Header Ads
Header Ads
Header Ads
Breaking News

ಹನುಮಗಿರಿ ಕ್ಷೇತ್ರದಲ್ಲಿ ‘ಭಜನಾ ಸಮರ್ಪಣಾ’ ಸಭಾ ಕಾರ್ಯಕ್ರಮ

ಮಂಗಳೂರು ವಿಭಾಗದ ಭಜನಾ ಮಹಾಮಂಡಲ ಹಾಗೂ ಹನುಮಗಿರಿ ಕ್ಷೇತ್ರದ ಆಶ್ರಯದಲ್ಲಿ ಈಶ್ವರಮಂಗಲದ ಹನುಮಗಿರಿ ಕ್ಷೇತ್ರದ ಪುರಂದರದಾಸ ಭಜನಾಂಗಣದ ಕನಕದಾಸ ಮಂಟಪದಲ್ಲಿ ನಡೆದ ‘ಭಜನಾ ಸಮರ್ಪಣಾ’ ಸಭಾ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆಯಿತು. 

ಕಾರ್ಯಕ್ರಮವನ್ನು ಕೇಂದ್ರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ ಅವರು ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ದೇಶದಲ್ಲಿ ಭಜನೆಗೆ ದೊಡ್ಡ ಪರಂಪರೆಯಿದ್ದು, ಭಗವಂತನಲ್ಲಿ ಆತ್ಮ ನಿವೇದನೆ ಮಾಡಿಕೊಂಡು ಅನುಗ್ರಹ ಪಡೆಯಲು ಹಾಗೂ ಆಧ್ಮಾತ್ಮಿಕ ಉನ್ನತಿಗೆ ಭಜನೆ ಸರ್ವ ಶ್ರೇಷ್ಠ ಮಾಧ್ಯಮ ಎಂದು ಹೇಳಿದರು.

ಪ್ರಧಾನ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಅವರು, ಭಜನೆ ಭಕ್ತಿ ಪರಂಪರೆಯಿಮದ ಬಂದ ಬಹುದೊಡ್ಡ ಕೊಡುಗೆ, ಜ್ಞಾನಕ್ಕಿಂತಲೂ ಭಕ್ತಿ ಮನುಷ್ಯನನ್ನು ಎತ್ತರಕ್ಕೆ ಏರಿಸುತ್ತದೆ. ಭಕ್ತಿ ಇದ್ದಲ್ಲಿ ಮಾತ್ರ ಸಮರ್ಪಣೆ ಇರುತ್ತದೆ. ಭಜನೆ ವರ್ತಮಾನದ ಕೆಲಸಗಳನ್ನು ನೆನಪಿಸುವ ಕೆಲಸ ಮಾಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಭಜನಾ ಸಂಭ್ರಮ ಸ್ವಾಗತ ಸಮಿತಿಯ ಅಧ್ಯಕ್ಷ, ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಅವರು ಮಾತನಾಡಿ ಭಜನೆಗೂ ಸಾಹಿತ್ಯಕ್ಕೂ ಬಹಳಷ್ಟು ಸಂಬಂಧವಿದ್ದು, ಭಕ್ತಿ ಲೌಕಿಕವಾದ ನೋವು, ಸೋಲುಗಳನ್ನು ನಿವಾರಿಸುವ ದಾರಿಯಾಗಿದೆ ಎಂದರು.

ಈ ವೇಳೆ ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರು ಯಕ್ಷಗಾನ ಶೈಲಿಯ ಪ್ರಾರ್ಥನೆ ಹಾಡಿದರು.ಇನ್ನು ಸಂಜೆ ಶಂಖೋದ್ಘೋಷದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ವಾಮೀಜಿಗಳು ದೀಪ ಬೆಳಗುವ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನಿನೀಡಿದ್ರು. 1300 ಜಭನಾ ತಂಡಗಳ ತಲಾ ೫ ಸದಸ್ಯರಂತೆ ಒಟ್ಟು 6500 ಭಜಕರು ಭಜನಾಂಗಣದಲ್ಲಿ1300 ದೀಪಗಳನ್ನು ಬೆಳಗಿ 6ಭಜನೆಗಳನ್ನು ಹಾಡಿದ 48 ನಿಮಿಷಗಳ ಈ ವಿಶೇಷ ಭಜನಾ ಕಾರ್ಯಕ್ರಮ ಇತಿಹಾಸ ಸೃಷ್ಠಿಸಿತು. ಪುತ್ತೂರಿನ ಜಗದೀಶ್ ಆಚಾರ್ಯ ಮತ್ತು ರಾಮಕೃಷ್ಣ ಕಾಟುಕುಕ್ಕೆ ಸಂಗಡಿಗರು ಆಯ್ದ ೬ ಭಜನೆಗಳನ್ನು ವೇದಿಕೆಯಲ್ಲಿ ಹಾಡಿದರು. ಭಜನಾಂಗಣದಲ್ಲಿದ್ದ ಸಾವಿರಾರು ಸಂಖ್ಯೆಯ ಭಜಕರು ಅದನ್ನು ಏಕಕಾಲದಲ್ಲಿ ಹಾಡುವ ಅಪರೂಪವಾದ ಈ ಭಜನಾ ಸಂಭ್ರಮ ಭಜನಾ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಏಕಕಾಲದಲ್ಲಿ ಬೆಳಗಿದ ದೀಪಗಳು ಶೋಭಾಯಮಾನವಾಗಿ ಕಂಗೊಳಿಸಿತು. ಮಾತ್ರವಲ್ಲದೆ ಪ್ರೇಕ್ಷಕ ವರ್ಗದ ಮನಸೂರೆಗೊಳ್ಳುವ ಜತೆಗೆ ಭಕ್ತಿಯ ಕಡಲಲ್ಲಿ ತೇಲಿಸಿತು.

ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ನಿಧನದ ಹಿನ್ನಲೆಯಲ್ಲಿ ‘ಭಜನಾ ಸಂಭ್ರಮ’ ಕಾರ್ಯಕ್ರಮವನ್ನು ಸ್ವಾಮೀಜಿಯವರಿಗೆ ‘ಭಜನಾ ಸಮರ್ಪಣಾ’ ಕಾರ್ಯಕ್ರಮವಾಗಿ ನಡೆಸಿ ಗೌರವ ಸೂಚಿಸಲಾಯಿತು.

ಸಭಾ ಕಾರ್ಯಕ್ರಮದ ಆರಂಭದಲ್ಲಿ ಸ್ವಾಮೀಜಿಯವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಜನೆಗೈದು ಗೌರವ ಸಲ್ಲಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ಸ್ವಾಮೀಜಿಯವರಿಗೆ ನುಡಿನಮನ ಸಲ್ಲಿಸಿದರು. ಶೋಭಾಯಾತ್ರೆಯನ್ನೂ ಸಮರ್ಪಣಾ ಯಾತ್ರೆಯಾಗಿ ನಡೆಸಲಾಯಿತು. ರಾತ್ರಿ ನಡೆಯಬೇಕಿದ್ದ ‘ಆಳ್ವಾಸ್ ದೇಶಿ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮವನ್ನು ರದ್ಧುಪಡಿಸಲಾಯಿತು.

ಈ ಸಂದರ್ಭ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಮೋಹನದಾಸ್ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕಣಿಯಾರು ಚಾಮುಂಡೇಶ್ವರಿ ಕ್ಷೇತ್ರದ ಮಹಾಬಲೇಶ್ವರ ಸ್ವಾಮೀಜಿ, ಓಂಶ್ರೀ ಮಠದ ವಿದ್ಯಾರಣ್ಯ ಸರಸ್ವತಿ ಸ್ವಾಮೀಜಿ, ಮಾತಾ ಶಿವಜ್ಞಾನಮಯಿ, ಧರ್ಮಶ್ರೀ ಷ್ರತಿಷ್ಠಾನದ ಮಹಾಪೋಷಕ ಮಹಾಬಲೇಶ್ವರ ಭಟ್ ಕೊನೆತೋಟ, ಅಳದಂಗಡಿಯ ಪದ್ಮಪ್ರಸಾದ್ ಅಜಿಲ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ತಿಪ್ಪೇ ಸ್ವಾಮಿ, ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಘ ಚಾಲಕ ಡಾ.ವಾಮನ ಶೆಣೈ, ದಕ್ಷಿಣ ಪ್ರಾಂತ ಪ್ರಚಾರಕ ಗುರುಪ್ರಸಾದ್, ಶಾಸಕರಾದ ಡಾ.ಸುಧಾಕರ್ ಚಿಕ್ಕಬಳ್ಳಾಪುರ, ಸಂಜೀವ ಮಠಂದೂರು, ಎಸ್.ಅಂಗಾರ ಸುಳ್ಯ, ಹರೀಶ್ ಪೂಂಜ ಬೆಳ್ತಂಗಡಿ, ಕುಂಟಾರು ರವೀಶ್ ತಂತ್ರಿ, ಹೆಚ್ಚುವರಿ ಎಡ್ವಕೇಟ್ ಜನರಲ್ ಪ್ರಸನ್ನ ದೇಶಪಾಂಡೆ, ಕೊಡ್ಮಣ್ಣು ಕಾಂತಪ್ಪ ಶೆಟ್ಟಿ, ಸುನಿಲ್ ಆಚಾರ್ಯ, ಮಧೂರು ಕ್ಷೇತ್ರದ ಕೃಷ್ಣ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *