Header Ads
Header Ads
Breaking News

ಹರೇಕಳ ಜನನಿಬಿಡ ಪ್ರದೇಶದಲ್ಲಿ ಬಾರ್ ಆರಂಭಕ್ಕೆ ಯತ್ನ ಗ್ರಾಮಸ್ಥರಿಂದ ಪ್ರತಿಭಟನೆ, ಬಾರ್ ಆರಂಭಕ್ಕೆ ವಿರೋಧ

ಹರೇಕಳ ಕನ್ನಡ ಶಾಲೆ ಸಹಿತ ಜನನಿಬಿಡ ಪ್ರದೇಶದಲ್ಲೇ ಮಧ್ಯದಂಗಡಿ ಆರಂಭಿಸುವ ಹುನ್ನಾರ ನಡೆದಿದೆ, ಇದಕ್ಕೆ ಪೂರ್ವ ತಯಾರಿ ನಡೆಯುತ್ತಿದ್ದು, ಇದನ್ನರಿತ ಗ್ರಾಮಸ್ಥರು ಹೋರಾಟ ನಡೆಸಿದ ಪರಿಣಾಮ ಬಂದಿದ್ದ ಮದ್ಯವನ್ನು ಹಿಂದಕ್ಕೆ ಕಳುಹಿಸಿದ್ದಾರೆ.

100 ಮೀಟರ್ ಅಂತರವನ್ನೂ ದಾಟದ ಹರೇಕಳ ಶ್ರೀ ರಾಮಕೃಷ್ಣ ಪ್ರೌಢ ಹಾಗೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಇದಕ್ಕೆ ತಾಗಿಕೊಂಡೇ ಪಡಿತರ ಅಂಗಡಿ, ಬಸ್ ತಂಗುದಾಣ, ಅಂಚೆ ಕಚೇರಿ ಹಾಗೂ ಮುಂಭಾಗದಲ್ಲಿ ಗಣಪತಿ ಮಂದಿರ ಇರುವ ಪ್ರತಿದಿನ ನೂರಾರು ಮಹಿಳೆಯರು, ಮಕ್ಕಳ ಸಹಿತ ಗ್ರಾಮಸ್ಥರು ತಿರುಗಾಡುವ ಪ್ರದೇಶ ಇದು. ಇಲ್ಲಿ ಬಾರ್ ಆರಂಭಿಸುವ ಹುನ್ನಾರ ನಡೆದಿದ್ದು ಇದರ ವಿರುದ್ಧ ಶಾಲೆ ಹಾಗೂ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ಅಬಕಾರಿ ಇಲಾಖೆಗೆ ಪರವಾನಿಗೆ ನೀಡದಂತೆ ಮನವಿ ಮಾಡಲಾಗಿದೆ. ಈ ನಡುವೆಯೂ ಬಾರ್ ಮಾಲೀಕರು ತಮ್ಮ ಪವರ್ ಬಳಸಿದ್ದಾರೆ.

ನಿನ್ನೆ ಸಂಜೆ ಮದ್ಯದ ಬಾಟಲ್‌ಗಳುಳ್ಳ ಪೆಟ್ಟಿಗೆಗಳು ಗ್ರಾಮಕ್ಕೆ ಬಂದಿವೆ, ಇದನ್ನರಿತು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಬಂದ ಮಾಲ್ ಹಿಂದಕ್ಕೆ ಹೋಗುವ ದಾರಿ ತೋರಿಸಿದ್ದಾರೆ.

ಪಂಚಾಯಿತಿ ಸದಸ್ಯ ಬಶೀರ್ ಉಂಬುದ ಮಾತನಾಡಿ, ಗ್ರಾಮದಲ್ಲಿ ಸೌಹಾರ್ದತೆಯಿಂದ ಜೀವನ ನಡೆಸಲಾಗುತ್ತಿದೆ, ಮಂದಿರ, ಅಂಚೆ ಕಚೇರಿ, ಶಾಲೆ, ಬಸ್ ತಂಗುದಾಣ ಇರುವಂತಹ ಜನನಿಬಿಡ ಪ್ರದೇಶದಲ್ಲಿ ಬಾರ್ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಪಿ.ಮಜೀದ್, ಅಶ್ರಫ್ ಹರೇಕಳ, ಮಹಮ್ಮದ್ ಶಾಲಿ, ಹನೀಫ್, ಬದ್ರುದ್ದೀನ್, ಎಸ್.ಎಂ.ಬಶೀರ್, ಅಬ್ದುಲ್ ಸತ್ತಾರ್, ಹೇಮಲತಾ ಇನ್ನಿತರರು ಉಪಸ್ಥಿತರಿದ್ದರು.

Related posts