Header Ads
Header Ads
Breaking News

ಹರಿಯಾಣ ತಲುಪಿದ ಪೊಳಲಿ ಕ್ಷೇತ್ರದಿಂದ ಹೊರಟ ಭಾರತ ಶಿಕ್ಷಣ ಯಾತ್ರೆ

ಬಂಟ್ವಾಳ: ಪೊಳಲಿ ಕ್ಷೇತ್ರದಿಂದ ಜು.21 ರಂದು ಹೊರಟ ಭಾರತ ಶಿಕ್ಷಣ ಯಾತ್ರೆ ಹರಿಯಾಣ ರಾಜ್ಯ ತಲುಪಿದ್ದು ಕೊಳೆಗೇರಿಯಲ್ಲಿ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದಿದೆ.

ಇಲ್ಲಿನ ರೇವಾಡಿ ಜಿಲ್ಲೆಯ ಧಾರುಹೇಡಾ ಎಂಬಲ್ಲಿನ ಟೌನ್ ಪಾರ್ಕ್ ಬಳಿಯ ಕೊಳೆಗೇರಿಗೆ ಸೋಮವಾರ ಸ್ಥಳೀಯ ಶಿಕ್ಷಣಾಭಿಮಾನಿಗಳೊಂದಿಗೆ ಭಾರತ ಶಿಕ್ಷಣ ರಥಯಾತ್ರೆಯ ತಂಡ ಭೇಟಿ ನೀಡಿತು. ಇಲ್ಲಿನ ಇನ್ನೂರ ಐವತ್ತಕ್ಕಿಂತಲೂ ಅಧಿಕ ಜೋಪಡಿಗಳಲ್ಲಿ ವಾಸಿಸುತ್ತಿರುವ ನಿವಾಸಿಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು ಕನಿಷ್ಟ ಶಿಕ್ಷಣವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಪಾಲಕರಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಅರಿವು ಹಾಗೂ ಆಸಕ್ತಿ ಇಲ್ಲದೇ ಇರುವುದರಿಂದ ಶಾಲೆಯಲ್ಲಿ ಇರಬೇಕಾದ ಮೂರರಿಂದ ಹನ್ನೆರಡು ವರ್ಷ ಪ್ರಾಯದ ಎಳೆಯ ಮಕ್ಕಳು ಬೀದಿಯಲ್ಲಿ ತಿರುಗಾಡುತ್ತಿದ್ದಾರೆ. ಶಾಲೆಗೆ ಹೋಗಬೇಕೆನ್ನುವ ಆಸೆ ಮಕ್ಕಳಲ್ಲಿ ಇದ್ದರೂ ಕೂಡ ಪೋಷಕರೇ ಮಕ್ಕಳ ಪಾಲಿಗೆ ಮುಳ್ಳಾಗಿರುವುದು ಶಿಕ್ಷಣ ಯಾತ್ರೆಯ ತಂಡದ ಅಧ್ಯಯನದಿಂದ ತಿಳಿದು ಕೊಂಡಿದೆ. ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಯ ಬಗ್ಗೆ ತಂಡ ಪಾಲಕರಿಗೆ ಮನವರಿಕೆ ಮಾಡಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಿ ಶಿಕ್ಷಣ ನೀಡುವಂತೆ ಜಾಗೃತಿ ಮೂಡಿಸಿತು.

Related posts

Leave a Reply

Your email address will not be published. Required fields are marked *