಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ, ಎಕರೆಗಟ್ಟಲೇ ಗದ್ದೆಯಲ್ಲಿ ಭರ್ಜರಿ ಕೃಷಿ ಕ್ರಾಂತಿಯೇ ನಡೆದಿದೆ. ಇನ್ನೇನಿದ್ರೂ ಬೆಳೇ ಬಂಧ ಬಳಿಕ ಮುಂದಿನ ಕೆಲಸವಷ್ಠೇ. ಅಲ್ಲುಯವರಗೆ ಮಕ್ಕಳು ತಮ್ಮ ಶಿಕ್ಷಣಿಕ ಚಟುವಟಕೆಯಲ್ಲಿ ತೊಡಗಿಕೊಳ್ತಾರೆ. ಬೆಳೆ ಬಂದ ಬಳಿಕ ಮತ್ತೆ ಆಗಮಿಸಿ ಮುಂದಿನ ಕೆಲಸ ಮಾಡ್ತಾರೆ. ಒಟ್ನಲ್ಲಿ ಆ ಇಡೀ ಪಾಳು ಭೂಮಿಯಲ್ಲಿ ಆ ಮಕ್ಕಳೇ ಅಪ್ಪಟ ರೈತರು ಅನ್ನೋದು ನಿಜ.

Related posts

Leave a Reply