Breaking News

ಹನ್ನೆರಡು ಜನ ಮಹಾ ಸಾಲಗಾರರು, ಭಾರತೀಯ ಬ್ಯಾಂಕುಗಳಿಂದ ದಿವಾಳಿ ಪ್ರಕ್ರಿಯೆ ಆರಂಭ

ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಅತೀ ದೊಡ್ಡ ೧೨ ಸಾಲ ಸುಸ್ತಿಗಾರರನ್ನು ಗುರುತಿಸಿದ್ದು ಇವರ ವಿರುದ್ಧ ಸಾಲ ವಸೂಲಾತಿಯ ಅತ್ಯಂತ ಕಠಿಣ ದೀವಾಳಿ ಪ್ರಕ್ರಿಯೆಯನ್ನು ಆರಂಭಿಸುವಂತೆ ಸಾಲ ಕೊಟ್ಟ ಬ್ಯಾಂಕುಗಳಿಗೆ ಆದೇಶಿಸಿದೆ.
ಆ ಮೂಲಕ ವಿಶ್ವದ ಮೂರನೇ ಅತೀ ದೊಡ್ಡ ಅರ್ಥಿಕತೆ ಎನಿಸಿರುವ ಭಾರತದ ೧೫೦ ಶತಕೋಟಿ ಡಾಲರ್ಗಳ ಬೃಹತ್ ಸುಸ್ತಿ ಸಾಲವನ್ನು ತಗ್ಗಿಸುವ ಯತ್ನದಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದೆ. ಸುಸ್ತಿ ಸಾಲವನ್ನು ವಸೂಲು ಮಾಡುವ ಅತ್ಯಂತ ಕಠಿಣ ದೀವಾಳಿ ಪ್ರಕ್ರಿಯೆಯ ಸಲುವಾಗಿ ಕೇಂದ್ರ ಸರಕಾರ ಭಾರತೀಯ ರಿಸರ್ವ್ ಬ್ಯಾಂಕಿಗೆ ಸೂಕ್ತ ಕಾನೂನಿನ ಮೂಲಕ ಭೀಮ ಶಕ್ತಿಯನ್ನು ನೀಡಿದೆ. ಅದನ್ನು ಪ್ರಯೋಗಿಸಲು ಇದೀಗ ಆರ್ಬಿ‌ಐ ಮುಂದಾಗಿದೆ.
ಆರ್ಬಿ‌ಐ ಸುಮಾರು ೮೫ ಮಹಾ ಸಾಲ ಸುಸ್ತಿಗಾರರನ್ನು ಗುರುತಿಸಿದ್ದು ಆ ಪೈಕಿ ಬೃಹತ್ ಗಾತ್ರದ ೧೨ ಸುಸ್ತಿಗಾರರನ್ನು ಗುರುತಿಸಿ ಇದೀಗ ಅವರ ವಿರುದ್ಧ ವಸೂಲಾತಿ ಪ್ರಕ್ರಿಯೆಯನ್ನು ಆರಂಭಭಿಸಿದೆ. ಈ ೧೨ ಮಹಾ ಸಾಲ ಸುಸ್ತಿಗಾರರು ದೇಶದಲ್ಲಿನ ಪಾವತಿಯಾಗದ ಬಾಕಿ ಸಾಲದ ಶೇ. ೨೫ರಷ್ಟು ಪ್ರಮಾಣಕ್ಕೆ ಕಾರಣರಾಗಿದ್ದಾರೆ.

Related posts

Leave a Reply